ಡಿ.8ರಿಂದ ಭಾರತೀಯತೆ ಸಾರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಮೈಸೂರು

ಡಿ.8ರಿಂದ ಭಾರತೀಯತೆ ಸಾರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

December 3, 2022

ಮೈಸೂರು,ಡಿ.2(ಆರ್‍ಕೆಬಿ)-ಮೈಸೂರು ರಂಗಾಯಣದ ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಡಿ.8ರಿಂದ 15ರವರೆಗೆ ನಡೆಯಲಿದ್ದು, ‘ಭಾರತೀಯತೆ’ ಶೀರ್ಷಿಕೆಯಡಿಯ ಈ ರಾಷ್ಟ್ರೀಯ ರಂಗ ಉತ್ಸವಕ್ಕೆ ಡಿ.10ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ರಂಗಾಯಣದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಕುರಿತ ಪೆÇೀಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿಯ ಬಹುರೂಪಿ ರಂಗೋತ್ಸವದಲ್ಲಿ 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕಗಳು, ಕರ್ನಾಟಕದ 12 ಕನ್ನಡ ನಾಟಕಗಳು, 1 ತುಳು ನಾಟಕ ಸೇರಿದಂತೆ ಒಟ್ಟು 20 ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದರೊಂ ದಿಗೆ ಜಾನಪದ ಕಲಾ ಪ್ರದರ್ಶನ, ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ಪ್ರದರ್ಶನ, ದೇಸಿ ಆಹಾರ ಮೇಳ, ಪ್ರಾತ್ಯಕ್ಷಿಕೆ ಗಳು, ಚಿತ್ರಕಲಾ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮ ಒಳಗೊಂಡಿದೆ ಎಂದರು.

ಡಿ.3ರಂದು ಚಿತ್ರಕಲಾ ಶಿಬಿರ ಉದ್ಘಾಟನೆಗೊಳ್ಳಲಿದೆ. ಡಿ.5ರಂದು ಗಾರುಡಿ ಗೊಂಬೆ ಗಳೊಂದಿಗೆ ಮನೆಮನೆಗೆ ರಂಗಾಯಣ-ಮನೆ ಮನೆಗೆ ಬಹುರೂಪಿ ಪ್ರಚಾರಂದೋ ಲನ ಉದ್ಘಾಟನೆಗೊಳ್ಳಲಿದೆ. ಡಿ.8ರಂದು ಜಾನಪದ ಉತ್ಸವ ಉದ್ಘಾಟನೆಯಾಗಲಿದೆ. ಡಿ.9ರಂದು ರಾಷ್ಟ್ರೀಯ ಚಲನಚಿತ್ರೋತ್ಸವ ಪುಸ್ತಕ ಮತ್ತು ಕರಕುಶಲ ವಸ್ತು ಪ್ರದರ್ಶನ ಉದ್ಘಾಟನೆ ಆಗಲಿದೆ ಎಂದರು. ಡಿ.10 ರಂದು ಸಂಜೆ ರಾಷ್ಟ್ರೀಯ ರಂಗೋತ್ಸವದ ನಾಟಕಗಳ ಹಬ್ಬದ ಉದ್ಘಾಟನೆ ನೆರವೇರಲಿದೆ. ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ರಾಷ್ಟ್ರೀಯ ವಿಚಾರ ಸಂಕೀರ್ಣದ ಸಮಾರೋಪ ಮಾತುಕತೆ ಡಿ.11ರಂದು ನಡೆಯಲಿದೆ ಎಂದರು.
ಡಿ.10ರಂದು ಸಿಎಂ ಉದ್ಘಾಟಿಸುವ ಸಂದರ್ಭದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ ಪರೇಶ್ ರಾವಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‍ಕುಮಾರ್, ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಸೇರಿದಂತೆ ಹಲವರು ಮುಖ್ಯ ಅತಿಥಿ ಯಾಗಿ ಭಾಗವಹಿಸುವರು ಎಂದರು. ಬಹುರೂಪಿ ಜನಪದೋತ್ಸವದಲ್ಲಿ ಕಂಸಾಳೆ, ಯಕ್ಷಗಾನ, ಸಂಪ್ರದಾಯದ ಹಾಡು, ಪೂಜಾ ಕುಣಿತ, ಡೊಳ್ಳು ಕುಣಿತ, ನಾದಸ್ವರ, ಗೊರವರ ನೃತ್ಯ, ನೀಲಗಾರರ ಮೇಳ, ಸೋಮನ ಕುಣಿತ, ಕರಗ ಕೋಲಾಟ, ಕಂಗೀಲು, ಮಂಟೇ ಸ್ವಾಮಿ ಹಾಡು, ಚಿಟ್ ಮೇಳ, ಜಾನಪದ ಗೀತೆ, ವೀರಗಾಸೆ ಇರಲಿದೆ ಎಂದರು.

Translate »