ಕಾಂಗ್ರೆಸ್‍ನ ಹಿಜಾಬ್, ಬಿಜೆಪಿಯ ಕೇಸರಿ ಶಾಲು ಓಟ್ ಬ್ಯಾಂಕ್ ಹುನ್ನಾರ
ಮೈಸೂರು

ಕಾಂಗ್ರೆಸ್‍ನ ಹಿಜಾಬ್, ಬಿಜೆಪಿಯ ಕೇಸರಿ ಶಾಲು ಓಟ್ ಬ್ಯಾಂಕ್ ಹುನ್ನಾರ

February 24, 2022

ಮೈಸೂರು, ಫೆ.23(ಎಂಟಿವೈ)- ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹಿಜಾಬ್ ವಿಚಾರ ಪ್ರಸ್ತಾಪ ಮಾಡುತ್ತಿದ್ದರೆ, ಬಿಜೆಪಿ ಕೇಸರಿ ಶಾಲು ಮುಂದಿಟ್ಟು ಕೊಂಡು ಓಟ್ ಬ್ಯಾಂಕ್ ಗಟ್ಟಿ ಗೊಳಿಸಿಕೊಳ್ಳುವ ಹುನ್ನಾರ ನಡೆ ಸುತ್ತಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕಿಡಿಕಾರಿದ್ದಾರೆ.

ಮೈಸೂರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ರುವ ಖಾಸಗಿ ರೆಸಾರ್ಟ್ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಹಿತ ಕಾಪಾಡು ವಲ್ಲಿ ಆಡಳಿತಾರೂಢsÀÀ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಜವಾಬ್ದಾರಿಯಿಂದ ನಡೆದುಕೊಳ್ಳು ತ್ತಿಲ್ಲ. ಉಭಯ ಪಕ್ಷಗಳು ಕೇವಲ ಓಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿವೆ. ಇದರಿಂದ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಜನಸಾಮಾನ್ಯರು, ಅಮಾಯಕರು ಬೆಲೆ ತೆರುವಂತಾ ಗಿದೆ. ಅಧಿಕಾರದಲ್ಲಿರುವ ಬಿಜೆಪಿ ವೈಫಲ್ಯ ಎದ್ದು ಕಾಣುತ್ತಿದ್ದರೆ, ವಿರೋಧ ಪಕ್ಷ ತನ್ನ ಜವಾಬ್ದಾರಿ ಅರಿ ಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ರಾಜಕೀಯ ಲಾಭಕ್ಕಾಗಿ ಪಕ್ಷಗಳು ನಡೆಸುತ್ತಿರುವ ಮೇಲಾಟದಿಂದಾಗಿ ಸಮಾಜದ ಸಾಮರಸ್ಯ ಕದಡುತ್ತಿದೆ. ಈ ವೇಳೆ ಸಂಭವಿಸುವ ಕೋಮು ಗಲಭೆ, ಘರ್ಷಣೆಯಂತಹ ಪ್ರಕರಣದಲ್ಲಿ ಬಲಿಯಾಗುತ್ತಿರುವವರು ಬಡ ಕುಟುಂಬದವರು ಹಾಗೂ ಜನಸಾಮಾನ್ಯರೇ ಆಗಿದ್ದಾರೆ. ಇಂತಹ ಘಟನೆಗಳಲ್ಲಿ ಯಾವ ರಾಜಕಾರಣಿಯ ಮಕ್ಕಳು ಸಾಯುತ್ತಿಲ್ಲ. ಬದಲಿಗೆ ಅಮಾಯಕರೇ ಪ್ರಾಣ ಬಿಡುತ್ತಿದ್ದಾರೆ. ಅಮಾಯಕ ಕುಟುಂಬದವರ ಬಲಿದಾನದಿಂದ ಅಧಿಕಾರದ ಸುಪ್ಪತ್ತಿಗೆಯಲ್ಲಿ ಇವರು ಕೂರುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರಲ್ಲದೆ, ರಾಜ್ಯದಲ್ಲಿ ಗೃಹ ಇಲಾಖೆಗೆ ಮಾತ್ರವಲ್ಲ, ಇಡೀ ಸರ್ಕಾರಕ್ಕೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಸರ್ಕಾರವೇ ಕೋಮಾ ಸ್ಥಿತಿಗೆ ದೂಡಲ್ಪಟ್ಟಿದೆ ಎಂದು ಆಕ್ರೋಶ ಹೊರ ಹಾಕಿದರು.

ಅಧಿವೇಶನಕ್ಕೆ ಕಪ್ಪುಚುಕ್ಕೆ: ವಿಧಾನಸಭೆಯ ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸಿದ್ದು, ವಿಧಾನಮಂಡಲದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ. ದಾಖಲೆಗಳನ್ನು ಇಟ್ಟು ಚರ್ಚೆಯಲ್ಲಿ ಭಾಗವಹಿಸಲು ನಾನು ಹೋಗಿದ್ದೆ. ಆದರೆ ಜೆಡಿಎಸ್ ಪಕ್ಷ ಚರ್ಚೆಯಲ್ಲಿ ಭಾಗವಹಿಸಬಾರದೆಂದು ಕಾಂಗ್ರೆಸ್ ಮಾಡಿರುವ ಅಹೋರಾತ್ರಿ ಧರಣಿಯ ಹುನ್ನಾರವಿದು. ಜನಪರವಾದ ಹಲವು ವಿಚಾರಗಳ ಬಗ್ಗೆ ಹೋರಾಟ ಮಾಡದೆ ವಿಧಾನಸಭೆಯ ಅಧಿವೇಶನದಲ್ಲಿ ಸಮಯ ವ್ಯರ್ಥ ಮಾಡಿದರು. ಯಾವ ಪುರುಷಾರ್ಥಕ್ಕಾಗಿ ಇವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

25 ವರ್ಷವಾದರೂ ಮೇಕೆದಾಟು ಆಗಲ್ಲ: ಈಗ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಗೆ ಹೊರಟಿದ್ದಾರೆ. ಇನ್ನು 25 ವರ್ಷವಾದರೂ ಮೇಕೆದಾಟು ಯೋಜನೆ ಅನುಷ್ಠಾನ ಆಗಲ್ಲ. ಎತ್ತಿನಹೊಳೆ ಯೋಜನೆ ಇನ್ನು ಸಕಲೇಶಪುರದಲ್ಲೇ ನಿಂತಿದೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‍ನವರು ಎಷ್ಟೇ ಪಾದಯಾತ್ರೆ ಮಾಡಿದರೂ ಮೇಕೆದಾಟು ಯೋಜನೆ ಸುಲಭವಾಗಿ ಜಾರಿಗೊಳ್ಳುವುದಿಲ್ಲ ಎಂದರು.

Translate »