ರಾಜ್ಯದ ವಿವಿಧೆಡೆ ಭಾರೀ ಆಲಿಕಲ್ಲು ಮಳೆ
ಮೈಸೂರು

ರಾಜ್ಯದ ವಿವಿಧೆಡೆ ಭಾರೀ ಆಲಿಕಲ್ಲು ಮಳೆ

April 19, 2020

ಬೆಂಗಳೂರು,ಏ.18- ರಾಜ್ಯದ ಹಲವಾರು ಜಿಲ್ಲೆ ಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆ ಬಿದ್ದಿರುವುದು ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಕೆ.ಹೊಸೂರು ಗ್ರಾಮದ ಮನೆಯ ಮೇಲ್ಛಾವಣಿ ಮೇಲಂತೂ ಸುಮಾರು ಒಂದು ಕೆಜಿ ಗಾತ್ರದ ಆಲಿ ಕಲ್ಲು ಬಿದ್ದು ಗ್ರಾಮಸ್ಥರನ್ನು ಅಚ್ಚರಿಗೀಡು ಮಾಡಿದೆ. ಹುಬ್ಬಳ್ಳಿಯಲ್ಲೂ ಶನಿವಾರ ಸಂಜೆ ಭಾರೀ ಆಲಿಕಲ್ಲು ಮಳೆ ಸುರಿದಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಹಾಗೂ ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ದಿನಗಳಿಂದ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

Translate »