ಮೈಸೂರಲ್ಲಿ ರಂಗೇರಿದ ಹೋಳಿ ಹಬ್ಬ
ಮೈಸೂರು

ಮೈಸೂರಲ್ಲಿ ರಂಗೇರಿದ ಹೋಳಿ ಹಬ್ಬ

March 18, 2022

ಮೈಸೂರು, ಮಾ.17(ಜಿಎ)- ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರವiದಿಂದ ಆಚರಿಸಲಾಗು ತ್ತಿದ್ದು, ಮೈಸೂರಿನಲ್ಲಿಯೂ ಹೋಳಿ ಹಬ್ಬ ರಂಗೇರಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಬಣ್ಣಗಳ ಹಬ್ಬ ಹೋಳಿಯನ್ನು ಅದ್ದೂರಿಯಾಗಿ ಆಚರಿ ಸಲಿಲ್ಲ. ಆದರೆ ಈ ವರ್ಷ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಎರಡನೇ ದಿನವಾದ ನಾಳೆ (ಮಾ.18) ಮತ್ತಷ್ಟು ಅದ್ಧೂರಿಯಾಗಿ ಹೋಳಿ ಹಬ್ಬ ವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತದೆ.

ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಶ್ರೀ ಆಯಿ ಮಾತಾಜೀಯವರ ದೇವಸ್ಥಾನದ ಆವರಣದಲ್ಲಿ ಸೀರ್ವಿ ಸಮಾಜದ ವತಿಯಿಂದ ಹೋಳಿ ಹಬ್ಬ ಆಚರಿ ಸಲಾಯಿತು. ಸೀರ್ವಿ ಸಮಾಜದ ಸದಸ್ಯರು ರಾಜ ಸ್ಥಾನದ ಸಂಪ್ರದಾಯಕ ಉಡುಗೆಗಳನ್ನು ಧರಿಸಿ ಶ್ರದ್ಧಾ-ಭಕ್ತಿಯಿಂದ ಕಾಮನ ದಹನ ಮಾಡುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರ ಶೇಖರ್ ಕಾಮ ದಹನಕ್ಕೆ ಚಾಲನೆ ನೀಡಿದರು. ಕಳೆದ 35 ವರ್ಷಗಳಿಂದ ಶ್ರೀ ಆಯಿ ಮಾತಾಜೀ ದೇವ ಸ್ಥಾನದ ಆವರಣದಲ್ಲಿ ಸೀರ್ವಿ ಸಮಾಜದ ಸಾವಿರಾರೂ ಮಂದಿ ಸಾಂಪ್ರದಾಯಕವಾಗಿ ಹೋಳಿ ಹಬ್ಬ ಆಚರಿ ಸುತ್ತಿದ್ದಾರೆ ಎಂದು ಸೀರ್ವಿ ಸಮಾಜದ ಅಧ್ಯಕ್ಷ ಎಂ.ಆರ್. ಚೌಧರಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಎರಡು ದಿನಗಳ ಕಾಲ ಹೋಳಿ ಹಬ್ಬ ಆಚರಿಸ ಲಾಗುತ್ತಿದ್ದು, ಮೊದಲ ದಿನವಾದ ಇಂದು ಶ್ರೀ ಆಯಿ ಮಾತಾಜೀ ವಿಶೇಷ ಪೂಜೆಯನ್ನು ಸಲ್ಲಿಸ ಲಾಯಿತು. ನಂತರ ಒಣ ಹುಲ್ಲು, ಬೆರಣಿ ಮತ್ತು ಸೌದೆಗಳನ್ನು ಬಳಸಿ ಮಾಡಲಾಗಿದ್ದ ಕಾಮ ದೇವರ ಪ್ರತಿಕೃತಿಯ ಸುತ್ತ ನೃತ್ಯ ಮಾಡಿದ್ದರು. ದೇವಸ್ಥಾನದ ಆವರಣದಲ್ಲಿ ಒಂದು ವೃತ್ತಕಾರವನ್ನು ನಿರ್ಮಿಸ ಲಾಗಿದ್ದು, ಅದರ ಸುತ್ತಲೂ ಸಾಂಪ್ರದಾಯಕ ಉಡುಪು ಗಳನ್ನು ಧರಿಸಿರುವವರು ದೇವರ ಗೀತೆಗಳನ್ನು ಹಾಡುತ್ತ ಪ್ರದಕ್ಷಿಣೆ ಹಾಕಿದರು. ಅವರಿಗೆ ರಾಜಸ್ಥಾನದಿಂದ ಬಂದಿರುವ ಡೋಲು ವಾದಕರು ಸಾಥ್ ನೀಡಿದರು.ನೃತ್ಯ ಮಾಡಿಕೊಂಡು ಕಾಮನ ಪ್ರತಿಕೃತಿ ಬಳಿ ಬಂದು ಅಲ್ಲಿಯೂ ಏಳು ಸುತ್ತುಗಳ ನೃತ್ಯ ಮಾಡಿ ದರು. ನಂತರ ಮುಖ್ಯ ಅತಿಥಿಗಳು ಮತ್ತು ಸೀರ್ವಿ ಸಮಾಜದ ಸದಸ್ಯರು ಕಾಮ ದಹನ ಮಾಡಿದರು. ಕಳೆದ ಎರಡು ವರ್ಷ ಕೊರೊನಾ ಮಾರ್ಗ ಸೂಚಿ ಗಳ ಅನ್ವಯ ಹೋಳಿಯನ್ನು ಆಚರಿಸಲು ಸಾಧ್ಯವಾಗ ಲಿಲ್ಲ. ಆದರೆ ಈ ಬಾರಿ ಕೊರೊನಾ ಮಾರ್ಗಸೂಚಿಯ ಅಡಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಬಣ್ಣದ ಆಟ ಆಡುವವರು ದೇವಾಲಯದ ಹೊರ ಭಾಗದಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಕಾರ್ಯಕ್ರಮದಲ್ಲಿ ಸೀರ್ವಿ ಸಮಾಜದ ಸಂಸ್ಥಾಪಕ ಸುರರಾಮ್ ಸೋಲಂಕಿ, ಕಾರ್ಯದರ್ಶಿ ಸುಭಾಶ್ ಕಾಗ್, ಜಂಟಿ ಕಾರ್ಯದರ್ಶಿ ಗುಡಾದ್ ರಾಮ್, ಉಪಾಧ್ಯಕ್ಷ ಪ್ರಭುರಾಮ್ ಪವಾರ್, ನೃತ್ಯ ಸಮಿತಿಯ ಅಧ್ಯಕ್ಷ ಚೆನ್ನರಾಮ್, ಉಪಾಧ್ಯಕ್ಷ ಧಾರ್ಮಿ ಚಾಂದ್ ಹಮಾದ್, ಮಾಜಿ ಅಧ್ಯಕ್ಷ ಮೋಹನ್ ಲಾಲ್ ಸೋಲಂಕಿ ಮತ್ತು ರೂಪರಾಮ್ ಸೇರಿದಂತೆ ಮತ್ತಿತ ರರು ಉಪಸ್ಥಿತರಿದ್ದರು. ಮೈಸೂರಿನ ಇತರ ಭಾಗ ಗಳಲ್ಲಿಯೂ ಅಲ್ಲಲ್ಲಿ ಪರಸ್ಪರ ಬಣ್ಣ ಎರಚಿಕೊಂಡು, ಬಣ್ಣ ಬಳಿದುಕೊಂಡು ಹೋಳಿ ಹಬ್ಬವನ್ನು ಆಚರಿ ಸಿದ ಬಗ್ಗೆ ವರದಿಗಳು ಬಂದಿದೆ.

Translate »