ಜೈವಿಕ ವೈವಿಧ್ಯತೆಗೆ ಧಕ್ಕೆಯಾದರೆ ಪರಿಸರ ವೈಪರೀತ್ಯದಿಂದ ಮಾನವನಿಗೆ ಕಂಟಕ
ಮೈಸೂರು

ಜೈವಿಕ ವೈವಿಧ್ಯತೆಗೆ ಧಕ್ಕೆಯಾದರೆ ಪರಿಸರ ವೈಪರೀತ್ಯದಿಂದ ಮಾನವನಿಗೆ ಕಂಟಕ

October 28, 2018

ಮೈಸೂರು:  ಜೈವಿಕ ವೈವಿ ಧ್ಯತೆಗೆ ಧಕ್ಕೆಯಾಗದಂತೆ ಕಾರ್ಖಾನೆಗಳು ಕಾರ್ಯನಿರ್ವಹಿಸದಿದ್ದಲ್ಲಿ ಪರಿಸರ ವೈಪ ರೀತ್ಯದಿಂದ ಮಾನವನಿಗೇ ಕಂಟಕವಾಗ ಲಿದೆ. ಹೀಗಾಗಿ ಕೈಗಾರಿಕೆಗಳು `ಜೈವಿಕ ವೈವಿ ಧ್ಯತೆ ಕಾಯ್ದೆ 2002’ರ ಪರಿಧಿಯೊಳಗೆ ಕಾರ್ಯ ಚಟುವಟಿಕೆ ನಡೆಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಾಂತ ಕುಮಾರ್ ಹೇಳಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ ಶನಿವಾರ ಮೈಸೂರು ಹಾಗೂ ಸುತ್ತಮುತ್ತಲ ಕೈಗಾರಿಕೋದ್ಯಮಿಗಳಿಗೆ `ಜೈವಿಕ ವೈವಿಧ್ಯತೆ ಕಾಯ್ದೆ 2002’ ಕುರಿ ತಂತೆ ಹಮ್ಮಿಕೊಂಡಿದ್ದ ಅರಿವು ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿದರು.

ಜೈವಿಕ ಸಂಪನ್ಮೂಲ ಬಳಕೆಯ ಸಂಬಂಧ ಕೈಗಾರಿಕೆಗಳು `ಜೈವಿಕ ವೈವಿಧ್ಯತೆ ಕಾಯ್ದೆ 2002’ಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸ ಬೇಕು. ಇದಕ್ಕಾಗಿ ಕಾಯ್ದೆಯನ್ನು ಮೊದಲ ಅರ್ಥ ಮಾಡಿಕೊಳ್ಳಬೇಕು. ಸಾವಿರಾರು ವರ್ಷ ಗಳ ಹಿಂದೆ ಯಾವುದೇ ಆಧುನಿಕ ಪರಿಕರ ಗಳು ಇಲ್ಲದೇ ಇದ್ದರೂ ಮನುಷ್ಯ ತನ್ನ ಜೀವನ ನಿರ್ವಹಣೆ ಮಾಡಿದ್ದಾನೆ. ಆ ವೇಳೆ ಆರೋಗ್ಯ ದಿಂದ ಬದುಕು ದೂಡಿದ್ದಾನೆ. ಆದರೆ ಇಂದು ಮಾಲಿನ್ಯ ವ್ಯಾಪಕವಾಗುತ್ತಿರುವ ಪರಿ ಣಾಮ ಅನೇಕ ರೋಗ-ರುಜಿನಗಳು ಮಾನವ ನನ್ನು ಕಾಡುತ್ತಿರುವುದು ಮಾತ್ರವಲ್ಲದೆ, ಪ್ರಕೃತಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ವಿಷಾದಿಸಿದರು.

ನಗರ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಪರಿಣಾಮ ಅಲ್ಲಿನ ಜನಜೀವನ ದಲ್ಲಿ ಅನಾರೋಗ್ಯ ಹೆಚ್ಚಳವಾಗುತ್ತಿದೆ. ಜೊತೆಗೆ ಆಯಸ್ಸು ಸಹ ಇಳಿಮುಖವಾಗುತ್ತಿದೆ. ಜೀವ ವೈವಿಧ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿ ಸುವ ಸಲುವಾಗಿ `ಜೈವಿಕ ವೈವಿಧ್ಯತೆ ಕಾಯ್ದೆ 2002’ ರೂಪುಗೊಂಡಿದ್ದು, ಜೈವಿಕ ಸಂಪ ನ್ಮೂಲ ಬಳಕೆ ವೇಳೆ ಈ ಕಾಯ್ದೆಯ ರೂಪು ರೇಷೆಗಳನ್ನು ಗಮನದಲ್ಲಿರಿಸಿಕೊಂಡು ಮುಂದು ವರೆಯಬೇಕು ಎಂದು ತಿಳಿಸಿದರು.

ಈ ಕಾಯ್ದೆ ಸಂಬಂಧ ಅರಿವು ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅರಿವು ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗಿದೆ. ಇಂದು ಮೈಸೂರಿನಲ್ಲಿ ನಡೆ ಯುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಡಾ.ಸುಹಾಸ್ ನಿಂಬಾ ಳ್ಕರ್ ಮಾತನಾಡಿ, ಭಾರತದಲ್ಲಿ ವೈವಿದ್ಯ ಮಯ ಆಹಾರ ಬೆಳೆ ಇದ್ದು, ಆಹಾರ ಭದ್ರತೆಯೊಂದಿಗೆ ಜೀವ ವೈವಿಧ್ಯತೆ ಕಾಯ್ದು ಕೊಳ್ಳಬೇಕು. ಜೈವಿಕ ಸಂಪನ್ಮೂಲ ಬಳಕೆ ಸಂಬಂಧ ಹಣ ಗಳಿಸುವುದೇ ಉz್ದÉೀಶ ವಾಗಬಾರದು. ಜೊತೆಗೆ ಜೀವವೈವಿಧ್ಯತೆ ಉಳಿಸಿ ಪರಿಸರ ಸಂರಕ್ಷಣೆಗೆ ಪೂರಕವಾಗಿ ನಡೆದುಕೊಳ್ಳುವ ಸದುದ್ದೇಶವೂ ನಮ್ಮ ಲ್ಲಿರಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ `ಜೈವಿಕ ವೈವಿಧ್ಯತೆ ಕಾಯ್ದೆ 2002’ರ ವಿವರ ಒಳಗೊಂಡ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. 30ಕ್ಕೂ ಹೆಚ್ಚು ಮಂದಿ ಕೈಗಾರಿಕೋದ್ಯಮಿಗಳು ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿ ವಿದ್ಯಾ ಪ್ರದೀಪ್‍ಕುಮಾರ್, ಕಾರ್ಯಾ ಗಾರದ ಸಂಚಾಲಕ ಎಸ್.ಯು.ರಾಘ ವೇಂದ್ರ ಮತ್ತಿತರರು ಹಾಜರಿದ್ದರು.

Translate »