ಮೈಸೂರು, ಜು.1(ಆರ್‍ಕೆಬಿ)- ಮೈಸೂ ರಿನ ಚಾಮುಂಡಿಪುರಂ ವೃತ್ತದಲ್ಲಿ `ಅರಿವು’ ಸಂಸ್ಥೆಯಿಂದ ಸಾರ್ವಜನಿಕರಿಗೆ ಉಚಿತ ವಾಗಿ ದಿನಪತ್ರಿಕೆಗಳನ್ನು ವಿತರಿಸಿ, ಎಲ್ಲಾ ಪತ್ರಿಕೆಗಳನ್ನು ಪ್ರದರ್ಶಿಸುವ ಮೂಲಕ `ಪತ್ರಿಕಾ ದಿನ’ ಆಚರಿಸಲಾಯಿತು.
ಬಿಜೆಪಿ ನಾಯಕಿ ಲಕ್ಷ್ಮಿದೇವಿ ಮಾತ ನಾಡಿ, ಪತ್ರಕರ್ತರಿಗೆ ಬಿಡುವು ಎನ್ನುವು ದಿಲ್ಲ. ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಾರೆ. ಕುಟುಂಬದ ಸದಸ್ಯ ರೊಂದಿಗೆ ಸಮಯ ಕಳೆಯಲು ಸಹ ಅವರಿಗೆ ಆಗುವುದಿಲ್ಲ. ಒತ್ತಡದ ನಡು ವೆಯೇ, ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರುವ ಹಾಗೆ ಕಾರ್ಯಕ್ರಮ ಏರ್ಪಡಿಸಲು ಪತ್ರಕರ್ತರ ಸಂಘ ಮುಂದಾಗ ಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ನಡುವೆ ಸ್ಪರ್ಧೆ ಏರ್ಪಡುತ್ತಿದೆ. ಪತ್ರಕರ್ತರು ಆರೋಗ್ಯ ಪೂರ್ಣ ಸ್ಪರ್ಧೆಗೆ ತೆರೆದುಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ಯಾರ ಪ್ರಭಾವಕ್ಕೂ ಮಣಿಯದೆ ನಿರ್ಭೀತಿಯಿಂದ ಜವಾಬ್ದಾರಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು. ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಯುವ ಮುಖಂಡ ರಾದ ವಿಕ್ರಂ ಅಯ್ಯಂಗಾರ್, ಶಿವಪ್ರಕಾಶ್, ಸುಚೀಂದ್ರ, ಬೆಟ್ಟೇಗೌಡ, ಚಕ್ರಪಾಣಿ, ಕಾರ್ತಿಕ್ ನಾಯಕ್, ಶಿವು ಇನ್ನಿತರರಿದ್ದರು