ಮೈಸೂರು: 2017ರ ಎಂ.ಇಡಿ ಪರೀಕ್ಷೆ ಪ್ರಶ್ನೆಪತ್ರಿಕೆಯನ್ನೇ ಕಳೆದ ಶನಿವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 2018ರ ಎಂ.ಇಡಿ ಪರೀಕ್ಷೆಗೂ ಪುನರಾವರ್ತನೆ ಮಾಡಿರುವ ಪ್ರಸಂಗ ನಡೆದಿದೆ.
ಮೈಸೂರು ವಿಶ್ವವಿದ್ಯಾನಿಲಯವು ಶನಿವಾರ ಎಂ.ಇಡಿ ಮೊದಲ ಸೆಮಿಸ್ಟರ್‍ನ(ಸಿಬಿಸಿಎಸ್) ‘Education Introduction to Education Studies’ ವಿಷಯದ ಪರೀಕ್ಷೆ ನಡೆಯಿತು. 70 ಅಂಕಗಳಿಗೆ ನೀಡಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಣವಾಗಿದ್ದ ಪ್ರಶ್ನೆಗಳು ಕಳೆದ ಬಾರಿ 2017ರಲ್ಲಿ ನಡೆದಿದ್ದ ಈ ವಿಷಯದ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳು ಯಥಾವತ್ತಾಗಿ ಹೋಲಿಕೆಯಾಗಿರುವುದು ಕಂಡು ಬಂದಿದೆ. ಮುದ್ರಿತವಾಗಿರುವ ಪ್ರಶ್ನೆ ಪತ್ರಿಕೆಯ ಸೀರಿಯಲ್ ನಂಬರ್, ಇತರ ಸಂಖ್ಯೆಗಳು ಬೇರೆ ಬೇರೆಯಾಗಿವೆಯಾ ದರೂ, ಪ್ರಶ್ನೆಗಳು ಮಾತ್ರ 2017ರ ಪರೀಕ್ಷೆ ಯದ್ದೇ ಆಗಿದೆ. ಪರೀಕ್ಷೆ ಬರೆದು ಒಂದು ದಿನವಾದ ನಂತರ ಸೋಮವಾರ ವಿದ್ಯಾರ್ಥಿಗಳಿಗೆ ಹಳೇ ಪ್ರಶ್ನೆಗಳೇ ಪುನರಾ ವರ್ತನೆ ಆಗಿರುವುದು ತಿಳಿಯಿತು. ಪ್ರಶ್ನೆಗಳು ಪುನರಾವರ್ತನೆಯಾಗಿ ರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅವರು ‘ಮೊದಲ ಸೆಮಿಸ್ಟರ್ ಎಂ.ಇಡಿ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ 2017ನೇ ಸಾಲಿನ ಪರೀಕ್ಷಾ ಪ್ರಶ್ನೆಗಳೇ ಪುನರಾವರ್ತನೆ ಆಗಿರು ವುದು ನನ್ನ ಗಮನಕ್ಕೆ ಬಂದಿದೆ ಎಂದರು.
ಪ್ರಶ್ನೆಪತ್ರಿಕೆ ತಯಾರಿಕೆ, ಮುದ್ರಣಕ್ಕೆ ಪ್ರತ್ಯೇಕ ವಿಭಾಗಗಳಿವೆ. ಅದಕ್ಕಾಗಿ ಪ್ರತ್ಯೇಕ ಸಮಿತಿಯೂ ಇದೆ. ಆದರೂ ಹೇಗೆ ಪ್ರಶ್ನೆಗಳು ಪುನರಾವರ್ತನೆಯಾಯಿ ತೆಂಬುದರ ಬಗ್ಗೆ ಪರೀಕ್ಷಾಂಗ ಕುಲ ಸಚಿವ ಪ್ರೊ.ಜೆ. ಸೋಮಶೇಖರ್‍ರಿಂದ ವರದಿ ತರಿಸಿಕೊಂಡು ಪರಿಶೀಲಿಸಿ, ಲೋಪವೆಸಗಿದವರ ವಿರುದ್ಧ ನಿಯಮಾ ನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿ ದರು. ಈಗ ನಡೆದಿರುವ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸುವ ಬಗ್ಗೆ ಬೋರ್ಡ್ ಆಫ್ ಎಗ್ಸಾಮಿನೇಷನ್‍ನಲ್ಲಿ ಚರ್ಚಿಸಿ ತೀರ್ಮಾನಿಸ ಬೇಕಾ ಗುತ್ತದೆ. ಈ ಬಗ್ಗೆ ತಕ್ಷಣ ಸಂಬಂಧಿಸಿದ ಅಧಿಕಾರಿ ಗಳೊಂದಿಗೆ ಸಮಾಲೋಚಿಸುತ್ತೇನೆ ಎಂದೂ ಕುಲಪತಿ ಗಳು ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ದಲ್ಲಿ ಪ್ರಶ್ನೆಪತ್ರಿಕೆ ಪುನರಾವರ್ತನೆ ಆಗಿರುವುದು ಇದೇ ಮೊದಲಾಗಿದ್ದು, ಇದರಿಂದ ಪರೀಕ್ಷಾ ಪಾವಿತ್ರ್ಯತೆ ಬಗ್ಗೆ ಅನುಮಾನ ಬರಲು ಅವಕಾಶ ಕೊಟ್ಟಂತಾಗುತ್ತದೆ ಎಂದು ಕೆಲ ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದ್ದಾರೆ.