ಮೈಸೂರು, ಜು.1(ಆರ್‍ಕೆಬಿ)- ಹಸು ವಿನ ಸಗಣಿ, ಗಂಜಲ, ಬೇವಿನಸೊಪ್ಪು, ಅರಿಶಿನ ಮಿಶ್ರಿತ ನೀರನ್ನು ಮನೆ ಸುತ್ತಲಿನ ಪರಿಸರದಲ್ಲಿ ಸಿಂಪಡಿಸುವುದರಿಂದ ಕೊರೊನಾ ಮತ್ತಿತರ ವೈರಸ್ ಹರಡ ದಂತೆ ತಡೆಗಟ್ಟಬಹುದಾಗಿದು ಎಂಬ `ಮನೆ ಮದ್ದು ಜಾಗೃತಿ’ ಕಾರ್ಯಕ್ರಮ ಶಾರದಾದೇವಿ ನಗರದ ನಾಲ್ಕನೇ ಕ್ರಾಸ್ ನಲ್ಲಿ ಬುಧವಾರ ನಡೆಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ವೇದಿಕೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಆಯುರ್ವೇದ ಸಂಶೋಧಕ ಡಾ.ಸೋಮಶೇಖರಗೌಡ ಸಿದ್ಧಪಡಿಸಿದ ಮಿಶ್ರಣವನ್ನು ಮನೆ ಸುತ್ತಮುತ್ತ ಹರಡುವ ಮೂಲಕ ಕೊರೊನಾ ಬಗ್ಗೆ ಭಯ ನಿವಾ ರಿಸಿಕೊಳ್ಳಿ. ಸರ್ಕಾರದ ಮಾರ್ಗಸೂಚಿ ಜೊತೆಗೆ ಈ ಮಿಶ್ರಣವನ್ನೂ ಬಳಸುವುದ ರಿಂದ ಕೊರೊನಾ ಮೊದಲಾದ ಸಾಂಕ್ರಾ ಮಿಕ ರೋಗಗಳಿಂದ ದೂರ ಇರಬಹು ದಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಂ ತಿಳಿಸಿದರು.
ಈ ಸಂದರ್ಭ ಪಾಲಿಕೆ ಸದಸ್ಯ ಜೆ. ಗೋಪಿ, ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಮುಖಂಡರಾದ ಹರೀಶ್ ಮೊಗಣ್ಣ, ಪ್ರವೀಣ್, ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.