ಕೂರ್ಗಳ್ಳಿ ಕೆರೆಯೊಡಲು ಕಲುಷಿತ!
ಮೈಸೂರು

ಕೂರ್ಗಳ್ಳಿ ಕೆರೆಯೊಡಲು ಕಲುಷಿತ!

June 18, 2020

ಮೈಸೂರು, ಜೂ. 17(ಪಿಎಂ)- ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು… ಪ್ಲಾಸ್ಟಿಕ್ ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳ ರಾಶಿ… ಹೀಗೆ ಬಹು ಬಗೆಯ ತ್ಯಾಜ್ಯ ಕೂರ್ಗಳ್ಳಿ ಕೆರೆಯ ಒಡಲು ಸೇರುತ್ತಿದೆ. ಒಂದು ಕಾಲದಲ್ಲಿ ಜನ-ಜಾನುವಾರಗಳ ದಾಹ ನೀಗಿಸುವ ಜೀವ ಜಲವಾಗಿದ್ದ ಕೆರೆ ನೀರು, ಈಗ ಕಲು ಷಿತಗೊಂಡು ವಿಷ ಕಾರುವಂತಾಗಿದೆ.

ಮಾನವನ ಅಭಿವೃದ್ಧಿ ಪರಿಕಲ್ಪನೆ ಪ್ರಕೃತಿಯನ್ನೇ ನುಂಗುವ ಮಟ್ಟಕ್ಕೆ ತಲು ಪಿದೆ. ಆ ಮೂಲಕ ತನ್ನ ವಿನಾಶಕ್ಕೆ ತಾನೇ ಕಾರಣವಾಗುತ್ತಿರುವ ಅರಿವಿದ್ದರೂ ಮಾನವ ತನ್ನ ದುರಾಸೆ ಕೈಗೆ ಬುದ್ಧಿ ಕೊಟ್ಟ ಪರಿ ಣಾಮ ಪರಿಸರದ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ ಎಂಬುದಕ್ಕೂ ಕೂರ್ಗಳ್ಳಿ ಕೆರೆ ಒಂದು ಸ್ಪಷ್ಟ ನಿದರ್ಶನ.

ಹಿಂದೆ ಕೂರ್ಗಳ್ಳಿ ಸೇರಿದಂತೆ ಸುತ್ತ ಮುತ್ತ ಹಳ್ಳಿಗಳ ಬದುಕಿನ ಜೀವನಾಡಿ ಯಾಗಿದ್ದ ಕೂರ್ಗಳ್ಳಿ ಕೆರೆ ದಿನೆ ದಿನೇ ಮಲೀನವಾಗುತ್ತಿದ್ದು, ಜಲಚರಗಳು ನರಳುತ್ತಿದ್ದರೆ, ಹಕ್ಕಿ ಪಕ್ಷಿಗಳು ಇತ್ತ ಸುಳಿ ಯಲು ಹಿಂದೇಟು ಹಾಕುತ್ತಿವೆ.

ಮೈಸೂರಿನ ಹೊರ ವಲಯದಲ್ಲಿ ಕೆಆರ್‍ಎಸ್ ರಸ್ತೆಯ ಸಮೀಪ 21 ಎಕರೆ ಪ್ರದೇಶದಲ್ಲಿ ಕೂರ್ಗಳ್ಳಿ ಕೆರೆ ಇದ್ದು, ಹಿಂದಿನ ಪ್ರಾಕೃತಿಕ ಸೌಂದರ್ಯ ಕಳೆದು ಕೊಂಡು ಮಾಲೀನ್ಯವನ್ನೇ ಮೈಗೊತ್ತಿ ಕೊಂಡಿದೆ. ಕೂರ್ಗಳ್ಳಿ ಗ್ರಾಮದ ಒಳ ಚರಂಡಿ ನೀರು, ಕೈಗಾರಿಕೆಗಳ ಕಲುಷಿತ ನೀರು ಮಾತ್ರವಲ್ಲದೆ, ಪ್ಲಾಸ್ಟಿಕ್ ಸೇರಿದಂತೆ ಬಗೆಬಗೆಯ ತ್ಯಾಜ್ಯಗಳು ಕೆರೆಯನ್ನು ವಿಷ ಕಾರಿ ಮಾಡುತ್ತಿವೆ. ಇದಕ್ಕೆಲ್ಲಾ ಕಾರಣ ಆಧು ನೀಕತೆ ಭರದಲ್ಲಿ ಬದಲಾಗುತ್ತಿರುವ ಮಾನ ವನ ಚಟುವಟಿಕೆ ಎನ್ನದೇ ವಿಧಿಯಿಲ್ಲ.

2012-13ರಲ್ಲಿ ಕೂರ್ಗಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಕೂರ್ಗಳ್ಳಿ ಗ್ರಾಮದ ತ್ಯಾಜ್ಯ ನೀರಿಗಾಗಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಅರೆಬರೆ ಕಾಮಗಾರಿ ಮಾತ್ರ ನಡೆದು ಸ್ಥಗಿತಗೊಂಡಿದೆ. ಪರಿಣಾಮ ಗ್ರಾಮದ ತ್ಯಾಜ್ಯ ನೀರು ಕೆರೆಯ ಮಡಿಲು ಸೇರು ವಂತಾಗಿದೆ. ಮಳೆ ನೀರು ಹರಿದು ಹೋಗಲು ನಮ್ಮ ಪೂರ್ವಿಕರು ಬೆಳ ವಾಡಿಯಿಂದ ಕೂರ್ಗಳ್ಳಿ ಕೆರೆಯವರೆಗೆ ರಾಜಕಾಲುವೆ ನಿರ್ಮಿಸಿದರು. ಆದರೆ ಅದಕ್ಕೆ ಒಳಚರಂಡಿ ನೀರು ಸೇರು ವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಕೆರೆಯ ನೀರಿನ ಬಣ್ಣ ಕಲುಷಿತ ಗೊಂಡು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೆರೆ ಯಲ್ಲಿ ಗಿಡ-ಗಂಟಿ ವ್ಯಾಪಕವಾಗಿ ಬೆಳೆದು ಕೆರೆಯೇ ಕಾಣದಂತಾಗಿದೆ. ಕೆರೆ ಸುತ್ತಲು ಕಟ್ಟಡಗಳ ಅವಶೇಷಗಳು ರಾಶಿ ಹಿಡಿ ಯುತ್ತಿದೆ. ಕೆರೆ ಮಧ್ಯ ಭಾಗದಲ್ಲಿ ಕರ್ನಾ ಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಪೂರ್ವ, ಪಶ್ಚಿಮಾ ಭಿಮುಖವಾಗಿ ಜೋಡಿ ರಸ್ತೆ ನಿರ್ಮಿಸಿದೆ. ಇದರಿಂದ ಕೆರೆ ಇಬ್ಭಾಗವಾಗಿದೆ. ಒಂದು ಕಾಲದಲ್ಲಿ ತಿಳಿಯಾಗಿ ಕುಡಿಯಲು ಯೋಗ್ಯ ವಾಗಿದ್ದ ನೀರು ಈಗ ಮಲಿನಗೊಂಡಿದೆ. ಈ ಹಿಂದೆ ಕೂರ್ಗಳ್ಳಿ ಮಾತ್ರವಲ್ಲದೆ, ಮೈದನಹಳ್ಳಿ, ಬೆಳವಾಡಿ, ಹೂಟಗಳ್ಳಿ ಗ್ರಾಮಗಳ ಜನ-ಜಾನುವಾರಗಳಿಗೆ ಕುಡಿ ಯುವ ನೀರು ಒದಗಿಸುವ ಜೀವ ಸೆಲೆ ಯಾಗಿದ್ದ ಕೆರೆ ಈಗ ಕಲುಷಿತಗೊಂಡಿದೆ.

Translate »