ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂಜರಿಕೆ; ಸಿದ್ದರಾಮಯ್ಯರ ರಾಜಕೀಯ ಪುಕ್ಕಲುತನ
ಮೈಸೂರು

ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂಜರಿಕೆ; ಸಿದ್ದರಾಮಯ್ಯರ ರಾಜಕೀಯ ಪುಕ್ಕಲುತನ

October 12, 2021

ಮೈಸೂರು, ಅ.11(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂಜರಿಯುತ್ತಿದ್ದು, ಇದು ಅವರ ರಾಜಕೀಯ ಪುಕ್ಕಲು ತನವನ್ನು ತೋರಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಸಿದ್ದರಾಮಯ್ಯ ಅವ ರನ್ನು ದೆಹಲಿಗೆ ಆಹ್ವಾನಿಸಿದ ವೇಳೆ ರಾಷ್ಟ್ರ ರಾಜಕಾರಣಕ್ಕೆ ಬರುವುದೇ ಆದರೆ ನನಗೆ ಪ್ರಧಾನಿ ಹುದ್ದೆಯನ್ನು ನೀಡಿದರೆ ಬರುವು ದಾಗಿ ಸೋನಿಯಾರಿಗೆ ಹೇಳಬಹುದಿತ್ತು. ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ದೇವೇ ಗೌಡರೂ ದೇಶದ ಪ್ರಧಾನಿಯಾಗಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ಅಂತಹ ಪರಮೋಚ್ಛ ಪ್ರಧಾನಿ ಸ್ಥಾನದಲ್ಲಿ ದೇವೇಗೌಡ, ನರೇಂದ್ರ ಮೋದಿ ತೋರಿದ ಧೈರ್ಯ ಸಿದ್ದರಾಮಯ್ಯರಿಗೆ ಇಲ್ಲ. ಅಂದ ಮೇಲೆ ಮೋದಿ ವಿರುದ್ಧ ಏಕೆ ಗುಡುಗ ಬೇಕು ಎಂದು ಪ್ರಶ್ನಿಸಿದರು.
ದೇವೇಗೌಡರು ಪ್ರಧಾನಿ ಯಾದಾಗ ಕನ್ನಡಿಗರೊಬ್ಬರು ಪ್ರಧಾನಿಯಾದ ಖುಷಿಗೆ ನಾನು ಸಿಹಿ ವಿತರಿಸಿದ್ದೆ. ಅದೇ ರೀತಿ ಸಿದ್ದರಾಮಯ್ಯ ಅವರೂ ಪ್ರಧಾನಿಯಾಗಲಿ ಸಂಭ್ರಮಿ ಸೋಣ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿಗೆ ಈಗ ಇದ್ದಕ್ಕಿದ್ದಂತೆ ಯಡಿಯೂರಪ್ಪರ ಮೇಲೆ ಹುಸಿ ಪ್ರೇಮ ಬಂದಿದೆ. ಬಿಎಸ್‍ವೈ ಪರ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಗಾಗಲೀ, ಜೆಡಿಎಸ್‍ಗಾಗಲೀ ಯಾವುದೇ ಲಾಭವಿಲ್ಲ. ಬಿಜೆಪಿಗೆ ನಷ್ಟವೂ ಇಲ್ಲ ಎಂದರು.

ಯಡಿಯೂರಪ್ಪರನ್ನು ಓಲೈಕೆ ಮಾಡಿ ದರೆ ವೀರಶೈವರ ಮತಗಳು ಬರುತ್ತವೆಂಬ ಯೋಚನೆ ಅವರಿಗಿರಬಹುದು. ಆದರೆ ವೀರಶೈವ ಸಮಾಜ ಅತ್ಯಂತ ಬುದ್ಧಿವಂತ ಸಮಾಜ. ಯಡಿಯೂರಪ್ಪನವರ ಪರ ಮಾತ ನಾಡಿದರೆ ಓಟು ಸಿಗುತ್ತದೆಂದು ಭಾವಿಸಿದರೆ ಅದು ಅವರ ದಡ್ಡತನ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ದಡ್ಡರು ಎಂದು ಲೇವಡಿ ಮಾಡಿದರು. ಯಡಿ ಯೂರಪ್ಪನವರ ಆಪ್ತನ ಮನೆ ಮೇಲೆ ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಕಂಡು ಬರುತ್ತಿದೆ ಎಂಬ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಯನ್ನು ಟೀಕಿಸಿದ ಎಚ್.ವಿಶ್ವನಾಥ್, ಐಟಿ ದಾಳಿಯನ್ನು ಸ್ವತಃ ಯಡಿಯೂರಪ್ಪನವರೇ ಸ್ವಾಗತಿಸಿದ್ದಾ ರೆಂದ ಮೇಲೆ ನಿಮ್ಮದೇನು ಕೊಸರು ಎಂದು ಅವರಿಬ್ಬರ ವಿರುದ್ಧ ಕಿಡಿಕಾರಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ 326 ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿತ್ತು. ಈಗ ಅವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವು ದನ್ನು ನೋಡಿದರೆ ಅವರು ಯಾರ ಪರ ಇದ್ದಾರೆ ಎಂಬುದನ್ನು ಸ್ಪಷ್ಪಪಡಿಸಲಿ ಎಂದರು.

Translate »