ಮಡಿಕೇರಿ ಮಾರ್ಗ ಮಂಗಳೂರು-ಮೈಸೂರು ರಸ್ತೆ  ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಆದೇಶ
ಕೊಡಗು

ಮಡಿಕೇರಿ ಮಾರ್ಗ ಮಂಗಳೂರು-ಮೈಸೂರು ರಸ್ತೆ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಆದೇಶ

March 18, 2022

ಮಡಿಕೇರಿ, ಮಾ.17- ಕರಾವಳಿ ನಗರಿ ಮಂಗಳೂರಿ ನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಸಚಿವರನ್ನು ಭೇಟಿ ಮಾಡಿದ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃ ತ್ವದ ನಿಯೋಗ ಈಗಿರುವ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಸಾಕಷ್ಟು ಅಪಘಾತಗಳು ಸಂಭವಿ ಸುತ್ತಿರುವ ಕುರಿತು ಮನವರಿಕೆ ಮಾಡಿತು.

ಈಗಿರುವ ಹಾಲಿ ಹೆದ್ದಾರಿಯಲ್ಲಿ (ಎನ್‍ಹೆಚ್ 275) ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಭಾಗದಲ್ಲಿ ಎರಡು ಪಥಗಳ ರಸ್ತೆ ಮಾತ್ರ ಇದ್ದು ಪದೇ ಪದೆ ಅಪಘಾತಗಳು ಸಂಭವಿಸು ತ್ತಿವೆ. ಮಾಣಿಯಿಂದ ಮಡಿಕೇರಿಯವರೆಗೆ ಸುಮಾರು 100 ಕಿ.ಮೀಗಳಷ್ಟು ದೂರದ ಹೆದ್ದಾರಿಯಲ್ಲಿ ಮೊದಲು ಮಾಣಿಯಿಂದ ಸಂಪಾಜೆವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಿದ್ದು, ಸಂಪಾಜೆ ಯಿಂದ ಮಡಿಕೇರಿಯವರೆಗಿನ ರಸ್ತೆಯನ್ನು ಅಗಲೀಕರಣ ಮಾಡಲು ಸಚಿವರು ಆದೇಶಿಸಿದರು.

ಸಚಿವರ ಆದೇಶದ ಮೇರೆಗೆ ಮೊದಲು ಪ್ರಾಧಿಕಾರದ ಅಧಿಕಾರಿಗಳು ಯೋಜನೆಯ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಿದ್ದು ನಂತರ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ. ಬಜೆಟ್‍ನಲ್ಲಿ ಹಣ ನೀಡಿದ ನಂತರ ಕಾಮಗಾರಿ ಆರಂಭಗೊಳ್ಳಲಿದ್ದು, ಈ ಕಾಮಗಾರಿ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಶ್ರೀರಂಗಪಟ್ಟಣದ ಅಗ್ರಹಾರ ಗ್ರಾಮ ದಿಂದ ಕುಶಾಲನಗರ ಹೊರವಲಯದ ಬಸವನಳ್ಳಿಯವ ರೆಗೆ ನೂತನ ಹೆದ್ದಾರಿ ನಿರ್ಮಿಸುವ 2,300 ಕೋಟಿ ರೂ. ವೆಚ್ಚದ ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.

ಮಾಣಿ-ಮಡಿಕೇರಿ ರಸ್ತೆಯನ್ನು ಚತುಷ್ಪಥ ರಸ್ತೆಯ ನ್ನಾಗಿ ಮಾರ್ಪಡಿಸಿದರೆ ಮಂಗಳೂರು-ಬೆಂಗಳೂರು ನಡುವಿನ ಸಂಚಾರ ಮತ್ತಷ್ಟು ಸುಗಮವಾಗಲಿದ್ದು, ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ. ಇದಲ್ಲದೆ ಸಚಿವರು ಸುರತ್ಕಲ್ ಟೋಲ್‍ನ್ನು ಸ್ಥಳಾಂತರಿಸು ವಂತೆ ಆದೇಶಿಸಿದ್ದಾರೆ  ಎಂದು ನಳಿನ್ ಕುಮಾರ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸುರತ್ಕಲ್ ಟೋಲ್‍ಗೆ ಜನತೆಯ ಸಂಘ-ಸಂಸ್ಥೆಗಳ ವ್ಯಾಪಕ ವಿರೋಧವಿರುವ ಹಿನ್ನೆಲೆಯಲ್ಲಿ ಇದನ್ನು ನವ ಮಂಗಳೂರು ಬಂದರಿನ ಒಳಭಾಗಕ್ಕೆ ಸ್ಥಳಾಂತರಿಸುವಂತೆ ಸಚಿವರು ಆದೇಶಿಸಿದ್ದಾರೆ. ಇದರಿಂದ ಬಂದರು ಒಳಭಾಗಕ್ಕೆ ಹೋಗುವ ವಾಹನಗಳು ಮಾತ್ರ ಟೋಲ್ ನೀಡಬೇಕಾಗು ತ್ತದೆ. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ ಆರ್.ಕೆ.ಪಾಂಡೆ, ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಗೋಸಾಹಿಲ್, ಪ್ರಾಧಿಕಾರದ ಟೋಲ್ ವಿಭಾಗದ ಸದಸ್ಯ ಮಹಾವೀರ್, ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಹಾಜರಿದ್ದರು.

Translate »