ಮೈಸೂರಲ್ಲಿ ಮಳೆಗಾಲದ ಅವಾಂತರ ನಿರ್ವಹಣೆ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ತಾಕೀತು
ಮೈಸೂರು

ಮೈಸೂರಲ್ಲಿ ಮಳೆಗಾಲದ ಅವಾಂತರ ನಿರ್ವಹಣೆ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ತಾಕೀತು

July 2, 2020

ಮೈಸೂರು, ಜು. 1(ಆರ್‍ಕೆ)- ಮಳೆ ಗಾಲದ ಅವಾಂತರ ನಿರ್ವಹಣೆಗಾಗಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಇಂದಿಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣ ದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಮಳೆ ಆರಂಭವಾಗಿದ್ದು, ತಗ್ಗು ಪ್ರದೇಶ ಮತ್ತು ಚರಂಡಿಗಳಲ್ಲಿ ನೀರು ನುಗ್ಗಿ, ಅದು ಜನವಸತಿ ಪ್ರದೇಶದ ಮನೆಗಳಿಗೆ ನುಗ್ಗುತ್ತಿರುವುದು ವರದಿಯಾಗುತ್ತಿದೆ ಎಂದರು.

ತೀವ್ರ ಸಮಸ್ಯೆ: ಮಳೆಯಿಂದ ಉಂಟಾ ಗುತ್ತಿರುವ ಅನಾಹುತಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಸಚಿತ್ರ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು, ರಾಜಕಾಲುವೆ, ಒಳಚರಂಡಿ ಹಾಗೂ ಮಳೆ ನೀರು ಚರಂಡಿಗಳಲ್ಲಿ ಜೂನ್ 28 ಮತ್ತು 29ರಂದು ಸುರಿದ ಮಳೆಯಿಂದಾಗಿ ಉಕ್ಕಿ ಹರಿದ ನೀರಿನಿಂದ ಆಗಿರುವ ಹಾನಿ ವಿವರಿಸಿದರು.

ಹಲವು ಬಡಾವಣೆಗಳಲ್ಲಿ ಮ್ಯಾನ್‍ಹೋಲ್ ಗಳು ತುಂಬಿ ನೀರು ಹರಿಯುತ್ತಿರುವುದು. ಮನೆಗಳಿಗೆ ಈ ನೀರು ನುಗ್ಗಿ ಜನರಿಗೆ ತೊಂದರೆ ಉಂಟಾಗುತ್ತಿರುವುದು. ಮರ ಬುಡ ಸಮೇತ ಬಿದ್ದಿರುವುದು ಮತ್ತು ಕೆಲವೆಡೆ ರೆಂಬೆಗಳು ಮುರಿದುಬಿದ್ದು ತೊಂದರೆ ಉಂಟಾ ಗಿರುವ ಕುರಿತಂತೆಯೂ ವಿವರಿಸಿದರು.

ಹಗಲು-ರಾತ್ರಿ ಪರಿಹಾರ ಕಾರ್ಯ: ಭಾರೀ ಮಳೆಯಿಂದ ತೊಂದರೆಗೊಳಗಾದ ಸ್ಥಳ ಗಳಲ್ಲಿ ಪಾಲಿಕೆ ಅಧಿಕಾರಿಗಳು ಎರಡು ಪಾಳಿ ಯಂತೆ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಚರಂಡಿಗಳಲ್ಲಿ ಹೂಳೆತ್ತುವುದು. ಬ್ಲಾಕ್ ಆಗಿರುವ ಮಳೆ ನೀರು ಚರಂಡಿ ಗಳನ್ನು ತೆರವುಗೊಳಿಸುತ್ತಿದ್ದಾರೆ.

ಬೆಳೆದಿರುವ ಗಿಡಗಂಟಿ ಕಿತ್ತು ಹಾಕು ವುದು, ಬಂದ್ ಆಗಿರುವ ಮ್ಯಾನ್‍ಹೋಲ್ ಗಳ ಸ್ವಚ್ಛಗೊಳಿಸುವ ಕೆಲಸ ಸಮರೋ ಪಾದಿಯಲ್ಲಿ ನಡೆಯುತ್ತಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

4 ಜೆಟ್ಟಿಂಗ್ ಯಂತ್ರ: ಭಾರೀ ಮಳೆ ಬಿದ್ದಾಗ ಹೂಳು ತೆಗೆಯಲು ಹಾಗೂ ಕಸ ಕಡ್ಡಿ ತೆರವು ಗೊಳಿಸಲು ಪ್ರಸ್ತುತ ಲಭ್ಯವಿರುವ 2 ಜೆಟ್ಟಿಂಗ್ ಮಿಷಿನ್ ಬಳಸಲಾಗುತ್ತಿದೆ. ಇನ್ನೂ 4 ಜೆಟ್ಟಿಂಗ್ ಯಂತ್ರಗಳು ತುರ್ತಾಗಿ ಬೇಕಿರು ವುದರಿಂದ ಕೇಂದ್ರ ಪುರಸ್ಕøತ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಖರೀದಿಸಲು ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾ ಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗುರು ದತ್ ಹೆಗ್ಡೆ ಅವರು ಸಚಿವರಿಗೆ ತಿಳಿಸಿದರು.

ಒತ್ತುವರಿ ತೆರವುಗೊಳಿಸಿ: ರಾಜ ಕಾಲುವೆ, ಚರಂಡಿಗಳನ್ನು ಒತ್ತುವರಿ ಮಾಡಿ ಅದರ ಮೇಲೆ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದಲ್ಲಿ ಇಂತಹ ಕಡೆ ನೀರು ಹರಿದುಹೋಗಲು ಸಾಧ್ಯವಾಗದಿರುವುದು, ಇಂತಹ ನೀರು, ರಸ್ತೆ, ಮನೆಗಳಿಗೆ ನುಗ್ಗಿ ಅವಾಂತರ ಉಂಟುಮಾಡುತ್ತಿರುವುದರ ಬಗ್ಗೆ ಸಚಿವರ ಗಮನ ಸೆಳೆದ ರಾಮ ದಾಸ್, ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಒತ್ತುವರಿ ತೆರವು ಗೊಳಿಸಬೇಕೆಂದು ಆಗ್ರಹಿಸಿದರು.

ಯುಜಿಡಿ ನಿರ್ವಹಣೆ: ಮಳೆ ನೀರು ಹಾಗೂ ಒಳಚರಂಡಿ ನಿರ್ವಹಣೆಯನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು. ಮ್ಯಾನ್‍ಹೋಲ್, ಖಾಲಿ ಜಾಗದ ಸ್ವಚ್ಛತೆ ಮಾಡುವ ಮೂಲಕ ಮಳೆಗಾಲದ ಅವಾಂ ತರವನ್ನು ತಪ್ಪಿಸದಿದ್ದರೆ, ಮುಂದೆ ಭಾರೀ ಅಪಾಯ ಸಂಭವಿಸಬಹುದು ಎಂದು ಮೇಯರ್ ತಸ್ನೀಂ ಸಲಹೆ ನೀಡಿದರು.

ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಹೆಚ್.ಪಿ. ಮಂಜುನಾಥ್, ವಿಧಾನಪರಿಷತ್ ಸದಸ್ಯ ಸಂದೇಶ್‍ನಾಗರಾಜ್, ಉಪಮೇಯರ್ ಶ್ರೀಧರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಸಭೆಯಲ್ಲಿ ನಗರ ವಿಕಾಸ ಯೋಜನೆ ಅನುದಾನ ಹಂಚಿಕೆ
ಮೈಸೂರು, ಜು.1(ಆರ್‍ಕೆ)- ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಶಾಸಕರು, ಕಾರ್ಪೊ ರೇಟರ್‍ಗಳ ಬೇಡಿಕೆಗನುಸಾರ ಸಮಾನವಾಗಿ ಹಂಚಿಕೆ ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದ್ದಾರೆ.

ಅನುದಾನ ಹಂಚಿಕೆ ಸಂಬಂಧ ಇಂದು ಮೈಸೂ ರಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಿದ ಸಚಿವರಿಗೆ ಶಾಸಕರು ಹಾಗೂ ಮೇಯರ್ ತಮಗೆ ಹೆಚ್ಚು ಅನು ದಾನ ನೀಡುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಕುಡಿಯುವ ನೀರು, ಕಸ ವಿಲೇವಾರಿಯಂತಹ ಅಗತ್ಯ ಕೆಲಸಗಳಿಗೆ ಆದ್ಯತೆ ನೀಡಿ ತಾವು ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿ ದ್ದಲ್ಲಿ ಮುಂದಿನ ಸಭೆಯಲ್ಲಿ ಸಮಾನವಾಗಿ ಅನು ದಾನ ಹಂಚಿಕೆ ಮಾಡಲಾಗುವುದು ಎಂದರು.

59.10 ಕೋಟಿ ರೂ. ಲಭ್ಯ: ಕೇಂದ್ರದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಒಉಓಗಿಙ) ಯಡಿ ಮಂಜೂರಾಗಿರುವ ಅನುದಾನದ ಬಗ್ಗೆ ಸಭೆಗೆ ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು, 2019-20ರಿಂದ 2023-24ರವರೆಗೆ 4 ವರ್ಷದ ಅವಧಿಗೆ ಸರ್ಕಾರವು 2019ರ ಆಗಸ್ಟ್ 7ರಂದು 150 ಕೋಟಿ ರೂ. ಅನುದಾನ ನೀಡಿದೆ ಎಂದರು.

ಆ ಪೈಕಿ 50.76 ಕೋಟಿ ರೂ.ಗಳನ್ನು ಜೆ. ನರ್ಮ್ ಯೋಜನೆಗೆ ಹೊಂದಾಣಿಕೆ ಮಾಡಿಕೊಂಡು ಉಳಿಕೆ 99.24 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಅದ ರಲ್ಲಿ ನಿಯಮಾನುಸಾರ ಯೋಜನೆಯ ಹೆಚ್ಚಳ(ಕಾಸ್ಟ್ ಎಸ್ಕಲೇಷನ್)ಕ್ಕಾಗಿ 9.92 ಕೋಟಿ ಪ್ರೋತ್ಸಾಹ ಧನಕ್ಕಾಗಿ 4.96 ಕೋಟಿ ಹಾಗೂ ಆಡಳಿತಾತ್ಮಕ ವೆಚ್ಚ ಕೆಂದು 99 ಲಕ್ಷ ರೂ. ಕಾಯ್ದಿರಿಸಬೇಕಾಗಿರುವು ದರಿಂದ ಎನ್‍ಜಿಎನ್‍ವಿವೈ ಕ್ರಿಯಾ ಯೋಜನೆಗೆ ನಮಗೆ ಸಿಗುವುದು ಕೇವಲ 83.36 ಕೋಟಿ ರೂ. ಮಾತ್ರ ಎಂದು ಆಯುಕ್ತ ವಿವರಿಸಿದರು.

ಅದರಲ್ಲೂ ಪರಿಶಿಷ್ಟ ಜಾತಿ, ಗಿರಿಜನ ಉಪ ಯೋಗಕ್ಕೆ 20 ಕೋಟಿ ಹಾಗೂ ಸಂಚಾರ ಸುಧಾರಣೆ ಕಾಮಗಾರಿಗೆ 4.16 ಕೋಟಿ ರೂ. ಬಳಸಬೇಕು. ಉಳಿದ 59.10 ಕೋಟಿ ರೂ. ಅನುದಾನ ಮಾತ್ರ ಮಳೆ ನೀರು, ಒಳಚರಂಡಿ, ರಸ್ತೆ, ಫುಟ್‍ಪಾತ್, ಸರ್ಕಲ್ ಅಭಿವೃದ್ಧಿ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಲಭ್ಯವಾಗಿದೆ ಎಂದು ಗುರುದತ್ ಹೆಗ್ಡೆ ವಿವರಿಸಿದರು.

ತಮ್ಮ ಕ್ಷೇತ್ರಕ್ಕೆ ಹೆಚ್ಚು ಹಣ ಕೊಡಿ: ತಮ್ಮ ಕ್ಷೇತ್ರಗಳಲ್ಲಿ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ರಸ್ತೆ, ಚರಂಡಿ ವ್ಯವಸ್ಥೆ, ಸ್ವಚ್ಛತೆ ಮಾಡಬೇಕಾಗಿರುವುದರಿಂದ ಆದ್ಯತೆ ಮೇರೆಗೆ ತಮಗೆ ಹೆಚ್ಚು ಅನುದಾನ ನೀಡುವಂತೆ ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇ ಗೌಡ, ಎಲ್.ನಾಗೇಂದ್ರ ಕೋರಿಕೊಂಡರು.

ತಗ್ಗು ಪ್ರದೇಶ ಹಾಗೂ ಸಿವೇಜ್ ಫಾರಂ ಇರುವ ಕಾರಣ ತಮ್ಮ ಕ್ಷೇತ್ರದಲ್ಲಿ ಮಳೆ ಬಂದಾಗಲೆಲ್ಲಾ ಒಂದಲ್ಲ ಒಂದು ಅವಾಂತರ ಉಂಟಾಗುತ್ತಿರುತ್ತವೆ. ಅದರ ನಿರ್ವಹಣೆಗೆ ಅನುದಾನ ಬೇಕು ಎಂದು ರಾಮದಾಸ್ ಕೇಳಿದರೆ, ಎಲ್ಲಾ ಸ್ಲಂಗಳೂ ನನ್ನ ಕ್ಷೇತ್ರದಲ್ಲಿರುವುದರಿಂದ ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಲಭ್ಯಕ್ಕೆ ಅನುದಾನದ ಅಗತ್ಯ ವಿದೆ ಎಂದು ಜಿ.ಟಿ.ದೇವೇಗೌಡರು ಕೋರಿದರು.

ನಮ್ಮ ಕ್ಷೇತ್ರದಲ್ಲಿ ಒಳಚರಂಡಿ, ರಸ್ತೆ ಕಾಮಗಾರಿ ಹಾಗೂ ಕುಡಿಯುವ ನೀರು ಪೂರೈಕೆ ಯೋಜನೆ ಗಳನ್ನು ಅನುಷ್ಠಾನ ಮಾಡಬೇಕಿರುವ ಕಾರಣ ಆದ್ಯತೆ ಮೇಲೆ ಅನುದಾನ ಹಂಚಿಕೆ ಮಾಡಿ ಎಂದು ಶಾಸಕ ನಾಗೇಂದ್ರ ಕೇಳಿಕೊಂಡರು.

65 ವಾರ್ಡ್‍ಗಳಿಗೂ ಹಂಚಿ: ಮೈಸೂರು ನಗರ ದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಕೆಲಸಗಳಾಗಬೇಕಾಗಿರುವುದರಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅನುದಾನವನ್ನು ಎಲ್ಲಾ 65 ವಾರ್ಡ್‍ಗಳಿಗೂ ಸಮಾನವಾಗಿ ಹಂಚಿಕೆ ಮಾಡಿ ಎಂದು ಮೇಯರ್ ತಸ್ನೀಂ ಒತ್ತಾಯಿಸಿದರು.

ಕಾರ್ಪೊರೇಟರ್, ಶಾಸಕರು ಕೈಗೊಳ್ಳುವ ಕಾಮ ಗಾರಿಗಳ ಕ್ರಿಯಾಯೋಜನೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮತ್ತೊಂದು ಸಭೆಯಲ್ಲಿ ಪರಿಶೀಲಿಸಿ ಅನುದಾನ ಹಂಚಿಕೆ ಮಾಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

Translate »