ಮೈಸೂರಲ್ಲಿನ ವಿವಿಧ ಸಮುದಾಯ ಭವನಗಳ ನಿರ್ವಹಣೆ ಖಾಸಗಿಯವರಿಗೆ
ಮೈಸೂರು

ಮೈಸೂರಲ್ಲಿನ ವಿವಿಧ ಸಮುದಾಯ ಭವನಗಳ ನಿರ್ವಹಣೆ ಖಾಸಗಿಯವರಿಗೆ

December 28, 2018

ಮೈಸೂರು: ಮೈಸೂರು ನಗರದ ವಿವಿಧ ಸಮುದಾಯ ಭವನಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಗುರುವಾರ ನಡೆದ ಮೈಸೂರು ನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳ ಲಾಗಿದೆ. ಇವುಗಳ ಬಾಡಿಗೆ ದರ ನಿಗದಿ ಮಾಡುವುದೂ ಸೇರಿದಂತೆ ಕೆಲವು ನಿಯಮ ರೂಪಿಸಲು ಇದೇ ವೇಳೆ ನಿರ್ಧ ರಿಸಲಾಯಿತು. ಮೈಸೂರು ನಗರಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ಮೇಯರ್ ಪುಷ್ಪ ಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ, ಉಪ ಮೇಯರ್ ಷಫೀ ಅಹ್ಮದ್ ಹಾಗೂ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಉಪಸ್ಥಿತಿಯಲ್ಲಿ ನಡೆದ ಡಿಸೆಂಬರ್ ತಿಂಗಳ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಪಕ್ಷಭೇದ ಮರೆತು ಸದಸ್ಯರು ಮೈಸೂರಿನÀ ವಿವಿಧೆಡೆ ಇರುವ ಸಮುದಾಯ ಭವನಗಳ ನಿರ್ವಹಣೆ ಪ್ರಶ್ನೆ ಎತ್ತಿದರು. ಅಯೂಬ್ ಖಾನ್, ಆರೀಫ್ ಹುಸೇನ್, ಶಾಂತಕುಮಾರಿ, ಪ್ರೇಮಾ ಶಂಕರೇಗೌಡ, ಕೆ.ವಿ.ಶ್ರೀಧರ್, ಎಂ.ವಿ.ರಾಮಪ್ರಸಾದ್, ಎಸ್‍ಬಿಎಂ ಮಂಜು ಹಾಗೂ ಇನ್ನಿತರರು ಮಾತನಾಡಿ, ಮೈಸೂರು ನಗರದಲ್ಲಿರುವ ವಿವಿಧ ಸಮುದಾಯ ಭವನಗಳಲ್ಲಿ ಹಲವು ನಿರ್ವ ಹಣೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿವೆ. ಕೆಲವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಇವುಗಳ ಸೂಕ್ತ ನಿರ್ವಹಣೆಗೆ ಖಾಸಗಿಯ ವರಿಗೆ ವಹಿಸುವುದು ಸೂಕ್ತ.

ಇದಕ್ಕಾಗಿ ಪಾಲಿಕೆ ವತಿಯಿಂದ ಇವುಗಳ ಬಾಡಿಗೆ ದರ ನಿಗದಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಕೆ.ಹೆಚ್. ಜಗದೀಶ್, ಸಮುದಾಯ ಭವನಗಳ ಸ್ಥಿತಿಗತಿ ಕುರಿತಂತೆ ಪಟ್ಟಿ ತಯಾರಿಸಿ ಮುಂದಿನ ಸಭೆಗೆ ಮಂಡಿಸಲು ಕ್ರಮ ಕೈಗೊಳ್ಳುತ್ತೇವೆ. ಬಾಡಿಗೆ ದರ ಸೇರಿ ಇನ್ನಿತರೆ ಷರತ್ತು ವಿಧಿಸುವುದು ಹಾಗೂ ಷರತ್ತು ಉಲ್ಲಂಘಿಸಿದರೆ ಕೈಗೊಳ್ಳುವ ಕ್ರಮದ ಬಗ್ಗೆಯೂ ವಿವರಣೆ ನೀಡಲಾಗುತ್ತದೆ.

Translate »