ನಾಳೆಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಮ್ಮೇಳನ
ಮೈಸೂರು

ನಾಳೆಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಮ್ಮೇಳನ

December 28, 2018

ಮೈಸೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಕರ್ನಾಟಕ ಘಟಕ, ತನ್ನ ಎರಡನೆಯ ರಾಜ್ಯ ಸಮ್ಮೇಳನವನ್ನು ಡಿಸೆಂಬರ್ 29 ಮತ್ತು 30ರಂದು ಮಾನಸಗಂಗೋತ್ರಿ ಆವರಣದಲ್ಲಿನ ಸೆನೆಟ್ ಭವನದಲ್ಲಿ ಆಯೋಜಿಸಿದೆ. ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಅಂಕಣಕಾರ ಹಾಗೂ ಸಾಹಿತಿ ಪ್ರೊ.ಪ್ರೇಮಶೇಖರ ಭಾಗವಹಿಸಲಿದ್ದಾರೆ.

29ರ ಬೆಳಿಗ್ಗೆ 10.30ಕ್ಕೆ ಪ್ರಾರಂಭಗೊಳ್ಳಲಿರುವ ಈ ಸಮ್ಮೇ ಳನವನ್ನು ಮೈಸೂರಿನ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್‍ರವರು ಉದ್ಘಾಟಿಸಲಿದ್ದಾರೆ. ಖ್ಯಾತ ಸಾಹಿತಿ ಹಾಗೂ ಇನ್ಫೋಸಿಸ್ ಫೌಂಡೇಷನ್ನಿನ ಅಧ್ಯಕ್ಷೆ ಪದ್ಮಶ್ರೀ ಪುರಸ್ಕøತ ಡಾ.ಸುಧಾಮೂರ್ತಿ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಖುಷಿಕುಮಾರ ಮಿಶ್ರಾ ಅವರು ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ‘ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದ ಮೇಲೆ ಸಮ್ಮೇಳನದ ಎಲ್ಲಾ ವಿಚಾರಗಳು ಚರ್ಚೆ ಯಾಗಲಿವೆ. ಉದ್ಘಾಟನೆಯ ನಂತರ, ಮಧ್ಯಾಹ್ನ 2ಕ್ಕೆ ‘ಕರ್ನಾಟಕದ ಭಾಷೆಗಳ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯ ಕುರಿತು ಧಾರವಾಡದ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ದಿವಾಕರ ಹೆಗಡೆ ವಿಚಾರ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅಭಾಸಾಪದ ಉಪಾಧ್ಯಕ್ಷ ಎಸ್.ಜಿ.ಕೋಟಿ ವಹಿಸಲಿದ್ದಾರೆ.

ಸಂಜೆ 4 ಗಂಟೆಗೆ, ಸಂಸ್ಕøತ ಸಾಹಿತ್ಯದಲ್ಲಿ ಭಾರತೀಯತೆ ವಿಷಯ ಕುರಿತು ಬೆಂಗಳೂರು ಸಂಸ್ಕøತ ವಿದುಷಿ ಡಾ. ಎಸ್.ಆರ್.ಲೀಲಾ ಪ್ರಾತ್ಯಕ್ಷಿಕೆ ಮಂಡಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮೈಸೂರಿನ ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ವಹಿಸಲಿದ್ದಾರೆ.
ಡಿಸೆಂಬರ್ 30ರಂದು, ಬೆಳಿಗ್ಗೆ 9 ಗಂಟೆಗೆ ಬಹು ಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದ್ದು, ಈ ಕವಿ ಗೋಷ್ಠಿ ಯಲ್ಲಿ ಶ್ರೀಮತಿ ಸೀತಾ ಎಂ.ಹೆಗಡೆ, ಶಿವಕುಮಾರ ಅಳಗೋಡು, ಶರಣಪ್ಪ ತಳ್ಳಿ, ಅಣ್ಣಪ್ಪ ತೀರ್ಥಹಳ್ಳಿ, ಶ್ರೀಮತಿ ಶಿವರಂಜನಿ ಎಂ.ಆರ್.ಶಿವಣ್ಣ, ಶ್ರೀಮತಿ ಕೊಟ್ಟಕೇರಿ ಯನ ಲೀಲಾ ದಯಾನಂದ, ಡಾ.ವೈ.ಎಂ.ಯಾಕೊಳ್ಳಿ (ಎಲ್ಲರೂ ಕನ್ನಡ), ಶ್ರೀಮತಿ ವೀಣಾ ಉದಯನ (ಸಂಸ್ಕøತ), ಶ್ರೀಮತಿ ವೀಣಾ ಗುಪ್ತ ಮೇದನಿ (ಹಿಂದಿ), ಡಾ.ಅಶೋಕ ರಘುನಾಥ ಅಳಗೊಂದಿ (ಮರಾಠಿ), ವಾಸುದೇವ ಶಾನಭಾಗ (ಕೊಂಕಣಿ), ಶ್ರೀಮತಿ ರೋಹಿಣಿ ಸತ್ಯ (ತೆಲುಗು), ವಿಮಲ್‍ಕುಮಾರ್ (ತಮಿಳು), ಶ್ರೀಮತಿ ಇಂದಿರಾ ಬಾಲನ್ (ಮಲೆಯಾಳಂ), ಶ್ರೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು (ತುಳು), ಬಾಚಿರಣಿ ಯಂಡ ಅಪ್ಪಣ್ಣ (ಕೊಡವ), ಶ್ರೀಮತಿ ಜ್ಯೋತ್ಸ್ನಾ ಕಡಂದೇಲು (ಕರಾಡು) – ಕವಿಗಳು ಭಾಗವಹಿಸಿ ಕವಿತೆಗಳನ್ನು ವಾಚಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿಗಳು ಹಾಗೂ ನಿವೃತ್ತ ಪ್ರಾಂಶುಪಾಲ ಹಂಪಣ್ಣ.ಏ.ಕೆ. ವಹಿಸಲಿದ್ದಾರೆ.

ನಂತರ 11.30 ಗಂಟೆಗೆ ‘ಹಿಂದಿ ಸಾಹಿತ್ಯದಲ್ಲಿ ಭಾರತೀ ಯತೆ’ ವಿಷಯ ಕುರಿತು ಮೈಸೂರು ವಿವಿಯ ವಿಶ್ರಾಂತ ಹಿಂದಿ ಪ್ರಾಧ್ಯಾಪಕರಾದ ಡಾ.ತಿಪ್ಪೇಸ್ವಾಮಿ ಉಪನ್ಯಾಸ ನೀಡಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗದ ಉಪನಿರ್ದೇಶಕ ರಾದ ಡಾ.ಚಂದ್ರಶೇಖರ ರೊಟ್ಟಿಗವಾಡ ವಹಿಸಲಿದ್ದಾರೆ.

ಡಿಸೆಂಬರ್ 30ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ಸಾಹಿತಿಗಳಾದ ಡಾ.ಎಸ್.ಎಲ್.ಭೈರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಜ್ಞಾಪ್ರವಾಹ ವೇದಿಕೆಯ ಅಖಿಲ ಭಾರತೀಯ ಸಂಯೋಜಕರಾದ ಜೆ.ನಂದಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಸಾಹಿತ್ಯ ಸಮ್ಮೇ ಳನದಲ್ಲಿ ಭಾಗವಹಿಸಲು ಇಚ್ಚಿಸುವ ಸಾಹಿತಿಗಳು, ಸಾಹಿತ್ಯಾ ಸಕ್ತರು ಕನ್ನಡ, ಹಿಂದಿ, ಸಂಸ್ಕøತ ಮತ್ತು ಆಂಗ್ಲ ಭಾಷೆ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಸಂಶೋ ಧನೆ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರತಿನಿಧಿಯಾಗಿ ತಮ್ಮ ಹೆಸರುಗಳನ್ನು ರೂ. 100/- ಪ್ರತಿನಿಧಿ ಶುಲ್ಕವನ್ನು ಪಾವತಿಸಿ, ನೊಂದಾಯಿಸಿಕೊಳ್ಳಬಹುದು. ಪ್ರತಿನಿಧಿಗಳಿಗೆ ಉಪಹಾರ, ಊಟ ಮತ್ತು ವಸತಿ ವ್ಯವಸ್ಥೆ ಇದೆ. ಮಾಹಿತಿಗೆ ಮೊ: 9880221325, 7829446123ಗೆ ಕರೆ ಮಾಡಿ ನೊಂದಾ ಯಿಸಿಕೊಳ್ಳಬಹುದು ಎಂದು ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ. ನಿಂಗರಾಜ್‍ಗೌಡ ತಿಳಿಸಿದ್ದಾರೆ.

Translate »