ವಿಶೇಷಚೇತನರ ನಾನಾ ಪ್ರತಿಭೆ ಪ್ರದರ್ಶನ
ಮೈಸೂರು

ವಿಶೇಷಚೇತನರ ನಾನಾ ಪ್ರತಿಭೆ ಪ್ರದರ್ಶನ

December 4, 2022

ಮೈಸೂರು, ಡಿ.3(ಎಂಟಿವೈ)- ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಶನಿವಾರ ದೇವರ ಮಕ್ಕಳ ಸಂಭ್ರಮ ಮನೆ ಮಾಡಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ವಿಶೇಷ ಚೇತನರು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಎಲ್ಲರನ್ನು ನಿಬ್ಬೆರಗಾಗಿಸಿ ದರು. ಆ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಸಂದೇಶ ರವಾನಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧÀ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ದಲ್ಲಿ ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಮಂಟಪದಲ್ಲಿ ಹಮ್ಮಿ ಕೊಂಡಿದ್ದ ವಿಶ್ವ ವಿಕಲಚೇತನರ ದಿನಾ ಚರಣೆ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳ ಸಾಂಸ್ಕøತಿಕ ಕಲೆಗಳ ಪ್ರದರ್ಶನ ಕಣ್ಮನ ಸೆಳೆಯಿತು. ನೃತ್ಯ ಸೇರಿದಂತೆ ವಿವಿಧ ಪ್ರಕಾರಗಳ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ವಿಶೇಷ ಮಕ್ಕಳ ಸಂಭ್ರಮ ಮೇಳೈಸಿತ್ತು. ಕೆಲವು ಮಕ್ಕಳು ವ್ಹೀಲ್‍ಚೇರ್‍ನಲ್ಲಿಯೇ ಕುಳಿತು ಹಾಡಿಗೆ ಮೈ ಕೈ ಕುಣಿಸಿದರೆ, ಅವರಿಗೆ ಪಾಲಕರು ಮತ್ತು ಶಿಕ್ಷಕಿಯರು ನೆರವು ನೀಡಿದರು. ಪ್ರಕೃತಿ ಸೊಬಗನ್ನು ಅಭಿವ್ಯಕ್ತಿ ಗೊಳಿಸಲು ಮಕ್ಕಳು ವಿಭಿನ್ನ ವೇಷತೊಟ್ಟು ವೇದಿಕೆಗೆ ಆಗಮಿಸಿ, ಪರಿಸರ ಪ್ರೇಮ ಮೆರೆದರು. ಭರತನಾಟ್ಯ, ಫ್ಯೂಷನ್ ಸಂಗೀ ತಕ್ಕೆ ವಿಶೇಷ ಚಿಣ್ಣರು ಹೆಜ್ಜೆ ಹಾಕಿ ಗಮನ ಸೆಳೆದರು. ವಿವಿಧ ವಿಶೇಷ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಪ್ರಸ್ತುತಪಡಿಸಿದರು. ಅಲ್ಲದೆ, ಈ ಮಕ್ಕಳು ನಾನಾ ವೇಷಭೂಷಣ ಧರಿಸಿ ಚಲನಚಿತ್ರ ಗೀತೆ, ಭಾವಗೀತೆ, ಹಿಂದಿ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ಶೇ.5ರಷ್ಟು ಸಿಗುವ ಅನುದಾನ ಬಳಕೆ ಮಾಡಿಕೊಳ್ಳಿ: ಇದಕ್ಕೂ ಮುನ್ನ ಕಾರ್ಯ ಕ್ರಮದಲ್ಲಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ವಿಕಲಚೇತನರಿಗೆ ಶೇ.5ರಷ್ಟು ಸಿಗುವಂತಹ ಯಾವುದೇ ರೀತಿಯ ಅನುದಾನವನ್ನು ಅವರ ಕೆಲಸಗಳಿಗಾಗಿಯೇ ಬಳಕೆ ಮಾಡ ಬೇಕು. ಎಲ್ಲಾ
ವಿಕಲಚೇತನರು ಕೂಡ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ನಾನು ಪ್ರೀತಿಯಿಂದ ಇಷ್ಟಪಟ್ಟು ಭಾಗವಹಿಸುವಂತಹ ಕಾರ್ಯಕ್ರಮದಲ್ಲಿ ಈ ವಿಕಲಚೇತನರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಒಂದು. ಈ ಬಾರಿಯಿಂದ ವಿಕಲಚೇತನರಿಗೆ ಸಾಲಿನಲ್ಲಿ ನಿಲ್ಲುವ ಪ್ರಯಾಸ ಇರುವುದಿಲ್ಲ. ನೇರವಾಗಿ ಹೋಗಿ ಮತದಾನ ಮಾಡುವ ಪ್ರಕ್ರಿಯೆ ಇರುತ್ತದೆ. ಇದಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು. ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಕೆಲವು ದಿನಗಳ ಹಿಂದೆ ನಡೆದ ಸಾಂಸ್ಕøತಿಕ ಹಾಗೂ ಕ್ರೀಡಾ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳು ಭಾಗವಹಿಸಿ ನಮ್ಮಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ ಅನ್ನುವುದನ್ನು ವಿವಿಧ ಆಟ ಆಡುವುದರ ಮೂಲಕ ತೋರಿಸಿ ಕೊಟ್ಟಿದ್ದರು ಎಂದು ಹೇಳಿದರು. ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‍ಗೌಡ ಮಾತನಾಡಿ ಯಾರು ಸಹ ಯಾರಿಗೂ ಕಡಿಮೆ ಇಲ್ಲ. ನಾವು ಸಹ ನಿಮಗೆ ಸರಿಸಮಾನರು ಎಂಬ ಕಾರ್ಯಕ್ರಮ ವಿಶ್ವದ ಎಲ್ಲೆಡೆ ನಡೆಯುತ್ತಿದೆ. ವಿಕಲ ಚೇತನ ಮಕ್ಕಳು ಯಾವುದಕ್ಕೂ ಕೂಡ ಕಡಿಮೆ ಇಲ್ಲ. ಎಲ್ಲಾ ರೀತಿಯ ಪ್ರತಿಭೆ ನಿಮ್ಮಲ್ಲಿದೆ. ನೀವು ಸಾಧಿಸುತ್ತೀರಾ ಎಂದು ತಿಳಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾ ರಿಗಳಾದ ಆರ್.ಮಾಲಿನಿ, ಸುಬೇದಾರ್ ಭಗತ್‍ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಎಲ್ಲರೂ ಗೈರು: ಆಹ್ವಾನಿತ ಜನಪ್ರತಿನಿಧಿಗಳೆಲ್ಲಾ ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ನಿಗಮ-ಮಂಡಳಿ ಅಧ್ಯಕ್ಷರು, ಮೇಯರ್, ಉಪಮೇಯರ್ ಬಂದಿರಲಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ 36 ಹೆಸರಿತ್ತು. ಈ ಪೈಕಿ ಡಿಸಿ, ಎಡಿಸಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದವರೆಲ್ಲರೂ ಗೈರಾಗಿದ್ದರು.

Translate »