ಮೈಸೂರು, ಏ.18-ಕೋವಿಡ್-19ನಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ ಮೈಸೂರು ವಿಶ್ವ ವಿದ್ಯಾನಿಲಯ ವತಿಯಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ಪ್ರಾರಂಭಿಸಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಸೆಮಿಸ್ಟರ್, ವಿಷಯ ಹಾಗೂ ವಿಭಾಗಗಳ ಅನುಗುಣವಾಗಿ ವಾಟ್ಸ್‍ಆಪ್ ಗ್ರೂಪ್ ಮಾಡಿ ಪಾಠ, ಪಿ.ಪಿ.ಟಿ, ವಿಡಿಯೋಗಳು ಸೇರಿ ಇತರೆ ಓದಲು ಬೇಕಾಗುವ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗು ತ್ತಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ ವೆಬ್ ಸೈಟ್‍ನಲ್ಲಿ ವೆಬ್‍ಲಿಂಕ್ ಮೂಲಕ ಇ-ಸೋರ್ಸಸ್, ಇ-ಬುಕ್, ಇ-ಪ್ರಿಂಟ್‍ಗಳನ್ನು ಪಡೆದುಕೊಳ್ಳಬಹುದು. ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಸಂದಿಗ್ಧ ಪರಿಸ್ಥಿತಿ ಬಗ್ಗೆ ಹೆದರದೆ, ತಮ್ಮ ಓದಿನ ಬಗ್ಗೆ ಗಮನಹರಿಸು ವಂತೆ ಮಾಡಲು ಬೋಧಕ ಸಿಬ್ಬಂದಿಗಳು ತಮ್ಮ ವಿದ್ಯಾರ್ಥಿಗಳಿಗೆ ಮೆಸೇಜ್ ಅಥವಾ ಕರೆ ಮಾಡುವುದರ ಮೂಲಕ ಮಾರ್ಗದರ್ಶನ ಮಾಡುತ್ತಿದ್ದಾರೆ.