ಬೆಂಗಳೂರು, ಜೂ. 17- ನಮ್ಮ ಸರ್ಕಾರ ಮಾಡಿದ್ದ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಸರ್ಕಾರ ಅದರ ಖ್ಯಾತಿಯನ್ನು ತನ್ನ ಹೆಸರಿಗೆ ಹಾಕಿಕೊಳ್ಳುತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಟೀಕಿಸಿದರು.
ಈಗಾಗಲೇ ನನಗೆ 65 ವರ್ಷ. ದೇವರು ಆಯಸ್ಸು ಕೊಟ್ಟರೆ ಇನ್ನೂ 10-15ವರ್ಷ ಬದುಕಬಹುದಷ್ಟೇ ಎಂದರು. ಇದೇ ವೇಳೆ ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನದಿಂದಲೇ ಮಾತನಾ ಡಿದ ಅವರು, ಮಾಧ್ಯಮದವರು ತಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ. ಆದರೆ ದೇಶವನ್ನು ಉಳಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ದೇಶವನ್ನು ಹಾಳುಮಾಡುವ ಕೆಲಸಕ್ಕೆ ಕೈಹಾಕಬಾರದು ಎಂದರು.
ಇದರಲ್ಲಿ ವರದಿಗಾರರ ತಪ್ಪು ಇಲ್ಲ, ಆದರೆ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿ ರುವ ಮಾಲೀಕರು ಈ ಬಗ್ಗೆ ಆತ್ಮಾವ ಲೋಕನ ಮಾಡಿಕೊಳ್ಳಬೇಕು. ಯಾರನ್ನೋ ಮೆಚ್ಚಿಸಲು ದೇಶವನ್ನು ಯುದ್ಧದ ವಿಷಯ ದಲ್ಲಿ ಹಾಳುಗೆಡವಬಾರದು. ನಾವು ಎಲ್ಲ ವನ್ನೂ ನೋಡಿ ಆಗಿದೆ. ಸರ್ಕಾರಗಳನ್ನು ಓಲೈಕೆ ಮಾಡುವ ಕೆಲಸವನ್ನು ಮಾಧ್ಯಮ ಗಳು ಮಾಡುತ್ತಿವೆ. ಇವತ್ತಿನ ಸರ್ಕಾರ ದಂತೆ ಲೂಟಿ ಹೊಡೆಯುವ ಕೆಲಸ ತಾವು ಮಾಡಿಲ್ಲ. ಯಾವ ದೇವರ ಮುಂದೆ ಬೇಕಾ ದರೂ ಪ್ರಮಾಣ ಮಾಡುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬ್ರಾಹ್ಮಣರೂ ಅಲ್ಲ, ಮಾಧ್ಯಮಗಳನ್ನು ಓಲೈಸುವ ನಾಯಕರೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮಾರ್ಮಿಕವಾಗಿ ನುಡಿದರು.
ಹಿಂದುತ್ವದ ಹೆಸರಿನಲ್ಲಿ ಹಳ್ಳಿಯಲ್ಲಿರುವ ದಲಿತ, ಒಕ್ಕಲಿಗರನ್ನು ಹತ್ಯೆಗೈಯುವ ಕೆಲಸ ನಡೆಯುತ್ತಿದೆ. ಸಂಘರ್ಷ ಎಬ್ಬಿಸಲಾಗುತ್ತಿದೆ. ಮಾಧ್ಯಮಗಳ ಮೂಲಕ ಯುವಕರ ಹಾದಿ ತಪ್ಪಿಸುತ್ತಿದ್ದಾರೆ. ನಮ್ಮ ಜವಾಬ್ದಾರಿ ಅರಿಯ ಬೇಕು ಎಂದು ಪರೋಕ್ಷವಾಗಿ ಸಂಘ ಪರಿ ವಾರ ಮತ್ತು ಬಿಜೆಪಿಯನ್ನು ಟೀಕಿಸಿದರು.
25 ಸಾವಿರ ಕೋಟಿ ರೂ.ಗಳನ್ನು ಸಾಲ ಮನ್ನಾಕ್ಕಾಗಿ ಹಣ ಹೊಂದಿಸಿದ್ದೆ. ಆದರೆ ಈ ಸರ್ಕಾರ ಅದನ್ನು ಜಾರಿ ಮಾಡಿಲ್ಲ. ಮತ್ತೆ ರೈತರು ಸಾಲ ಮಾಡುತ್ತಿದ್ದಾರೆ. ರೈತರು ಸಾಲ ಮಾಡದಂತಹ ವ್ಯವಸ್ಥೆ ದೇಶದಲ್ಲಾಗಬೇಕು. ಪಕ್ಷದ ದುರದೃಷ್ಟವೋ, ನಮ್ಮ ದುರದೃಷ್ಟವೋ ದೇವೇಗೌಡರು ಕೇವಲ ಹತ್ತು ತಿಂಗಳು ಪ್ರಧಾನಿಯಾಗಿ, ಹದಿನೆಂಟು ತಿಂಗಳು ಮುಖ್ಯಮಂತ್ರಿಯಾಗಿ ಹೊರಬಂದರು. ಒಮ್ಮೆ ಇಪ್ಪತ್ತೊಂದು ತಿಂಗಳು, ಮತ್ತೊಮ್ಮೆ ಹದಿನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ನಾನು ಹೊರಬರ ಬೇಕಾಯಿತು. ಐದು ವರ್ಷ ಸಂಪೂರ್ಣ ಅಧಿಕಾರ ನೀಡಿದ್ದರೆ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಇನ್ನಷ್ಟು ದುಡಿಯುತ್ತಿ ದ್ದೆವು. ಮುಂದಿನ ದಿನಗಳಲ್ಲಿ ಹೀಗಾಗ ದಂತೆ ನೋಡಿಕೊಳ್ಳಿ ಎಂದು ಜನರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.
ಪಕ್ಷ ಸಂಘಟನೆ ಶಕ್ತಿಯೇ ಚುನಾವಣೆಗೆ ಸ್ಪರ್ಧಿಸಲು ಇರಬೇಕಾದ ಅರ್ಹತೆ
ಬೆಂಗಳೂರು,ಜೂ.17- ಪಕ್ಷ ಸಂಘಟನೆ ಶಕ್ತಿಯೇ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಇರ ಬೇಕಾದ ಅರ್ಹತೆ. ಇದೇ ಮಾನದಂಡವನ್ನಾ ಧರಿಸಿ ಶಾಸಕರ ಅಭಿಪ್ರಾಯ, ಸಲಹೆ ಸೂಚನೆ ಸಂಗ್ರಹಿಸಲಾಗಿದೆ ಎಂದು ಜೆಡಿಎಸ್ ಶಾಸ ಕಾಂಗ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಆ ಮೂಲಕ ತೆನೆ ಹೊತ್ತ ಮಹಿಳೆಯ ಗಟ್ಟಿತನಕ್ಕೆ ಮುಂದಿನ ರಾಜಕೀಯ ಪಕ್ಷಕ್ಕೆ ಪಕ್ಷ ಸಂಘಟನೆಯೇ ಆಧಾರವೆಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ದೇವನ ಹಳ್ಳಿಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಆ ಮೂಲಕ ವಿಧಾನ ಪರಿಷತ್ತು ಪ್ರವೇಶಿಸುವ ತೆನೆಹೊತ್ತ ಮಹಿಳೆಯ ಹುರಿಯಾಳು ಯಾರೆಂಬುದು ಕುತೂಹಲ ಮೂಡಿಸಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಜೂ.29ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಕೋಲಾ ರದ ಉದ್ಯಮಿ ಗೋವಿಂದರಾಜು ನಡುವೆ ಪ್ರಬಲ ಪೈಪೆÇೀಟಿ ಇದ್ದು, ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡು ವುದು ಖಚಿತ ಎಂದು ಜೆಡಿಎಸ್ ಮೂಲ ಗಳು ತಿಳಿಸಿವೆ. ಉತ್ತರ ಕರ್ನಾಟಕ ಭಾಗಕ್ಕೆ ಅವಕಾಶ ನೀಡಬೇಕು ಹಾಗೂ ಕೋಲಾರ ಜಿಲ್ಲೆಯ ಪಕ್ಷದ ಶಾಸಕರು ಹಾಗೂ ಮುಖಂ ಡರು ನಿನ್ನೆ ಗೌಡರನ್ನು ಭೇಟಿ ಮಾಡಿ ಗೋವಿಂದ ರಾಜುಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ.
ಹಾಲಿ ಸದಸ್ಯ ಟಿ.ಎ.ಶರವಣ ಸಹ ಪ್ರಬಲ ಆಕಾಂಕ್ಷಿ ಯಾಗಿದ್ದು, ಮತ್ತೊಂದು ಅವಧಿಗೆ ಅವಕಾಶ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಇರುವ ಒಂದು ಸದಸ್ಯ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದು, ಅಭ್ಯರ್ಥಿ ಆಯ್ಕೆ ಅಧಿಕಾರ ದೊಡ್ಡಗೌಡರಿಗೆ ನೀಡಲಾಗಿದೆ. ನಾಮಪತ್ರ ಸಲ್ಲಿಸಲು ಗುರುವಾರ ಅಂತಿಮ ದಿನವಾಗಿರುವುದರಿಂದ ಬುಧವಾರ ರಾತ್ರಿ ವೇಳೆಗೆ ಪಕ್ಷದ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.