ನಾಳೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾ ಮಹತ್ವದ ಸಭೆ
News

ನಾಳೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾ ಮಹತ್ವದ ಸಭೆ

December 4, 2022

ಬೆಂಗಳೂರು, ಡಿ.3(ಕೆಎಂಶಿ)- ಕರ್ನಾಟಕ ವಿಧಾನಸಭೆ ಚುನಾವಣೆಗೆ ರೋಡ್ ಮ್ಯಾಪ್ ಸಿದ್ಧಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಡಿ.5ರಂದು ದೆಹಲಿಯಲ್ಲಿ ಮಹತ್ವದ ಸಭೆ ಕರೆದಿದ್ದಾರೆ.

ಗುಜರಾತ್ ವಿಧಾನಸಭೆಗೆ ಕೊನೆಯ ಹಂತದ ಮತದಾನ ಮುಗಿಯುತ್ತಿ ದ್ದಂತೆ ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಚುನಾವಣಾ ತಂತ್ರಗಾರಿಕೆಗಾಗಿ ಎರಡು ದಿನ ಸಭೆ ನಡೆಸಲಿದ್ದಾರೆ. ಅಮಿತ್ ಷಾ ಕರೆದಿ ರುವ ಸಭೆಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ. ಕರ್ನಾಟಕದ ಚುನಾವಣೆ ಉಸ್ತುವಾರಿ ಹೊಣೆ ಹೊತ್ತಿ ರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ಧರ್ಮೇಂದ್ರ ಪ್ರಧಾನ್ ಭಾಗವಹಿಸಲಿದ್ದಾರೆ. ಈ ಸಭೆಗೆ ರಾಜ್ಯ ದಿಂದ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯ ಕ್ಷರಿಗೆ ಕೊನೆ ಹಂತದಲ್ಲಿ ಆಹ್ವಾನ ಬರುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಪಕ್ಷ ವನ್ನು ಅಧಿಕಾರಕ್ಕೆ ತರಲೇಬೇಕೆಂದು ಬಿಜೆಪಿ ರಾಷ್ಟ್ರನಾಯಕರು ಪಣ ತೊಟ್ಟಿ ದ್ದಾರೆ. ಆದರೆ, ಇಲ್ಲಿನ ಪ್ರತಿಪಕ್ಷ ಕಾಂಗ್ರೆಸ್‍ನ ಆರೋಪಗಳು, ಸರ್ಕಾ ರಕ್ಕಿರುವ ವಿರೋಧಿ ಅಲೆಯ ನಡುವೆಯೂ ಮತ್ತೆ ಅಧಿಕಾರಕ್ಕೆ ತರಲೇಬೇಕೆಂಬ ಉದ್ದೇಶ ದಿಂದ ಚುನಾವಣಾ ರೋಡ್ ಮ್ಯಾಪನ್ನು ಅಂದು ಅಮಿತ್ ಷಾ ಸಿದ್ಧಪಡಿಸಲಿದ್ದಾರೆ.

ರಾಜ್ಯ ವಿಧಾನಸಭೆಗೆ 2023ರ ಏಪ್ರಿಲ್, ಮೇನಲ್ಲಿ ಚುನಾವಣೆ ಜರುಗಲಿದ್ದು, ಈಗಾ ಗಲೇ ಮೂರು ಸಮೀಕ್ಷಾ ವರದಿಗಳನ್ನು ವರಿಷ್ಠರು ತರಿಸಿಕೊಂಡಿದ್ದಾರೆ. ಸಮೀಕ್ಷಾ ವರದಿಗಳ ಪ್ರಕಾರ ಕರ್ನಾಟಕದ ಬಿಜೆಪಿಗೆ ಅಂತಹ ಜನಬಲವಿಲ್ಲ ಎಂಬುದು ಸ್ಪಷ್ಟವಾಗಿದೆ.

ಕಾಂಗ್ರೆಸ್‍ನ ಅಪಪ್ರಚಾರದ ನಡುವೆ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರಬೇಕು. ರಾಜ್ಯದ ನಾಯಕರನ್ನು ಮುಂದಿಟ್ಟುಕೊಂಡು ಹೋದರೆ,ಬಿಜೆಪಿ ಕನಸು ನನಸಾಗುವುದಿಲ್ಲ. ಪಕ್ಷ ಮೂರು ಬಾರಿ ಅಧಿಕಾರಕ್ಕೆಬಂದಾಗಲೂ ಒಮ್ಮೆಯೂ ಪೂರ್ಣ ಬಹುಮತ ಗಳಿಸಿಲ್ಲ. ರಾಜ್ಯ ಬಿಜೆಪಿಗೆ 50 ಕ್ಷೇತ್ರಗಳನ್ನು ಗೆಲ್ಲಲ್ಲೇಬೇಕು ಎಂಬ ಕಟ್ಟಪ್ಪಣೆಯನ್ನು ಅಮಿತ್ ಷಾ ನೀಡಿದ್ದಾರೆ.

ಆದರೆ, 113ರ ಮ್ಯಾಜಿಕ್ ಸಂಖ್ಯೆಯನ್ನು ಇವರ ನಾಯಕತ್ವದಲ್ಲಿ ಮುಟ್ಟಲಾಗುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ನಾಯಕರೇ ಅಖಾಡಕ್ಕೆ ಇಳಿದು ದಕ್ಷಿಣ ಭಾರತದಲ್ಲಿ ತಮ್ಮ ಖಾತೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ಉದ್ದೇಶಕ್ಕಾಗಿ ಅಮಿತ್ ಷಾ, ಚುನಾವಣಾ ಪೂರ್ವ ಸಭೆ ಕರೆದಿದ್ದಾರೆ. ಸಭೆಯ ನಂತರ ರಾಜ್ಯದಲ್ಲಿ ದೆಹಲಿ ನಾಯಕರು ಬಿರುಸಿನ ಚುನಾವಣಾ ಪ್ರಕ್ರಿಯೆ ಆರಂಭಿಸಲಿದ್ದಾರೆ. ಡಿಸೆಂಬರ್ 10ರಿಂದಲೇ ಚುನಾವಣಾ ಸಿದ್ಧತೆ ನಡೆಯಲಿದ್ದು, ಇದಕ್ಕಾಗಿ 5 ಚುನಾವಣಾ ಉಸ್ತುವಾರಿ ಕಚೇರಿಗಳು ಆರಂಭ ವಾಗಲಿದ್ದು, ಇವುಗಳ ಉಸ್ತುವಾರಿ ಹೊಣೆ ಕೇಂದ್ರ ಸಚಿವರಿಗೆ ನೀಡಲಾಗುವುದು.

Translate »