ಮಂಡ್ಯ ಜಿಲ್ಲಾದ್ಯಂತ ಪುನೀತ್ ‘ಜೇಮ್ಸ್’ ವೈಭವ
ಮಂಡ್ಯ

ಮಂಡ್ಯ ಜಿಲ್ಲಾದ್ಯಂತ ಪುನೀತ್ ‘ಜೇಮ್ಸ್’ ವೈಭವ

March 18, 2022

ಮಂಡ್ಯ, ಮಾ.17(ಮೋಹನ್‍ರಾಜ್)- ಕನ್ನಡ ಚಿತ್ರರಂಗದ ಖ್ಯಾತ ನಟ, ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ 47ನೇ ವರ್ಷದ ಹುಟ್ಟುಹಬ್ಬವನ್ನು ಮಂಡ್ಯ ನಗರ ಸೇರಿದಂತೆ ಜಿಲ್ಲಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಪ್ಲೆಕ್ಸ್ ಹಾಗೂ ಕಟೌಟ್‍ಗಳನ್ನು ಹಾಕಿ ಅದಕ್ಕೆ ಹೂಮಾಲೆ, ಕ್ಷೀರಾಭಿಷೇಕ ನಡೆಸಿ, ಅನ್ನಸಂತರ್ಪಣೆ ಮಾಡಿ ನೆಚ್ಚಿನ ನಟನನ್ನು ಸ್ಮರಿಸಿದರು.
ಮಂಡ್ಯ ನಗರದ ವಿವಿಧ ವೃತ್ತಗಳಲ್ಲಿ ಪುನೀತ್ ರಾಜ್‍ಕುಮಾರ್ ಪ್ಲೆಕ್ಸ್‍ಗಳಿಗೆ ಹಾರ ಹಾಕಿ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು.
ಮಂಡ್ಯ ನಗರದ ಕಾಳಿಕಾಂಬ ದೇಗುಲ ದಿಂದ ಸಂಜಯ ಚಿತ್ರಮಂದಿರದವರೆಗೆ ಆಟೋಗಳಲ್ಲಿ ಬೃಹತ್ ನಕ್ಷತ್ರಗಳ ಮೆರವಣಿಗೆ ಜೊತೆಗೆ ಡೊಳ್ಳು ಕುಣಿತ, ಪೂಜಾ ಕುಣಿತದೊಂದಿಗೆ ಸಾಗಿದ್ದು, ನೋಡುಗರ ಗಮನ ಸೆಳೆಯಿತು.

ಇನ್ನು ಮಂಡ್ಯದಲ್ಲಿ ಪುನೀತ್ ನಟನೆಯ ಕಡೆಯ ಚಿತ್ರ ಜೇಮ್ಸ್ ಚಲನಚಿತ್ರಕ್ಕೆ ಅತ್ಯು ತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಂಡ್ಯ ನಗರದ ಸಂಜಯ ಹಾಗೂ ಗುರುಶ್ರೀ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾ ಗಿದ್ದು, ಮುಂಜಾನೆ 6 ಗಂಟೆಯಿಂದಲೇ ಷೋಗಳು ಆರಂಭವಾಗಿದ್ದವು. ಎರಡು ಚಿತ್ರ ಮಂದಿರದ ಮೊದಲ ದಿನ ಹತ್ತು ಷೋಗಳ ಟಿಕೆಟ್ ಅನ್ನು ಎರಡು ದಿನಗಳ ಮುಂಚೆಯೇ ನೀಡಿದ್ದರಿಂದ ಟಿಕೆಟ್ ಸೋಲ್ಡೌಟ್ ಆಗಿತ್ತು.

ಆಟೋ ಚಾಲಕರಿಂದ ಅಪ್ಪು ಜನ್ಮದಿನಾ ಚರಣೆ: ಅಶೋಕನಗರದ ಜಿಲ್ಲಾಸ್ಪತ್ರೆ ರಸ್ತೆಯಲ್ಲಿರುವ ಶ್ರೀರಾಮಾಂಜನೇಯ ಆಟೋ ನಿಲ್ದಾಣದಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆಟೋ ಚಾಲಕರು ಮತ್ತು ಮಾಲೀಕರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಜನ್ಮ ದಿನಾಚರಣೆ, ಜೇಮ್ಸ್ ಚಲನಚಿತ್ರ ಬಿಡು ಗಡೆ ಸಂಭ್ರಮ, ಆಟೋಚಾಲಕರಿಗೆ ಸಮ ವಸ್ತ್ರ ವಿತರಣೆ, ಅನ್ನಸಂತರ್ಪಣೆ ಕಾರ್ಯ ಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಕನ್ನಡ ಸಿನಿಮಾರಂಗದ ಮೇರು ಪ್ರತಿಭೆ ಅಪ್ಪು ಅವರ ಸಮಾಜ ಮುಖಿ ಚಿಂತನೆ ಎಲ್ಲರಿಗೂ ಮಾದರಿ ಯಾಗಿದೆ ಎಂದರು.

ಡಾ.ಪುನೀತ್‍ರಾಜ್‍ಕುಮಾರ್ ಅವರ ಜನ್ಮದಿನ ನಿಮಿತ್ತ ಆಟೋ ಚಾಲಕರಿಗೆ ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯಿಂದ ಸಮವಸ್ತ್ರ ವಿತರಿಸಿ, ಅನ್ನಸಂತ ರ್ಪಣೆ ಮಾಡಲಾಗುತ್ತಿದೆ, ಆಟೋ ಚಾಲ ಕರ ಸೇವಾಕಾರ್ಯ ಅವಿಸ್ಮರಣೀಯ ವಾಗಿದೆ ಎಂದು ತಿಳಿಸಿದರು.
ಬಳಿಕ ಡಿಹೆಚ್‍ಓ ಡಾ.ಧನಂಜಯ್ ಮಾತನಾಡಿ, ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನ ಆಚ ರಿಸಿ, ಹಲವು ಸೇವಾ ಕಾರ್ಯ ಮಾಡು ತ್ತಿರುವುದು ಉತ್ತಮವಾಗಿದೆ ಎಂದರು.

ಜಿಲ್ಲಾಸ್ಪತ್ರೆಗೆ ಬಡರೋಗಿಗಳು- ಪೋಷಕರು ಬರುತ್ತಾರೆ, ಅಟೋ ನಿಲ್ದಾಣದ ಚಾಲಕರು ಅವರ ಸೇವೆ ಮಾಡುತ್ತಿದ್ದೀರಿ, ಹಣ ಕೊಡುತ್ತಾರೋ ಇಲ್ಲವೋ ಒಟ್ಟಿನಲ್ಲಿ ನಿಮ್ಮ ಸೇವೆ ಅನನ್ಯ ಎಂದು ನುಡಿದರು.

ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ. ಮಾದೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀರಾಮಾಂಜ ನೇಯ ಆಟೋ ನಿಲ್ದಾಣದ ಆಟೋ ಚಾಲಕ ರಾದ ಶಶಿ, ರಾಜೇಶ್, ಸಚಿನ್, ರಘು, ವೆಂಕ ಟೇಶ್, ಲಕ್ಷ್ಮಣ ಹಾಗೂ ಅಶೋಕ್ ಜಯರಾಂ ಹಿತೈಷಿಗಳ ಬಳಗದ ರವಿ, ಫೈನಾನ್ಸ್ ಚಂದ್ರ, ಗಿರೀಶ್ ಫಾದರ್ ಮತ್ತಿತರರಿದ್ದರು.

ನಾಗಮಂಗಲ ವರದಿ: ಪಟ್ಟಣ ಸೇರಿ ದಂತೆ ತಾಲೂಕಿನಾದ್ಯಂತ ಹಲವು ಕಡೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸಿಹಿ ಹಂಚಿ ಅನ್ನದಾನ ಏರ್ಪಡಿಸಿದ್ದರು.

ಪುನೀತ್ ರಾಜಕುಮಾರ್ ನಟಿಸಿರುವ ಜೇಮ್ಸ್ ಚಿತ್ರ ಬಿಡುಗಡೆಯಾದ ಹಿನ್ನೆಲೆ ಯಲ್ಲಿ ಕಳೆದ ಒಂದು ವಾರದಿಂದಲೇ ವೆಂಕಟೇಶ್ವರ ಚಿತ್ರಮಂದಿರದ ಮುಂಭಾಗ ಪುನೀತ್ ರಾಜಕುಮಾರ್‍ರ ಕಟೌಟ್‍ಗಳು ರಾರಾಜಿಸುತ್ತಿದ್ದವು. ಇಂದು ಕೇಶವ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಟ್ರ್ಯಾಕ್ಟರ್ ಮೇಲೆ ಪುನೀತ್ ಭಾವಚಿತ್ರ ಇಟ್ಟು ಪಟ್ಟ ಣದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯ ಗಳೊಂದಿಗೆ ಮೆರವಣಿಗೆ ಮೂಲಕ ವೆಂಕ ಟೇಶ್ವರ ಚಿತ್ರಮಂದಿರ ಮುಂಭಾಗ ಪುನೀತ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಹಾಲಿನ ಅಭಿಷೇಕ ಮಾಡಿದರು.

Translate »