ಮೈಸೂರು ಭೂ ಕಬಳಿಕೆ ಆರೋಪ; ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಮೈಸೂರು ಭೂ ಕಬಳಿಕೆ ಆರೋಪ; ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

June 15, 2021

ಮೈಸೂರು,ಜೂ.14(ಪಿಎಂ)- ಮೈಸೂರು ಭೂ ಕಬಳಿಕೆ ಆರೋಪ ಸಂಬಂಧ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಮೈಸೂರು ಸುತ್ತಮುತ್ತ ಗೋಮಾಳ, ಸರ್ಕಾರಿ ಭೂಮಿ, ಕೆರೆ-ಕಾಲುವೆ ಒತ್ತುವರಿ ಮಾಡಿರುವ ಸಂಬಂಧ ಪ್ರಮುಖ ಮೂರು ಪಕ್ಷಗಳ ಪ್ರಭಾವಿ ಮುಖಂ ಡರು ಭಾಗಿಯಾಗಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದಕ್ಷ ಅಧಿ ಕಾರಿಗಳ ತಂಡ ರಚಿಸಿ, 2000 ಇಸವಿ ಯಿಂದಲೂ ತನಿಖೆಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಭೂ ಕಬಳಿಕೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖ ಲಿಸಿ, ಜೈಲಿಗೆ ಕಳುಹಿಸಬೇಕು. ಈಗಾಗಲೇ ಹಿಂದೆ ಮೈಸೂರು ಡಿಸಿಯಾಗಿದ್ದ ವಿಜಯ ಭಾಸ್ಕರ್ ಸಲ್ಲಿಸಿರುವ ವರದಿಯನ್ನು ಗಂಭೀರ ವಾಗಿ ಪರಿಗಣಿಸಿ, ಕಬಳಿಸಿರುವ ಸರ್ಕಾರಿ ಭೂಮಿಯನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು. ಭತ್ತ, ರಾಗಿ ಸೇರಿ ದಂತೆ 25 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸಂಬಂಧ ಶಾಸನಬದ್ಧ ಖಾತ್ರಿ ನೀಡ ಬೇಕು. ಸಂಕಷ್ಟಕ್ಕೀಡಾಗಿರುವ ಕೈಗಾರಿಕೆಗಳಿಗೆ ಪುನಶ್ಚೇತನ ಸಾಲ ನೀಡುವ ರೀತಿಯಲ್ಲಿ ಕೋವಿಡ್‍ನಿಂದ ಸಂಕಷ್ಟದಲ್ಲಿರುವ ರೈತರಿಗೆ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಹೊಸ ಸಾಲ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ 2021-22ನೇ ಸಾಲಿಗೆ ಎಫ್‍ಆರ್‍ಪಿ ದರವನ್ನು ಟನ್‍ಗೆ 3,200 ರೂ. ನಿಗದಿ ಮಾಡುವ ಜೊತೆಗೆ ಹಿಂದಿನ ಎರಡು ವರ್ಷಗಳ ಕಬ್ಬಿನ ಉಪ ಉತ್ಪನ್ನ ಗಳ ಲಾಭವನ್ನು ಹಂಚಿಕೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಫೈನಾನ್ಸ್ ಗಳ ಸಾಲ ವಸೂಲಾತಿಗೆ ಮುಂದಿನ ಮಾರ್ಚ್‍ವರೆಗೆ ತಡೆ ಹಾಕಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಂಘದ ಮುಖಂಡರಾದ ರಾಮೇಗೌಡ, ನಾಗ ರಾಜು, ಬಸವರಾಜು ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »