ನಾನು ಮುಖ್ಯಮಂತ್ರಿ ರೇಸ್‍ನಲ್ಲಿ ಇಲ್ಲ
ಮೈಸೂರು

ನಾನು ಮುಖ್ಯಮಂತ್ರಿ ರೇಸ್‍ನಲ್ಲಿ ಇಲ್ಲ

March 22, 2021

ಮೈಸೂರು,ಮಾ.21(ಎಸ್‍ಪಿಎನ್)-ಹಿರಿಯನಾಗಿದ್ದರೂ ನಾನಂತೂ ಮುಖ್ಯ ಮಂತ್ರಿ ರೇಸ್‍ನಲ್ಲಿ ಇಲ್ಲ. ಈ ರೇಸ್‍ನಲ್ಲಿ ಹಲವು ಮುಖಂಡರಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅಭಿಪ್ರಾಯಪಟ್ಟರು.

ಮೈಸೂರಿನ ಖಾಸಗಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಪ್ರಸ್ತುತ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಲ್ಲಾ ಮುಖಂ ಡರ ಜವಾಬ್ದಾರಿಯಾಗಿದೆ. ಮುಖ್ಯಮಂತ್ರಿ ಸಾಲಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರಿದ್ದಾರೆ. ಇವ ರಲ್ಲಿ ಯಾರೂ ಬೇಕಾದರೂ ಸಿಎಂ ಆಗ ಬಹುದು ಎಂದು ತಿಳಿಸಿದರು.

ನಾನು ಒಂದು ಪಂಗಡಕ್ಕೆ ಸೀಮಿತ ವಾಗಿಲ್ಲ. ಎಡಗೈ ಸಮುದಾಯಕ್ಕೆ ಕಾರ್ಯಾ ಧ್ಯಕ್ಷ ಸ್ಥಾನ ನೀಡುವ ಬಗ್ಗೆ ಪಕ್ಷದ ವೇದಿಕೆ ಯಲ್ಲಿ ಮಾತನಾಡಿದ್ದೇನೆ. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾಥ್ ನೀಡಿ ದ್ದಾರೆ. ಪಕ್ಷದಲ್ಲಿ ಹಳಬರು, ಹೊಸಬರು ಎಂಬ ಭೇದ ಮಾಡಿಲ್ಲ. ನಾವೆಲ್ಲ ಸಿದ್ದ ರಾಮಯ್ಯರೊಂದಿಗೆ ಇದ್ದೀವಿ. ಹೈಕ ಮಾಂಡ್ ತೀರ್ಮಾನದಂತೆ ನಾವೆಲ್ಲರೂ ನಡೆದುಕೊಳ್ಳುತ್ತೇವೆ ಎಂದ ತಿಳಿಸಿದರು.

ಮೀಸಲಾತಿಗೆ ವೈಜ್ಞಾನಿಕ ಚರ್ಚೆ ಆಗಲಿ: ಪರಿಶಿಷ್ಟ ಜಾತಿಯಲ್ಲಿ ಬಲಗೈ, ಎಡಗೈ, ಲಂಬಾಣಿ ಸೇರಿದಂತೆ 101 ಉಪ ಜಾತಿ ಗಳಿವೆ. ಈ ಎಲ್ಲಾ ಒಳಪಂಗಡಗಳಿಗೂ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದರೆ ಸರಿಪಡಿಸಬೇಕು. ಇದರ ಬಗ್ಗೆ ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ಕಾಲದಲ್ಲಿ ಅದನ್ನು ಸರಿಪಡಿಸಲು ಪಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇಂದಿನ ಬಿ.ಎಸ್.ಯಡಿ ಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಸಚಿವ ಸಂಪುಟ ದಲ್ಲಿ ಇದರ ಗಮನಹರಿಸಬೇಕು ಎಂದರು.

ಕುರುಬ ಸಮುದಾಯ ಎಸ್ಟಿಗೆ, ಪಂಚಮ ಸಾಲಿ ಸಮಾಜ 2ಎಗೆ ಸೇರಿಸುವಂತೆÉ ಇನ್ನೂ ಹಲವು ಸಮಾಜಗಳು ಒತ್ತಾಯಿಸುತ್ತಿವೆ. ಇದರ ಬಗ್ಗೆ ರಾಜ್ಯ ಸರ್ಕಾರ ವೈಜ್ಞಾನಿಕ ತೀರ್ಮಾನ ತೆಗೆದುಕೊಳ್ಳಬೇಕು ಎಂದರ ಲ್ಲದೆ, ಈ ಹಿಂದೆ ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಾಡು ಗೊಲ್ಲ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ ಊರು ಗೊಲ್ಲ, ಕಾಡು ಗೊಲ್ಲ ಎಂಬ ಎರಡು ಉಪ ಪಂಗಡಗಳಿವೆ. ಅದೇ ರೀತಿ ಕುರುಬ ಸಮುದಾಯದಲ್ಲಿ ಕಾಡು ಕುರುಬ, ಜೇನು ಕುರುಬ ಎಂಬ ಉಪಪಂಗಡಗಳಿವೆ. ಎಲ್ಲವನ್ನೂ ರಾಜ್ಯ ಸರ್ಕಾರ ಪರಿಗಣಿಸಿ, ಯಾವ ಸಮುದಾಯಕ್ಕೆ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರುವ ಲಕ್ಷಣಗಳಿವೆ. ಹಾಗಾಗಿ ಸುಖಾಸುಮ್ಮನೆ ಚರ್ಚೆ ಮಾಡೋದು ಸರಿಯಿಲ್ಲ ಎಂದರು.
ಎಡಗೈ ಸಮುದಾಯಕ್ಕೆ ಒಳ ಮೀಸ ಲಾತಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳದಿದ್ದರೆ, ಇನ್ನೆಷ್ಟು ವರ್ಷ ಈ ಸಮುದಾಯ ಬೀದಿಯಲ್ಲಿ ಹೋರಾಟ ಮಾಡಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವಣ್ಣ ಅವರ ಚಿಂತನೆ, ತತ್ವ ಅಳವಡಿಸಿಕೊಂಡಿದ್ದರೆ, ಇದರ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ, (ಕಾನೂನು ವ್ಯಾಪ್ತಿಯಲ್ಲಿ) ಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.

ನಮ್ಮ ಅಭ್ಯರ್ಥಿಗಳಿಗೆ ಗೆಲವು: ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ದಿನಾಂಕ ಘೋಷಣೆ ಯಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಈ ಚುನಾವಣೆ ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾನೂನು, ಇಂಧನ ಬೆಲೆ ಏರಿಕೆ ವಿರುದ್ಧ ಅಲ್ಲಿನ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಂದು ವೇಳೆ ಅಲ್ಲಿನ ಮತದಾರರು ಹಣ ವ್ಯಾಮೋಹಕ್ಕೆ ಒಳಗಾದರೆ, ಸ್ಪಲ್ಪ ಕಷ್ಟವಾಗಬಹುದು. ಆದರೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲವು ಸಾಧಿಸಲಿದ್ದಾರೆ ಎಂದರಲ್ಲಿದೆ, ರಾಜ್ಯದಲ್ಲಿ ಬಿಎಸ್‍ವೈ ಬದಲಾದರೆ, ಅದು ನಮ್ಮ ಪಕ್ಷಕ್ಕೆ ಅನುಕೂಲ ಎಂದರು.

Translate »