ನಾನೇ ಮುಖ್ಯಮಂತ್ರಿ ಆಗಿ ನೀರಾವರಿ ಯೋಜನೆಗೆ ಚಾಲನೆ ನೀಡ್ತೇನೆ…!
News

ನಾನೇ ಮುಖ್ಯಮಂತ್ರಿ ಆಗಿ ನೀರಾವರಿ ಯೋಜನೆಗೆ ಚಾಲನೆ ನೀಡ್ತೇನೆ…!

April 8, 2022

ಬೆಂಗಳೂರು ಏ.7(ಕೆಎಂಶಿ)- ಮುಂಬ ರುವ ವಿಧಾನಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬರಲಿದ್ದು, ನಾನೇ ಮುಖ್ಯಮಂತ್ರಿಯಾಗಿ ನೀರಾ ವರಿ ಯೋಜನೆಗಳಿಗೆ ಚಾಲನೆ ನೀಡುತ್ತೇನೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿರುವ ಕಾಲದಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.

ಪಕ್ಷದ ವರಿಷ್ಠ ರಾಹುಲ್‍ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿ, ಹಿಂತಿರುಗಿದ ನಂತರ ಸಿದ್ದರಾಮಯ್ಯ
ಅವರು, ಇಂತಹ ಹೇಳಿಕೆ ನೀಡಿರುವುದು ಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಸ್ವಕ್ಷೇತ್ರ ಬಾದಾಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ನೀರಾವರಿ ಯೋಜನೆಯೊಂದರ ಅನುಷ್ಠಾನವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಈ ಮಾತುಗಳನ್ನಾಡಿದ್ದಾರೆ. ಕ್ಷೇತ್ರದ ಸಿಂಧೂರು ಕೆರೆಗೆ ನೀರು ಹರಿಸುವುದು ಮತ್ತು ಬ್ಯಾರೇಜ್ ನಿರ್ಮಿಸುವ ಕೆಲಸ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದು ಇದನ್ನು ಈಡೇರಿಸುವಲ್ಲಿ ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ್ ವಿಫಲರಾಗಿದ್ದಾರೆ. ಅವರಿಗೆ ಎಷ್ಟೋ ಬಾರಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರೂ, ಫಲಪ್ರದವಾಗಿಲ್ಲ. ಅವರು ಮಾಡುವುದಾದರೆ ಮಾಡಲಿ,ಇಲ್ಲದಿದ್ದರೆ ಬಿಡಲಿ, ಇನ್ನೊಂದೇ ವರ್ಷ. ವಿಧಾನಸಭೆ ಚುನಾವಣೆ ನಡೆದು ನಾನೇ ಅಧಿಕಾರಕ್ಕೆ ಬಂದಿರುತ್ತೇನೆ. ಯಾವ ಅನುಮಾನವೂ ಬೇಡ. ಈ ಯೋಜನೆಗಳನ್ನು ನಾನೇ ಪೂರೈಸಿಕೊಡುತ್ತೇನೆ ಎಂದು ಈ ಸಭೆಯಲ್ಲಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Translate »