ಭಾರೀ ಮಳೆಗೆ ಮನೆ ಕುಸಿತ
ಮೈಸೂರು

ಭಾರೀ ಮಳೆಗೆ ಮನೆ ಕುಸಿತ

April 25, 2018

ಹೆಚ್.ಡಿ.ಕೋಟೆ: ಸರಗೂರು ತಾಲೂಕಿನ ನಂಜನಾಥಪುರ ಗ್ರಾಮದಲ್ಲಿ ಇಂದು ಸುರಿದ ಭಾರೀ ಮಳೆ-ಗಾಳಿಗೆ 6 ಮನೆಗಳ ಮೇಲ್ಛಾವಣ ಹಾರಿ ಹೋಗಿವೆ. ಗೋಡೆಗಳು ಶಿಥಿಲ ಗೊಂಡಿವೆ. ಈ ಗ್ರಾಮ ದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸವಾಗಿದ್ದು, ಹಾನಿ ಯಿಂದ ವಾಸಿಸಲು ಮನೆ ಇಲ್ಲದೆ ಬೀದಿ ಪಾಲಾಗಿದ್ದಾರೆ. ಈ ಗ್ರಾಮದಲ್ಲಿ ಹೆಚ್ಚಾಗಿ ಬಡ ಕುಟುಂಬ ದವರೇ ಇದ್ದು, ಮನೆ ಕಳೆದು ಕೊಂಡವರಿಗೆ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮನೆ ಕಳೆದುಕೊಂಡವರುಗಳು: ಚಿನ್ನಮ್ಮ, ಶಾಂತಮ್ಮ ಕಾಳಮ್ಮ, ನಿಂಗ ಜಮ್ಮ, ಪದ್ಮಾ, ದಾಸಬೋವಿ.

Translate »