ಹಾಸನ ಲೋಕಸಭಾ ಕ್ಷೇತ್ರಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭ
ಹಾಸನ

ಹಾಸನ ಲೋಕಸಭಾ ಕ್ಷೇತ್ರಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭ

March 19, 2019

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾ ಚುನಾವಣಾ ಧಿಕಾರಿ ಅಕ್ರಂ ಪಾಷ ಮಾ.19ರಂದು ಅಧಿ ಸೂಚನೆ ಹೊರಡಿಸಲಿದ್ದಾರೆ. ಇದರೊಂ ದಿಗೆ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭ ವಾಗಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮ ಪತ್ರಗಳನ್ನು ಸ್ವೀಕರಿಸಲಾಗುವುದು.

ಮಾ.19ರಿಂದ ಮಾ.26ರವರೆಗೆ ನಾಮ ಪತ್ರ ಸಲ್ಲಿಕೆಗೆ ಅವಕಾಶ ಇದ್ದು, 4ನೇ ಶನಿವಾರವಾದ ಮಾ.23 ರಂದು ನೆಗೋ ಷೆಬಲ್ ಇನ್ಸ್‍ಟ್ರುಮೆಂಟ್ ಕಾಯ್ದೆಯ ನ್ವಯ ಹಾಗೂ ಮಾ.24ರಂದು ಭಾನು ವಾರ ರಜೆ ಕಾರಣ ಆ ದಿನಗಳಲ್ಲಿ ನಾಮ ಪತ್ರ ಸ್ವೀಕಾರಕ್ಕೆ ಅವಕಾಶ ಇರುವುದಿಲ್ಲ.

ಅಭ್ಯರ್ಥಿಗಳು ಮಾ.19ರಿಂದ 26ರವರೆಗೆ ಸರ್ಕಾರಿ ಕೆಲಸದ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದು. ಒಬ್ಬರು ಅಭ್ಯರ್ಥಿ ಎರಡು ಕ್ಷೇತ್ರದಲ್ಲಿ ಮಾತ್ರ ನಾಮಪತ್ರ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಸಲ್ಲಿಸಬೇಕಾದ ವಿವರ: ನಿರಾಪೇಕ್ಷಣಾ ಪತ್ರ (No Due Certificate), ಮತದಾರ ಪಟ್ಟಿಯ ದೃಢೀ ಕರಣ ಪ್ರತಿ (Certified Extract of Electoral Roll) LAC No, Part No, SI No., ಸೂಚಕರ ಮತದಾರರ ಪಟ್ಟಿಯ Pಚಿಡಿಣ ಓo & Sಐ ಓo. ನಮೂ ದಿಸಬೇಕು. ನಮೂನೆ ಎ ಮತ್ತು ಬಿ (Form A & B), ಜಾತಿ ದೃಢೀಕರಣ ಪತ್ರ (Caste Certificate) ಸಲ್ಲಿಸಬೇಕು. ರೂ.25 ಸಾವಿರ ಠೇವಣಿ ಮಾಡಬೇಕು, ಚುನಾ ವಣಾ ವೆಚ್ಚ 70 ಲಕ್ಷ ರೂಪಾಯಿಗಳ ವರೆಗೆ ವೆಚ್ಚ ಮಾಡಬಹುದಾಗಿದೆ. ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಾಕಿ ಇದ್ದಲ್ಲಿ ನಾಮಪತ್ರ ಹಿಂಪಡೆಯುವ ದಿನಾಂಕದಿಂದ ಮತ ದಾನದ ಎರಡು ದಿನ ಮುಂಚಿತವಾಗಿ 3 ಬಾರಿ ಪತ್ರಿಕೆಗಳಲ್ಲಿ ಈ ಬಗ್ಗೆ ತಾವೇ ಜಾಹೀರಾತು ಮೂಲಕ ಈ ವಿಷಯ ತಿಳಿಯಪಡಿಸಬೇಕು.
ನಿಷೇಧಾಜ್ಞೆ ಜಾರಿ: ಲೋಕಸಭಾ 2019ರ ಸಾರ್ವತ್ರಿಕ ಚುನಾವಣೆ ನಿಮಿತ್ತ ಹಾಸನ ಲೋಕಸಭಾ ಚುನಾವಣೆಗೆ ಮಾ.19ರಿಂದ ಮಾ.26ವರೆಗೆ ನಾಮಪತ್ರ ಸಲ್ಲಿಕೆ. ಮಾ.27 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ ಹಾಗೂ ಮಾ.29 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ.

ಸದರಿ ಪ್ರಕ್ರಿಯೆಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವುದರಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂಪಡೆಯುವ ಕಾರ್ಯಗಳು ಸುಗಮ ಮತ್ತು ಶಾಂತಿ ಯುತವಾಗಿ ನಡೆಸಬೇಕಿರುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭ ವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾ.19 ರಂದು ಬೆಳಿಗ್ಗೆ 6 ಗಂಟೆಯಿಂದ ಮಾ.29ರ ಸಂಜೆ 6 ಗಂಟೆವರೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿಯ ಆವರಣದ 100 ಮೀಟರ್ ವ್ಯಾಪ್ತಿಯ ಸುತ್ತ ನಿಷೇಧಾಜ್ಞೆ ಜಾರಿ ಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾ ಧಿಕಾರಿ ಅಕ್ರಂ ಪಾಷ ಆದೇಶಿಸಿದ್ದಾರೆ.

ನಿಷೇಧಾಜ್ಞೆಯ ಅವಧಿಯಲ್ಲಿ ಐದು ಮಂದಿಗಿಂತ ಹೆಚ್ಚು ಮಂದಿ ಗುಂಪು ಗಾರಿಕೆ ನಡೆಸುವುದು, ಆಯುಧ/ಶಸ್ತ್ರಾಸ್ತ್ರ ಗಳು ಮತ್ತು ಮಾರಕಾಸ್ತ್ರಗಳನ್ನು ಹೊತ್ತು ತಿರುಗುವುದನ್ನು ಅನುಮತಿ ಇಲ್ಲದೆ ಸಾಗಾಟ ಮಾಡುವುದನ್ನು ನಿರ್ಬಂಧಿಸಿದೆ. ನಾಮ ಪತ್ರ ಸಲ್ಲಿಸುವ ಕೇಂದ್ರದ 100 ಮೀಟರ್ ಪರಿಧಿಯಲ್ಲಿ ಚುನಾವಣೆ ನಡೆಯುವ ಕಾರ್ಯದ ಮೇಲೆ ನಿರತರಾಗಿರುವ ಅಧಿ ಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿ ಗಳು, ಅನುಮತಿ ಹೊಂದಿದ ರಕ್ಷಣಾ ಇಲಾಖೆ ಯವರು ಹಾಗೂ ಅನುಮತಿ ಪಡೆದ ಮಾಧ್ಯಮದವರನ್ನು ಹೊರತುಪಡಿಸಿ ಉಳಿದ ಎಲ್ಲಾ ತರಹದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.

ಯಾವುದೇ ರೀತಿಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ರೀತಿಯಲ್ಲಿ ವರ್ತಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳನ್ನು ವಿರೂಪ ಮಾಡು ವುದನ್ನಾಗಲೀ ಅಥವಾ ನಷ್ಟಗೊಳಿಸು ವುದಾಗಲೀ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾ ಧಿಕಾರಿ ಅಕ್ರಂ ಪಾಷ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಚುನಾವಣಾ ಲೆಕ್ಕ ವೀಕ್ಷಕರ ನೇಮಕ
ಹಾಸನ: ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗದಿಂದ ಇಬ್ಬರು ಲೆಕ್ಕ ವೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಐಆರ್‍ಎಸ್ ಅಧಿಕಾರಿ ವಿವೇಕ್ ಗುಪ್ತ (ಇ-ಮೇಲ್ ವಿಳಾಸ [email protected]) ಅವರನ್ನು ನೇಮಿಸಲಾಗಿದೆ. ಇವರಿಗೆ ಲೈಸನಿಂಗ್ ಅಧಿಕಾರಿಯಾಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕುಮಾರ ಸ್ವಾಮಿ ಮೊ. ಸಂ. 9480625384 ನಿಯೋಜಿಸಲಾಗಿದೆ.

ಇದೇ ರೀತಿ ಕಡೂರು, ಅರಸೀಕೆರೆ, ಬೇಲೂರು, ಹಾಸನ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಲೆಕ್ಕ ವೀಕ್ಷಣೆಗೆ ರಾಜೀವ್ ಮಗೋ (ಇ-ಮೇಲ್ ವಿಳಾಸ [email protected]) ಅವರನ್ನು ನೇಮಿಸಲಾಗಿದೆ. ಅವರಿಗೆ ಲೈಸನಿಂಗ್ ಅಧಿಕಾರಿ ಯಾಗಿ ನಗರದ ಗ್ರಾಮೀಣ ಯೋಜನಾ ಇಲಾಖೆಯ ಸಹಾ ಯಕ ನಿರ್ದೇಶಕ ಪ್ರಸನ್ನಾ ಮೊ. 8971310437 ಅವರನ್ನು ನಿಯೋಜಿಸಲಾಗಿದೆ.

Cvigil Application: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲು, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಹಾಯಕ ಚುನಾವಣಾ ಧಿಕಾರಿಗಳ ಹಂತದಲ್ಲಿ ಸಾರ್ವಜನಿಕರು ದೂರುಗಳನ್ನು ದಾಖ ಲಿಸುವ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಈ ಅಪ್ಲಿ ಕೇಷನ್ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಕುರಿತು ನೇರವಾಗಿ ದೂರುಗಳನ್ನು ದಾಖಲಿಸಬಹುದಾಗಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಕೋರಿದ್ದಾರೆ.

ಸುವಿಧ ತಂತ್ರಾಂಶದ ಬಳಕೆ: 16-ಹಾಸನ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಆಯಾ ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲಿಯೇ ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆ/ಸಮಾರಂಭಗಳನ್ನು ನಡೆಸಲು ಏಕ ಗವಾಕ್ಷಿ ಮಾದರಿಯ ಅನುಮತಿಯನ್ನು ಪಡೆದುಕೊಳ್ಳಬೇಕಾಗಿ ರುತ್ತದೆ. ಜಿಲ್ಲಾ ಮಟ್ಟದಲ್ಲಿ ಚುನಾವಣಾ ಪ್ರಚಾರಕ್ಕಾಗಿ ವಾಹನ ಬಳಕೆ ಹಾಗೂ ಹೆಲಿಕಾಪ್ಟರ್ ಲ್ಯಾಂಡಿಂಗ್ ಅನುಮತಿಯನ್ನು ಚುನಾವಣಾಧಿಕಾರಿಗಳ ಹಂತದಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ.

1950 ಜಿಲ್ಲಾ ಮಾಹಿತಿ ಕೇಂದ್ರ (ಮತದಾರರ ಸಹಾಯವಾಣಿ 1950): ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಿಲ್ಲಾ ಮಾಹಿತಿ ಕೇಂದ್ರವೆಂಬ ಮತದಾರರ ಸಹಾ ಯವಾಣಿ 1950 ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ. ಈ ಕೇಂದ್ರಕ್ಕೆ ಮತದಾರರು/ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದ ಹಾಗೂ ಇತರೆ ಚುನಾವಣೆ ಸಂಬಂಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಹಾಸನದಲ್ಲಿ ಮಹಿಳಾ ಅರೆ ಮಿಲ್ಟ್ರಿ ಪಡೆಯಿಂದ ಪಥ ಸಂಚಲನ
ಹಾಸನ: ಲೋಕಸಭೆ ಚುನಾವಣೆ ಏಪ್ರಿಲ್ 18 ರಂದು ನಡೆಯಲಿದ್ದು, ಶಾಂತಿಯುತ- ಸೌಹಾರ್ದ ಮತದಾನ ನಡೆಸುವ ನಿಟ್ಟಿನಲ್ಲಿ ಇತರೆ ಭಾಗದಿಂದ ಶಸ್ತ್ರ ಸಜ್ಜಿತ ಮಹಿಳಾ ಅರೆ ಮಿಲ್ಟ್ರಿ ಪಡೆ (ಸಿಆರ್‍ಪಿಎಫ್) ಆಗಮಿಸಿದ್ದು, ಸೋಮವಾರ ಸಂಜೆ ನಗರದ ಸೂಕ್ಷ್ಮ ರಸ್ತೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಪ್ರಕಾಶ್‍ಗೌಡ ನೇತೃತ್ವದಲ್ಲಿ ಪಥ ಸಂಚಲನ ನಡೆಸಲಾಯಿತು.

ನಗರದ ಚನ್ನವೀರಪ್ಪ ಕಲ್ಯಾಣ ಮಂಟಪದಿಂದ ಹೊರಟ ಶಸ್ತ್ರ ಸಜ್ಜಿತ ಮಹಿಳಾ ಅರೆ ಮಿಲ್ಟ್ರಿ ಪಡೆಯಿಂದ ಪಥ ಸಂಚಲನ ಹೊಸಲೈನ್ ರಸ್ತೆ, ಶಾದಿಮಹಲ್, ಚಿಪ್ಪಿನಕಟ್ಟೆ, ಪೆನ್‍ಷೆನ್ ಮೊಹಲ್ಲಾ, ಕುಂಬಾರ ಬೀದಿ, ಅರಳೇಪೇಟೆ ಸೇರಿದಂತೆ ಸೂಕ್ಷ್ಮ ಜಾಗಗಳಲ್ಲಿ ನಡೆಯಿತು. ಜೊತೆಗೆ ಪೊಲೀಸ್ ಪಡೆ ಕೂಡ ಭಾಗವಹಿಸಿತ್ತು. 2019 ಲೋಕಸಭೆ ಚುನಾವಣೆಯಲ್ಲಿ ಯಾವ ಗೊಂದಲ ಇಲ್ಲದೇ ಶಾಂತಿಯುತ-ಸೌಹಾರ್ದಯುತ ಮತದಾನ ನಡೆಸುವ ಹಿನ್ನಲೆ ಯಲ್ಲಿ ಪೊಲೀಸ್ ಸಜ್ಜಾಗಿದೆ ಎಂಬ ಸಂದೇಶವನ್ನು ಸಾರ್ವಜನಿ ಕರಲ್ಲಿ ಜಾಗೃತಿ ಮೂಡಿಸುವ ಮೂಲಕ ನೂರಕ್ಕೆ ನೂರರಷ್ಟು ಮತದಾನ ನಡೆಸಲು ಪಥ ಸಂಚಲನ ನಡೆಸಲಾಯಿತು.

Translate »