ರಾಜ್ಯ ಸರ್ಕಾರದ ಲೋಪದೋಷ ಪತ್ತೆ ಹಚ್ಚಿ  ಪತ್ರಿಕಾಗೋಷ್ಠಿ ಮೂಲಕ ಜನರ ಮುಂದಿಡಿ
ಮೈಸೂರು

ರಾಜ್ಯ ಸರ್ಕಾರದ ಲೋಪದೋಷ ಪತ್ತೆ ಹಚ್ಚಿ ಪತ್ರಿಕಾಗೋಷ್ಠಿ ಮೂಲಕ ಜನರ ಮುಂದಿಡಿ

June 15, 2021

ಮೈಸೂರು,ಜೂ.14(ಆರ್‍ಕೆಬಿ)- ರಾಜ್ಯ ಸರ್ಕಾರದ ಲೋಪದೋಷ ಪತ್ತೆ ಹಚ್ಚಿ ಅವುಗಳ ಕುರಿತಂತೆ ಪತ್ರಿಕಾಗೋಷ್ಠಿ ಮತ್ತು ಪ್ರತಿಭಟನೆಗಳ ಮೂಲಕ ಜನಸಾಮಾನ್ಯರ ಮುಂದಿಡುವ ಕೆಲಸ ಮಾಡುವಂತೆ ಮೈಸೂರು ವಿಭಾಗದ ಮಾಧ್ಯಮ ಉಸ್ತು ವಾರಿ ರಾಜು ಇಂದಿಲ್ಲಿ ಕಾಂಗ್ರೆಸ್ ಮಾಧ್ಯಮ ವಕ್ತಾರರಿಗೆ ಸಲಹೆ ನೀಡಿದರು.

ಕೆಪಿಸಿಸಿ ಮೈಸೂರು ವಿಭಾಗದ ಮಾಧ್ಯಮ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಸೋಮವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಾಧ್ಯಮದ ವಿಶೇಷ ಸಭೆಯಲ್ಲಿ ಮಾತನಾಡಿದರು. ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವುದು ಹೇಗೆ? ಏನೇನು ಜವಾಬ್ದಾರಿಗಳನ್ನು ನಿಭಾಯಿಸ ಬೇಕು? ಎಂಬ ಸೂಚನೆಗಳನ್ನು ಕೆಪಿಸಿಸಿ ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಮಟ್ಟದಲ್ಲಿಯೂ ಮಾಧ್ಯಮ ವಕ್ತಾರರ ನೇಮಕವಾಗಲಿದೆ. ಬರೀ ಪತ್ರಿಕಾಗೋಷ್ಠಿ ಮಾಡಿದರೆ ಸಾಲದು, ಅದು ಎಷ್ಟು ಜನ ರಿಗೆ ತಲುಪುತ್ತದೆ ಎಂಬುದೂ ಇಲ್ಲಿ ಬಹಳ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಮಾಧ್ಯಮದ ಜವಾಬ್ದಾರಿ ಹೊತ್ತಿರುವ ಪ್ರಮುಖರು, ಹಿಂದಿನ ಸರ್ಕಾರದಲ್ಲಿ ಕಾಂಗ್ರೆಸ್ ಆಡಳಿತದ ಜನ ಪರ ಕೊಡುಗೆಗಳು, ಪರಿಶ್ರಮ ಮತ್ತು ಪ್ರಸ್ತುತ ಸರ್ಕಾರದ ವೈಫಲ್ಯಗಳ ಬಗ್ಗೆ ಪತ್ರಿಕಾಗೋಷ್ಠಿಗಳ ಮೂಲಕ ಜನರ ಮುಂದಿ ಡುವ ಕೆಲಸ ಮಾಡುವಂತೆ ತಿಳಿಸಿದರು.
ಕಾಂಗ್ರೆಸ್ ಕಚೇರಿಗಳಿಗೆ ಸೀಮಿತವಾಗಿದ್ದ ಪಕ್ಷದ ಮಾಧ್ಯಮ ವಿಭಾಗವನ್ನು ಸಮ ರ್ಪಕ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಕೆಪಿಸಿಸಿ ಸೂಚನೆ ನೀಡಿದೆ. ಹಾಗಾಗಿ ಮಾಧ್ಯಮ ವಕ್ತಾರರು ಪಕ್ಷಕ್ಕೆ ನಿಷ್ಠೆಯಿಂದ ತಮ್ಮ ಸಮಯವನ್ನು ಹೆಚ್ಚು ವಿನಿಯೋಗಿಸಿ ಕೆಲಸ ಮಾಡಿದರೆ ಅಂಥವರನ್ನು ಪಕ್ಷ ಗುರ್ತಿಸುತ್ತದೆ ಎಂದರು.

ಪ್ರತಿ ಬ್ಲಾಕ್‍ಗೆ ಒಬ್ಬೊಬ್ಬ ಮಾಧ್ಯಮ ವಕ್ತಾ ರರ ನೇಮಕ ಆಗಲಿದ್ದು, ಪ್ರತಿದಿನದ ಆಗು ಹೋಗುಗಳನ್ನು ತಿಳಿದವರಿಗೆ ಈ ಅವಕಾಶ ನೀಡಲಾಗುವುದು. ಬ್ಲಾಕ್ ಮಟ್ಟದಲ್ಲಿ ವಾರ ಕ್ಕೊಮ್ಮೆ ಗೋಷ್ಠಿ ಅಥವಾ ಪ್ರತಿಭಟನೆ ಏರ್ಪ ಡಿಸಬೇಕಾಗುತ್ತದೆ. ಈ ಮೂಲಕ ಪಕ್ಷದತ್ತ ಹೆಚ್ಚು ಜನರನ್ನು ಸೆಳೆಯುವಂತಾಗಬೇಕು ಎಂದರು. ಶೀಘ್ರದಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿದೆ. ಮುಂದಿನ 20 ತಿಂಗಳಲ್ಲಿ ವಿಧಾನ ಸಭಾ ಚುನಾವಣೆಯೂ ಬರಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮಾಧ್ಯಮ ವಿಭಾಗ ಕೆಲಸ ಮಾಡಬೇಕಾಗುತ್ತದೆ. ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಪತ್ರಿಕಾ ಗೋಷ್ಠಿಗಳನ್ನು ನಡೆಸಬೇಕು. ಗೋಷ್ಠಿಗಳನ್ನು ಮಾಡಿದವರೇ ಮಾಡದೇ ರೊಟೇಷನ್ ಪ್ರಕಾರ ನಡೆಸಿ, ಬೇರೆಯವರಿಗೂ ಅವಕಾಶ ನೀಡಬೇಕು. ಆದರೆ ಪ್ರತಿಯೊಂದು ವಿಚಾರಕ್ಕೂ ಗೋಷ್ಠಿ ಮುಖ್ಯವಲ್ಲ. ಗೋಷ್ಠಿಗಳಲ್ಲಿ ಆಧಾರ ರಹಿತ ಆರೋಪಗಳನ್ನು ಮಾಡುವಂತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುವಾಗ ಅಧ್ಯಕ್ಷರ ಗಮನಕ್ಕೆ ತಂದು ಅದರ ಸತ್ಯಾಸತ್ಯತೆ ಅರಿತು ಮಾಡಬೇಕಾ ಗುತ್ತದೆ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಪಕ್ಷದಲ್ಲಿನ ಎಲ್ಲಾ ಕಾರ್ಯಚಟುವಟಿಕೆಗಳ ಮೇಲೆ ಕೆಪಿಸಿಸಿ ಮಾಧ್ಯಮ ವಿಭಾಗ ಕಣ್ಣಿಟ್ಟಿದ್ದು, ಪ್ರತಿಯೊಂ ದನ್ನು ಕೆಪಿಸಿಸಿ ಗಮನಕ್ಕೆ ತರಲಾಗುತ್ತದೆ. ಹಾಗಾಗಿ ಜವಾಬ್ದಾರಿ ಹೊತ್ತವರು ಎಚ್ಚರಿಕೆ ಯಿಂದ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಕ್ತಾರ ರಾದ ಹೆಚ್.ಎ.ವೆಂಕಟೇಶ್, ಎಂ.ಲಕ್ಷ್ಮಣ, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಯಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಮಹಿಳಾ ಘಟಕದ ನಗರಾ ಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೇಯರ್ ಚಿಕ್ಕಣ್ಣ, ಸೇವಾದಳ ನಗರ ಘಟಕದ ಅಧ್ಯಕ್ಷ ಗಿರೀಶ್, ನಗರ ಕಾಂಗ್ರೆಸ್ ವಕ್ತಾರ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »