ನ್ಯಾ. ಹೆಚ್.ಎಲ್.ದತ್ತು, ಜೈ ಜಗದೀಶ್, ಮಾರ್ಗರೆಟ್ ಆಳ್ವಾ, ಚ.ಸರ್ವಮಂಗಳಾ ಸೇರಿ 63 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
ಮೈಸೂರು

ನ್ಯಾ. ಹೆಚ್.ಎಲ್.ದತ್ತು, ಜೈ ಜಗದೀಶ್, ಮಾರ್ಗರೆಟ್ ಆಳ್ವಾ, ಚ.ಸರ್ವಮಂಗಳಾ ಸೇರಿ 63 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

November 29, 2018

ಬೆಂಗಳೂರು: ರಾಜ್ಯ ಸರ್ಕಾರವು 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರಿನ ಸಾಹಿತಿ ಚ.ಸರ್ವಮಂಗಳಾ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎಲ್.ದತ್ತು, ಚಿತ್ರನಟ ಜೈ ಜಗದೀಶ್, ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಸೇರಿದಂತೆ 63 ಗಣ್ಯರಿಗೆ ನ.30ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮೈಸೂರಿನಿಂದ ಸಾಹಿತ್ಯ ಕ್ಷೇತ್ರದಲ್ಲಿ ಚ. ಸರ್ವ ಮಂಗಳಾ, ಚಲನಚಿತ್ರ ಕ್ಷೇತ್ರದಲ್ಲಿ ನಿರ್ದೇಶಕ ಭಾರ್ಗವ, ರಾಜನ್, ಶಿಕ್ಷಣ ಕ್ಷೇತ್ರದಲ್ಲಿ ಗೀತಾ ರಾಮಾನುಜಂ, ಚಾಮರಾಜನಗರ ಜಿಲ್ಲೆಯ ರಾಮ ಸಮುದ್ರದ ಚನ್ನಮಲ್ಲೇಗೌಡರಿಗೆ ಜಾನಪದ ಕ್ಷೇತ್ರದಲ್ಲಿ, ಹಾಸನದ ವಿ.ಎಸ್.ವಿನಯ ಮತ್ತು ಆರ್. ಚೇತನ್ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ, ಮಂಡ್ಯ ಜಿಲ್ಲೆ ಮಳವಳ್ಳಿಯ ಕಲ್ಮನೆ ಕಾಮೇಗೌಡರಿಗೆ ಪರಿಸರ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

ವಿವರ: ಸಾಹಿತ್ಯ ಕ್ಷೇತ್ರದಲ್ಲಿ ಎಂ.ಎಸ್.ಪ್ರಭಾಕರ (ಕಾಮರೂಪಿ), ಹಸನ್ ನಯೀಂ ಸುರಕೋಡ್, ಚ.ಸರ್ವಮಂಗಳಾ, ಚಂದ್ರಶೇಖರ ತಾಳ್ಯಾ, ರಂಗಭೂಮಿ ಕ್ಷೇತ್ರದಲ್ಲಿ ಎಸ್.ಎನ್.ರಂಗಸ್ವಾಮಿ, ಪುಟ್ಟಸ್ವಾಮಿ, ಪಂಪಣ್ಣ ಕೋಗಳಿ, ಸಂಗೀತ ಕ್ಷೇತ್ರದಲ್ಲಿ ಅಣ್ಣು ದೇವಾಡಿಗ, ನ್ಯತ್ಯದಲ್ಲಿ ಎಂ.ಆರ್.ಕೃಷ್ಣಮೂರ್ತಿ,ಜನಪದ ಕ್ಷೇತ್ರದಲ್ಲಿ ಗುರುವ ಕೊರಗ, ಶ್ರೀಮತಿ ಗಂಗ ಹುಚ್ಚಮ್ಮ, ಚನ್ನಮಲ್ಲೇಗೌಡ, ಶರಣಪ್ಪ ಬೂತೇರಾ, ಶ್ರೀಮತಿ ಶಂಕರಮ್ಮ ಮಹದೇವಪ್ಪ, ಬಸವರಾಜು ಆಲಗೂಡ, ಶ್ರೀಮತಿ ಚೂಡಾಮಣಿ ರಾಮಚಂದ್ರ, ಶಿಲ್ಪಕಲೆಯಲ್ಲಿ ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ, ಚಿತ್ರಕಲೆಯಲ್ಲಿ ಬಸವರಾಜ ರೇವಣಸಿದ್ದಪ್ಪ ಉಪ್ಪಿನ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕ್ರೀಡಾ ಕ್ಷೇತ್ರದಲ್ಲಿ ಕೆನೆತ್ ಪೂವೆಲ್, ಹಾಸನದ ವಿ.ಎಸ್.ವಿನಯ, ಆರ್.ಚೇತನ್, ಯಕ್ಷಗಾನದಲ್ಲಿ ಹಿರಿಯಡ್ಕ ಗೋಪಾಲ ರಾವ್, ಸೀತಾರಾಮ ಕುಮಾರ ಕಟೀಲು, ಬಯಲಾಟದಲ್ಲಿ ಶ್ರೀಮತಿ ಯಲ್ಲವ್ವ ರೊಡ್ಡಪ್ಪನವರ್, ಭೀಮರಾಯ ಬೋರಗಿ, ಚಲನಚಿತ್ರ ಕ್ಷೇತ್ರದಲ್ಲಿ ಭಾರ್ಗವ, ಜೈ ಜಗದೀಶ್, ರಾಜನ್, ದತ್ತುರಾಜ್, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ಗೀತಾ ರಾಮಾನುಜಂ, ಎವಿಎಸ್ ಮೂರ್ತಿ, ಡಾ. ಕೆ.ಪಿ.ಗೋಪಾಲಕೃಷ್ಣ, ಶಿವಾನಂದ ಕೌಜಲಗಿ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರೊ. ಇಸಿಜಿ ಜಸ್ಟೋ, ಸಂಕೀರ್ಣ ಕ್ಷೇತ್ರದಲ್ಲಿ ಆರ್.ಎಸ್.ರಾಜಾರಾಂ, ಮೇಜರ್ ಪ್ರದೀಪ್ ಆರ್ಯ, ಸಿ.ಕೆ.ಜೋರಾಪುರ, ನರಸಿಂಹಯ್ಯ, ಡಿ.ಸುರೇಂದ್ರಕುಮಾರ್, ಪಿ.ಬಿ.ಶಾಂತನಪ್ಪನವರ್, ನಮಶಿವಾಯಂ ರೇಗುರಾಜ್, ಟಿ.ರಾಮದಾಸ್, ಎಂ.ಜೆ.ಬ್ರಹ್ಮಯ್ಯ, ಪತ್ರಿಕೋದ್ಯಮದಲ್ಲಿ ಜಿ.ಎನ್.ರಂಗನಾಥರಾವ್, ಬಸವರಾಜ ಸ್ವಾಮಿ, ಅಮ್ಮೆಂಬಳ ಆನಂದ, ಸಹಕಾರ ಕ್ಷೇತ್ರದಲ್ಲಿ ಶ್ರೀರಾಮು, ಸಮಾಜ ಸೇವೆಯಲ್ಲಿ ಆನಂದ್ ಸಿ.ಕುಂದೂರ್, ರಾಚಪ್ಪ ಹಡಪದ, ಕೃಷ್ಣಕುಮಾರ್ ಪೂಂಜಾ, ಶ್ರೀಮತಿ ಮಾರ್ಗರೇಟ್ ಆಳ್ವಾ, ಕೃಷಿ ಕ್ಷೇತ್ರದಲ್ಲಿ ಶ್ರೀಮತಿ ಮಹದೇವ ಅಣ್ಣಾರಾವ ವಣದೆ, ಮೂಕಪ್ಪ ಪೂಜಾರ್, ಪರಿಸರದಲ್ಲಿ ಕಲ್ಮನೆ ಕಾಮೇಗೌಡ, ಸಂಘ-ಸಂಸ್ಥೆಗಳಲ್ಲಿ ರಂಗದೊರೆ ಸ್ಮಾರಕ ಆಸ್ಪತ್ರೆ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಜೆ.ವಿ.ನಾಡಗೌಡ, ಡಾ. ಸೀತಾರಾಮ ಭಟ್, ಪಿ.ಮೋಹನ್ ರಾವ್, ಡಾ.ಎಂ.ಜಿ.ಗೋಪಾಲ್, ನ್ಯಾಯಾಂಗ ಕ್ಷೇತ್ರದಲ್ಲಿ ಹೆಚ್.ಎಲ್.ದತ್ತು, ಹೊರನಾಡು ಕನ್ನಡಿಗರಲ್ಲಿ ಡಾ. ಎ.ಎ.ಶೆಟ್ಟಿ, ಸ್ವತಂತ್ರ ಹೋರಾಟಗಾರರಲ್ಲಿ ಬಸವರಾಜ ಬಿಸರಳ್ಳಿ ಅವರಿಗೆ ರಾಜ್ಯೋತ್ಸವ ಪ್ರಶಸ್ವಿ ನೀಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನ.1ರಂದು ಬೆಂಗಳೂರಿನಲ್ಲಿ ನಡೆಯಬೇಕಾಗಿತ್ತು. ಆದರೆ ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಸಮಾರಂಭವನ್ನು ಮುಂದೂಡ ಲಾಗಿದ್ದು, ನ.30ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Translate »