ಹಂಚ್ಯಾ-ಸಾತಗಳ್ಳಿ, ದೇವನೂರು ಬಡಾವಣೆಗಳ  906 ನಿವೇಶನ ಮಂಜೂರಾತಿ ರದ್ದು
ಮೈಸೂರು

ಹಂಚ್ಯಾ-ಸಾತಗಳ್ಳಿ, ದೇವನೂರು ಬಡಾವಣೆಗಳ 906 ನಿವೇಶನ ಮಂಜೂರಾತಿ ರದ್ದು

December 28, 2018

ಮೈಸೂರು: ನಿಗದಿತ ಅವಧಿ ಯೊಳಗೆ ಹಣ ಪಾವತಿಸದಿರುವುದೂ ಸೇರಿ ದಂತೆ ನಿವೇಶನ ಹಂಚಿಕೆ ಕಾಯ್ದೆಯ ನಿಯಮಗಳ ಉಲ್ಲಂಘನೆಗಾಗಿ ಮಂಜೂರಾತಿ ರದ್ದಾಗಿರುವ ಪ್ರಕರಣಗಳನ್ನು ಪತ್ತೆ ಮಾಡುವ ಕಾರ್ಯವನ್ನು ಇದೇ ಪ್ರಥಮ ಬಾರಿಗೆ ಮುಡಾ ಅಧಿಕಾರಿಗಳು ಆರಂಭಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಐಟಿಬಿ ಅವಧಿ ಸೇರಿದಂತೆ)ದ ಇತಿಹಾಸ ದಲ್ಲೇ ರದ್ದಾಗಿರುವ ನಿವೇಶನಗಳನ್ನು ಪಟ್ಟಿ ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿ ರಲಿಲ್ಲ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಎಚ್ಚೆತ್ತಿರುವ ಅಧಿಕಾರಿಗಳು ಮೈಸೂರು ನಗರದಾದ್ಯಂತ ಈವರೆಗೆ ನಿರ್ಮಿಸಿರುವ ಬಡಾವಣೆಗಳಲ್ಲಿ ಹಂಚಿಕೆ ಮಾಡಿರುವ ನಿವೇ ಶನಗಳ ಪೈಕಿ ಹಣ ಪಾವತಿಸದ ಕಾರಣ ಮಂಜೂರಾತಿ ರದ್ದು ಮಾಡಿರುವ ನಿವೇ ಶನಗಳೆಷ್ಟು ಎಂಬುದನ್ನು ಪಟ್ಟಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ವಿವಿಧ ಬಡಾವಣೆಗಳಲ್ಲಿ ರದ್ದಾಗಿರುವ ನಿವೇಶನಗಳನ್ನು ವಲಯವಾರು ಕಡತ ಗಳಲ್ಲಿ ಪರಿಶೀಲಿಸಿದಾಗ ದೇವನೂರು 2ನೇ ಹಂತದಲ್ಲಿ 16, 3ನೇ ಹಂತದ ಬಡಾವಣೆ ಯಲ್ಲಿ 751 ಹಾಗೂ ಹಂಚ್ಯಾ-ಸಾತಗಳ್ಳಿಯಲ್ಲಿ 139 ನಿವೇಶನಗಳ ಹಂಚಿಕೆಯನ್ನು ರದ್ದು ಪಡಿಸಲಾಗಿದೆ ಎಂಬ ಬಗ್ಗೆ ವಲಯಾಧಿ ಕಾರಿಗಳು ಅಂಕಿ ಅಂಶಗಳೊಂದಿಗೆ ಅಯುಕ್ತ ರಿಗೆ ಮಾಹಿತಿ ನೀಡಿದ್ದಾರೆ. ಸಿಐಟಿಬಿಯಿಂದ ಆರಂಭಿಸಿ ಈವರೆಗೆ ಮೈಸೂರಿನಲ್ಲಿ ನೂರಾರು ಬಡಾವಣೆಗಳನ್ನು ಅಭಿವೃದ್ಧಿಪಡಿಸಿರುವ ಪ್ರಾಧಿಕಾರವು ಲಕ್ಷಾಂತರ ನಿವೇಶನಗಳನ್ನು ಅರ್ಜಿ ಕರೆದು ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡುತ್ತಾ ಬಂದಿದೆಯಲ್ಲದೆ, ಷರತ್ತಿನನ್ವಯ ಹಣ ಪಾವತಿಸಿ ಲೀಸ್-ಕಂ-ಸೇಲ್ ಡೀಡ್(ಐಅS) ಹಾಗೂ ಕ್ರಯ ಪತ್ರ(ಟೈಟಲ್ ಡೀಡ್) ಪಡೆಯದಿರುವ ಕಾರಣಕ್ಕೆ ಅಂತಹವರಿಗೆ ಹಂಚಿಕೆಯಾದ ನಿವೇಶನಗಳನ್ನು ರದ್ದು ಮಾಡಿದೆ.

ಆದರೆ ಯಾವ್ಯಾವ ಬಡಾವಣೆಗಳಲ್ಲಿ ಎಷ್ಟೆಷ್ಟು ನಿವೇಶನಗಳ ಮಂಜೂರಾತಿ ರದ್ದಾಗಿವೆ ಎಂಬುದನ್ನು ಪಟ್ಟಿ ಮಾಡಿರಲಿಲ್ಲವಾದ್ದ ರಿಂದ ಆ ಬಗ್ಗೆ ಈವರೆಗೆ ಬಂದ ಯಾವ ಆಯುಕ್ತರು ಗಮನ ಹರಿಸದಿರುವುದರಿಂದ ಅಷ್ಟೂ ನಿವೇಶನಗಳು ಮರು ಹಂಚಿಕೆ ಯಾಗಿವೆಯೋ ಅಥವಾ ಹರಾಜು ಮಾಡ ಲಾಗಿದೆಯೋ ಎಂಬ ಖಚಿತ ಮಾಹಿತಿಗಳೇ ಲಭ್ಯವಾಗಿರಲಿಲ್ಲ. ಮೈಸೂರಿನಲ್ಲಿ ಭೂಮಿ ಬೆಲೆ ಗಗನಕ್ಕೇರಿರುವುದರಿಂದ ನಿವೇಶನ, ಮನೆಗಳ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಾಗಿ ರುವುದನ್ನು ಮನಗಂಡು ಹಾಗೂ ಅನಧಿ ಕೃತವಾಗಿ ಈ ನಿವೇಶನಗಳನ್ನು ವಿಲೇವಾರಿ ಮಾಡಬಹುದೆಂದು ಎಚ್ಚೆತ್ತ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ರದ್ದಾಗಿರುವ ನಿವೇ ಶನಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಉಪ ನೋಂದಣಾಧಿಕಾರಿ ಕಚೇರಿಗಳಿಂದ ಇಸಿ ಪಡೆದಿದ್ದು, ರದ್ದಾದ ನಿವೇಶನಗಳು ಮುಡಾ ಹೆಸರಿನಲ್ಲಿರುವುದು ದೃಢಪಟ್ಟಿದೆ. ಎಲ್ಲಾ 6 ವಲಯಾಧಿಕಾರಿಗಳು ಸಹ ಮಂಜೂ ರಾತಿ ರದ್ದಾಗಿರುವ ನಿವೇಶನಗಳನ್ನು ಪತ್ತೆ ಮಾಡಿ ಪಟ್ಟಿ ಮಾಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಸದ್ಯ ಒಟ್ಟು 906 ನಿವೇ ಶನಗಳು ರದ್ದಾಗಿವೆ ಎಂಬುದು ಮೊದಲ ಹಂತದಲ್ಲಿ ದೃಢಪಟ್ಟಿದೆ. ಮಂಜೂರಾತಿ ರದ್ದಾಗಿ ಬೇರೆಯವರಿಗೂ ಹಂಚಿಕೆಯಾಗದಿರುವ ಈ ನಿವೇಶನಗಳನ್ನು ಪ್ರಾಧಿಕಾರವು ಹರಾಜು ಮೂಲಕ ವಿಲೇವಾರಿ ಮಾಡಬೇಕೇ ಹೊರತು, ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಹಂಚಿಕೆ ಮಾಡಲು ಬರುವುದಿಲ್ಲ. ಒಂದು ವೇಳೆ ಹರಾಜು ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಿ ದಲ್ಲಿ ಮುಡಾಗೆ ನೂರಾರು ಕೋಟಿ ರೂ.ಗಳ ವರಮಾನ ಬಂದು, ಆರ್ಥಿಕ ಸ್ಥಿತಿ ಸುಧಾ ರಣೆಯಾಗುತ್ತದೆ. ಕೇವಲ ಮೂರು ಬಡಾ ವಣೆಗಳಲ್ಲಿಯೇ 906ರಷ್ಟು ನಿವೇಶನಗಳ ಮಂಜೂರಾತಿ ರದ್ದಾಗಿದ್ದರೆ, ಇಡೀ ಮೈಸೂರು ಬಡಾವಣೆಗಳಲ್ಲಿ ಸಾವಿರಾರು ನಿವೇಶನ ಗಳ ಮಂಜೂರಾತಿ ರದ್ದಾಗಿರುವ ಪ್ರಕರಣ ಪತ್ತೆಯಾಗಬಹುದು. ಅಲ್ಲದೆ, 9000 ನಿವೇ ಶನಗಳು ಹಾಗೂ 1,000 ಮನೆಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿವೆ ಎಂದು ಭೂ ದಾಖಲೆಗಳ ಉಪ ನಿರ್ದೇ ಶಕರ ಕಚೇರಿಯು ಯುಪಿಓಆರ್ ಮಾಹಿತಿ ಯನ್ನು ಪ್ರಾಧಿಕಾರಕ್ಕೆ ರವಾನಿಸಿದೆ.

ಈ ಆಸ್ತಿಗಳನ್ನೆಲ್ಲಾ ಹರಾಜು ಪ್ರಕ್ರಿಯೆ ಗೊಳಪಡಿಸಿದಲ್ಲಿ ಪ್ರಾಧಿಕಾರಕ್ಕೆ ಅಧಿಕ ಆದಾಯ ಬರುತ್ತದಲ್ಲದೆ, ವಿಲೇವಾರಿ ಯಾಗದೇ ಉಳಿದಿರುವ ಬಿಡಿ ನಿವೇಶನ ಗಳನ್ನು ಮಾರಾಟ ಮಾಡಿದಂತಾಗುತ್ತದೆ.

– ಎಸ್.ಟಿ.ರವಿಕುಮಾರ್

Translate »