ಕೌಟಿಲ್ಯ ವಿದ್ಯಾಲಯಕ್ಕೆ ಇಂಟರ್‍ನ್ಯಾಷನಲ್ ಸ್ಕೂಲ್ ಅವಾರ್ಡ್
ಮೈಸೂರು

ಕೌಟಿಲ್ಯ ವಿದ್ಯಾಲಯಕ್ಕೆ ಇಂಟರ್‍ನ್ಯಾಷನಲ್ ಸ್ಕೂಲ್ ಅವಾರ್ಡ್

December 28, 2018

ಮೈಸೂರು: ಮೈಸೂರಿನ ಕೌಟಿಲ್ಯ ವಿದ್ಯಾಲಯವು ಪ್ರತಿಷ್ಠಿತ ‘ಬ್ರಿಟಿಷ್ ಕೌನ್ಸಿಲ್’ ನಿಂದ ನೀಡಲಾಗುವ 2018-21ನೇ ಸಾಲಿನ ‘ಇಂಟರ್ ನ್ಯಾಷನಲ್ ಸ್ಕೂಲ್ ಅವಾರ್ಡ್’ ಅನ್ನು ತನ್ನದಾಗಿಸಿ ಕೊಂಡಿದ್ದು, ಕೌಟಿಲ್ಯ ವಿದ್ಯಾಲಯಕ್ಕೆ ಸತತ ಎರಡನೇ ಬಾರಿಗೆ ಈ ಗೌರವ ಲಭಿಸಿದೆ.

ಶಿಕ್ಷಣದಲ್ಲಿ ಅಂತರರಾಷ್ಟ್ರೀಯ ಆಯಾ ಮದ ಪರಿಕಲ್ಪನೆಯನ್ನು ಅಳವಡಿಸಿ ಕೊಳ್ಳುವ ದಿಸೆಯಲ್ಲಿ ಬ್ರಿಟಿಷ್ ಕೌನ್ಸಿಲ್ 7 ವಿವಿಧ ಯೋಜನೆಗಳ ಮಾನದಂಡ ವನ್ನು ಪ್ರಶಸ್ತಿಗೆ ರೂಪಿಸಿದೆ. ಅದರ ಪ್ರಕಾರ ಕೌಟಿಲ್ಯ ವಿದ್ಯಾಲಯದ ಕಿಂಡರ್ ಗಾರ್ಟನ್‍ನಿಂದ ಪ್ರೌಢಶಾಲಾ ಮಟ್ಟದವರೆ ಗಿನ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ನಾನಾ ವಿಷಯಗಳನ್ನು ಕುರಿತು ಅಧ್ಯಯನ ನಡೆಸಿದ್ದರಲ್ಲದೆ ಇನ್ನಿತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. 7ರಲ್ಲಿ 3 ಯೋಜನೆಗಳು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳೊಂದಿಗೆ ಸಹಯೋಗ ಹೊಂದಿದ್ದು ಅಲ್ಲಿನ ವಿವಿಧ ವಿಷಯಗಳ ಅಧ್ಯಯನದಲ್ಲೂ ಕೌಟಿಲ್ಯ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದರು.

ಈ ಹಿನ್ನೆಲೆಯಲ್ಲಿ ಎರಡನೇ ಬಾರಿಯೂ ಬ್ರಿಟಿಷ್ ಕೌನ್ಸಿಲ್‍ನ ಪ್ರಶಸ್ತಿ ಲಭ್ಯವಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೌಟಿಲ್ಯ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಲ್.ಸವಿತಾ ಮತ್ತು ಇಂಟರ್‍ನ್ಯಾಷನಲ್ ಸ್ಕೂಲ್ ಅವಾರ್ಡ್ ಯೋಜನೆಯ ಸಂಯೋಜಕರಾದ ಶ್ರೀಮತಿ ಹಂಸ ಶ್ರೀಪತಿ ಅವರು ಬ್ರಿಟಿಷ್ ಕೌನ್ಸಿಲ್‍ನ ಭಾರತದ ಶಿಕ್ಷಣ ಕೇಂದ್ರದ ಮುಖ್ಯಸ್ಥ ರಾದ ಆ್ಯಂಟೋನಿಯಸ್ ರಘು ಬನ್ಸಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಶೈಕ್ಷಣಿಕ ಪಠ್ಯಕ್ರಮಗಳ ಜೊತೆಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಚಟುವಟಿಕೆಗಳಲ್ಲೂ ವಿದ್ಯಾರ್ಥಿ ಗಳನ್ನು ತೊಡಗಿಸಿ ಅವರ ಅನುಭವದ ವಿಸ್ತಾರವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಕೌಟಿಲ್ಯ ವಿದ್ಯಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದ ಗೌರವ ಲಭಿಸಿರುವುದಕ್ಕೆ ಪೋಷಕ ರಿಂದ ಅತೀವ ಮೆಚ್ಚುಗೆ ವ್ಯಕ್ತವಾಗಿದೆ.

Translate »