ಕೆರೆ, ರಸ್ತೆ ಒತ್ತುವರಿ, ಮೂಲ ಸೌಲಭ್ಯ ಕೊರತೆಯದ್ದೇ ಸಿಂಹಪಾಲು
ಮೈಸೂರು

ಕೆರೆ, ರಸ್ತೆ ಒತ್ತುವರಿ, ಮೂಲ ಸೌಲಭ್ಯ ಕೊರತೆಯದ್ದೇ ಸಿಂಹಪಾಲು

December 28, 2018

ಮೈಸೂರು: ಕೆರೆ, ರಸ್ತೆ ಒತ್ತುವರಿ, ಕೆರೆ ಹೂಳು ತೆಗೆದಿಲ್ಲ ಎಂಬುದು ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆಗಳ ನೇರ ಫೋನ್‍ಇನ್‍ನಲ್ಲಿ ದೂರುಗಳು ಕೇಳಿ ಬಂದವು.

ಫೋನ್‍ಇನ್‍ನಲ್ಲಿ ಸಾರ್ವಜನಿಕರು ದಾಖಲಿಸಿದ 15 ದೂರುಗಳ ಪೈಕಿ ಮೂಲ ಸೌಲಭ್ಯಗಳ ಕೊರತೆ ಬಗ್ಗೆಯೇ ಹೆಚ್ಚು ದೂರುಗಳಿದ್ದವು. ಇದನ್ನೆಲ್ಲಾ ಆಲಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಈ ದೂರುಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ತಿಂಗಳ ನೇರ ಫೋನ್‍ಇನ್ ಒಳಗಾಗಿ ಅನು ಪಾಲನಾ ವರದಿ ಸಲ್ಲಿಸುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರು ನಿವಾಸಿ ಗ್ರಾಮದಲ್ಲಿರುವ ಬೊಪ್ಪನಕಟ್ಟೆ, ಮಾಣಿಕೆರೆ ಮತ್ತು ಭೈರವಕೆರೆಗಳ ಒತ್ತುವರಿ ಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಗುತ್ತಿರುವ ಕೆರೆ ಒತ್ತುವರಿಯನ್ನು ತೆರವು ಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಪಿರಿಯಾಪಟ್ಟಣ ತಾಲೂ ಕಿನ ಕಂಪಲಾಪುರದ ಮಂಜುನಾಥ್ ಎಂಬುವರು, ಗ್ರಾಮದ ಕೆರೆಯಲ್ಲಿ ಹೂಳು ತುಂಬಿದ್ದು, ನೀರಿನ ಸಂಗ್ರಹ ಕಡಿಮೆ ಯಾಗುತ್ತಿದೆ. ಕೂಡಲೇ ಹೂಳು ತೆಗೆಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮರಟಿಕ್ಯಾತನಹಳ್ಳಿಯ ನಿವಾಸಿ ನೀಡಿದ ದೂರಿನಲ್ಲಿ, ಬಂಡಿ ರಸ್ತೆಗಳು, ಓಣಿಗಳು ಅಭಿವೃದ್ಧಿ ಕಾಣದೆ ರಸ್ತೆಗಳು ಒತ್ತುವರಿ ಯಾಗುತ್ತಿದೆ. ಒತ್ತುವರಿ ತೆರವುಗೊಳಿಸಿ ಎಂದು ಒತ್ತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಿನ ಹಂಚ್ಯಾ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಬಿಎಸ್‍ಎನ್‍ಎಲ್ ಲೇಔಟ್ ನಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ರಸ್ತೆ, ಬೀದಿ ದೀಪಗಳಿಲ್ಲ. ವಿದ್ಯಾರ್ಥಿಗಳು ಮತ್ತು ಹೆಣ್ಣು ಮಕ್ಕಳು ತಿರುಗಾಡದ ಸ್ಥಿತಿ ಇದೆ. ಕಳ್ಳತನ ನಡೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆಯೂ ಇದೆ ಎಂದು ದೂರಿದರು. ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ವೃದ್ಧಾಪ್ಯ ವೇತನ ನೀಡುತ್ತಿಲ್ಲ. ಖಾತೆ ತೆರೆಯಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿ ಕಾರಿ, ಈ ಸಂಬಂಧ ಜಿಲ್ಲೆಯ ಲೀಡ್ ಬ್ಯಾಂಕ್ ಅಧಿಕಾರಿಗಳ ಮೂಲಕ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.

ಮೈಸೂರಿನ ಹೆಚ್.ಡಿ.ದೇವೇಗೌಡ ವೃತ್ತದ ಬಳಿಯಿರುವ ಉರ್ದು ಟೀಚರ್ಸ್ ಲೇಔಟ್‍ನ ಸಮಸ್ಯೆಗಳ ಬಗ್ಗೆ ಈಗಾಗಲೇ ಫೋನ್‍ಇನ್‍ನಲ್ಲಿ ಎರಡು ಬಾರಿ ದೂರಿ ದ್ದರೂ ನಮ್ಮ ಸಮಸ್ಯೆಯನ್ನು ಸರಿಪಡಿಸ ದಿರುವ ಬಗ್ಗೆ ಅಲ್ಲಿನ ನಿವಾಸಿ ಪುಟ್ಟಹನು ಮೇಗೌಡ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಬಡಾವಣೆಯ ರಸ್ತೆಗಳಿಗೆ ಜಲ್ಲಿ ಕಲ್ಲು ಗಳನ್ನು ಹಾಕಿ 4-5 ತಿಂಗಳಾದರೂ ಡಾಂಬ ರೀಕರಣ ಮಾಡದೇ ಹಾಗೇ ಬಿಡಲಾಗಿದೆ. ಇದರಿಂದ ವಾಹನಗಳ ಓಡಾಟದ ವೇಳೆ ಜಾರಿ ಬಿದ್ದ ಪ್ರಕರಣಗಳಿವೆ. ಜೊತೆಗೆ, ಧೂಳಿನಿಂದ ವಿದ್ಯಾರ್ಥಿಗಳಿಗೆ ಗಂಟಲು ಬೇನೆ ಹಾಗೂ ವಿವಿಧ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈಗಲಾದರೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಈ ರಸ್ತೆ ಯಲ್ಲಿ ಜಲ್ಲಿ ಹಾಕಿದವರು ಯಾರೆಂಬುದೇ ಗೊತ್ತಿಲ್ಲ. ಮುಡಾದವರೋ, ಪಾಲಿಕೆಯ ವರೋ ಎಂಬುದೇ ತಿಳಿದಿಲ್ಲ ಎಂಬ ದೂರಿಗೆ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವು ದಾಗಿ ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗ ದೀಶ್ ಉತ್ತರಿಸಿದರು. ಎಡಿಸಿ ಟಿ.ಯೋಗೀಶ್, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ತಹಶೀಲ್ದಾರ್ ಟಿ.ರಮೇಶ್‍ಬಾಬು ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Translate »