ಮೈಸೂರು,ಮಾ.16(ಆರ್‍ಕೆ)-ಮೈಸೂರಿನ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಎನ್.ಬಾಲಕೃಷ್ಣ, ಗುಂಡ್ಲುಪೇಟೆ ಅಬ ಕಾರಿ ಇನ್ಸ್‍ಪೆಕ್ಟರ್ ಚೆಲುವರಾಜು ಸೇರಿದಂತೆ ರಾಜ್ಯದ 18 ಅಧಿಕಾರಿಗಳ ಮನೆಗಳು ಸೇರಿದಂತೆ ಅವರಿಗೆ ಸಂಬಂಧಿಸಿ ದಂತಹ 75 ಸ್ಥಳಗಳಲ್ಲಿ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಅಧಿ ಕಾರಿಗಳು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
100 ಮಂದಿ ಅಧಿಕಾರಿಗಳು 300 ಮಂದಿ ಸಿಬ್ಬಂದಿವುಳ್ಳ ಎಸಿಬಿ ಪೊಲೀಸರು ಇಂದು ಮುಂಜಾನೆ 6 ಗಂಟೆಗೆ ವಿವಿಧ ಸರ್ಕಾರಿ ಅಧಿಕಾರಿಗಳ ಮನೆ ಬಾಗಿಲು ತಟ್ಟಿದರು. ಇದರಿಂದ ಹಾಸಿಗೆ ಯಿಂದ ಏಳುವ ಮುನ್ನವೇ ಈ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಶಾಕ್ ಕಾದಿತ್ತು. ಬೆಳಗ್ಗೆಯಿಂದ ಸಂಜೆ ವರೆಗೂ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳಲ್ಲಿ ಜಾಲಾಡಿದಾಗ ಅಪಾರ ಪ್ರಮಾಣದ ಹಣ, ಚಿನ್ನ, ಬೆಳ್ಳಿ ಆಭ ರಣ, ಐಷಾರಾಮಿ ಕಾರು, ನಿವೇಶನ, ಕಟ್ಟಡ, ಅಪಾರ್ಟ್‍ಮೆಂಟ್ ಫ್ಲಾಟ್, ಜಮೀನು ಸೇರಿದಂತೆ ಭಾರೀ ಪ್ರಮಾಣದ ಸ್ಥಿರ ಹಾಗೂ ಚರಾಸ್ತಿಗಳು ಪತ್ತೆಯಾಗಿವೆ. ಗಳಿಕೆ ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿರುವ ಅಧಿಕಾರಿಗಳು ಎಸಿಬಿ ದಾಳಿಯಿಂದ ಬೆಚ್ಚಿ ಬಿದ್ದಿದ್ದು, ಏಕಕಾಲದಲ್ಲಿ ಹಲವೆಡೆ ದಾಳಿ ನಡೆಸಿದ ಕಾರಣ, ಹೊಂದಿರುವ ಆಭರಣ, ಹಣ, ಆಸ್ತಿ ದಾಖಲೆ ಪತ್ರಗಳನ್ನು ಮರೆಮಾಚಲಾರದೇ ಕಕ್ಕಾಬಿಕ್ಕಿಯಾಗಿದ್ದಾರೆ. ಮೈಸೂರಿನ ವಿಜಯ ನಗರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಎನ್. ಬಾಲಕೃಷ್ಣ ಅವರು ವಾಸವಾಗಿರುವ ವಿಜಯ ನಗರ 2ನೇ ಹಂತದ ಮಹದೇಶ್ವರ ನಗರದ 60×40 ಅಡಿ ಅಳತೆಯ ಕಟ್ಟಡದ ಮೊದಲ ಮಹಡಿ ಬಾಡಿಗೆ ಮನೆಗೆ ದಾಳಿ ನಡೆಸಿದ ಮೈಸೂರಿನ ಎಸಿಬಿ ಅಧಿಕಾರಿಗಳು ಸಂಜೆಯ ವರೆಗೂ ಪರಿಶೀಲನೆ ನಡೆಸಿದರು. ಆ ವೇಳೆ ಬಾಲಕೃಷ್ಣ, ಪತ್ನಿ, ಪುತ್ರ, ಭಾವ ಮೈದುನ ಅವರು ಮನೆಯಲ್ಲಿದ್ದರು. ಸರ್ಚ್ ವಾರÉಂಟ್ ತೋರಿಸಿ ತಪಾಸಣೆ ನಡೆಸಿದ ಎಸಿಬಿ ಪೊಲೀಸರು, ನಗದು, ಚಿನ್ನ, ಅಪಾರ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆ ದರು. ಬೆಳಗ್ಗೆ 10.30 ಗಂಟೆ ವೇಳೆಗೆÉ ಬಾಲಕೃಷ್ಣರನ್ನು ತಮ್ಮ ಕಾರಿನಲ್ಲಿ ವಿಜಯನಗರ ಠಾಣೆಗೆ ಕರೆದೊಯ್ದು ಶೋಧ ನಡೆಸಿದರಾದರೂ ಅಲ್ಲಿ ಯಾವ ದಾಖಲೆಗಳೂ ಪತ್ತೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಅದೇ ವೇಳೆ ಹಾಸನ ಜಿಲ್ಲೆ ಹೊಳೆ ನರಸೀಪುರದಲ್ಲಿರುವ ಬಾಲಕೃಷ್ಣ ಅವರ ಮತ್ತೊಂದು ಮನೆ, ಮಾವ ಚಂದ್ರೇಗೌಡ ಅವರ ಮನೆಯ ಮೇಲೂ ಮಂಡ್ಯ ಎಸಿಬಿ ಪೊಲೀಸರ ತಂಡ ದಾಳಿ ನಡೆಸಿ ಜಾಲಾ ಡಿದಾಗ ಅಲ್ಲೂ ಬೇನಾಮಿ ಆಸ್ತಿಗಳಿಗೆ ಸಂಬಂಧಿ ಸಿದ ದಾಖಲೆ ಪತ್ರಗಳನ್ನು ವಶ ಪಡಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ.
ಅಬಕಾರಿ ಇನ್ಸ್ ಪೆಕ್ಟರ್: ಮತ್ತೊಂದೆಡೆ ಗುಂಡ್ಲುಪೇಟೆ ತಾಲೂಕು ಅಬಕಾರಿ ಇನ್ಸ್‍ಪೆಕ್ಟರ್ ಚೆಲುವರಾಜು ಅವರ ಮೈಸೂರಿನ ಶ್ರೀರಾಂಪುರ ಮನೆ ಮೇಲೂ ಎಸಿಬಿ ಪೊಲೀಸರು ದಾಳಿ ನಡೆಸಿ, 650 ಗ್ರಾಂ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರದ ಇವರ ಸ್ನೇಹಿತರ ಮನೆ ಮೇಲೂ ದಾಳಿ ನಡೆಸಿ ಶೋಧಿಸಿದರು. ಬೆಂಗಳೂರಿನ ಹೆಚ್ಚುವರಿ ಸಾರಿಗೆ ಆಯುಕ್ತ ಜ್ಞಾನೇಂದ್ರಕುಮಾರ್, ಬಿಡಿಎ ನಗರ ಯೋಜನಾ ಸದಸ್ಯ ರಾಕೇಶ್ ಕುಮಾರ್, ಯಾದಗಿರಿಯ ಸಾಮಾಜಿಕ ಅರಣ್ಯಾಧಿಕಾರಿ ರಮೇಶ್ ಕಂಕಟ್ಟೆ, ಗೋಕಾಕಿನ ಎಕ್ಸಿಕ್ಯುಟೀವ್ ಇಂಜಿನಿಯರ್ ಬಸವರಾಜ್ ಶೇಖರ ರೆಡ್ಡಿ, ಗದಗ ಡಿಸಿ ಕಚೇರಿ ಶಿರಸ್ತೇದಾರ್ ಬಸವಕುಮಾರ ಎಸ್.ಅಣ್ಣಿಗೇರಿ, ವಿಜಯಪುರದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್ ಸಾ. ಮೂಲಗಿ, ಬೆಂಗಳೂರಿನ ಕೈಗಾರಿಕೆ, ವಾಣಿಜ್ಯ ಇಲಾಖೆ ಅಡಿಷನಲ್ ಡೈರೆಕ್ಟರ್ ಬಿ.ಕೆ.ಶಿವಕುಮಾರ್, ಬಾದಾಮಿಯ ಪ್ರಾದೇಶಿಕ ಅರಣ್ಯಾಧಿಕಾರಿ ಶಿವಾನಂದ ಪಿ.ಶರಣಪ್ಪ ಬೇದಗಿ, ರಾಮನಗರÀ ಉಪವಿಭಾಗಾ ಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಹರೀಶ್, ಚಿಕ್ಕಮಗಳೂರಿನ ಲೋಕೋಪ ಯೋಗಿ ಇಲಾಖೆ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಗವಿರಂಗಪ್ಪ, ರಾಯಚೂರಿನ ಕೃಷ್ಣ ಭಾಗ್ಯ ಜಲನಿಗಮದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಅಶೋಕರೆಡ್ಡಿ ಪಾಟೀಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕೆಪಿಟಿಸಿಎಲ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿ ಯರ್ ದಯಾ ಸುಂದರರಾಜು ಅವರ ಮನೆಯ ಮೇಲೂ ಎಸಿಬಿ ದಾಳಿ ನಡೆಸಿದೆ.