ಮೈಸೂರು: ಮನೆಯ ಅಂದ ಹೆಚ್ಚಿಸುವ ಪೀಠೋ ಪಕರಣಗಳ ಮಾರಾಟ ಮಳಿಗೆ ಎನ್-ಫರ್ನಿಚ್ ಶೋ ರೂಂ ಅನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚಿತ್ರನಟ ದರ್ಶನ್ ತೂಗುದೀಪ ಉದ್ಘಾಟಿಸಿದರು.
ಮೈಸೂರಿನ ವಿಜಯನಗರ 3ನೇ ಹಂತದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶೋ ರೂಂನಲ್ಲಿ ಮನೆಯ ಅಂದ ಹೆಚ್ಚಿಸುವ ಪೀಠೋಪಕರಣಗಳನ್ನು ಮಾರಾಟ ಕ್ಕಿಡಲಾಗಿದೆ. ಮಂಚ, ದಿವಾನ್, ಸೆಂಟರ್ ಟೇಬಲ್, ಊಟದ ಟೇಬಲ್, ಹಾಗೂ ಕರ್ಟನ್ಸ್, ಕ್ಯಾಟ್‍ಲಾಗ್ ಮತ್ತು ಹಾರ್ಡ್‍ವುಡ್‍ನಿಂದ ತಯಾರಿಸಿದ ಮರದ ಗಡಿಯಾರ, ಹ್ಯಾಂಗರ್ಸ್, ಹಾಸಿಗೆ, ಫ್ಯಾಬ್ರಿಕ್ ಸೋಫಾ ಸೆಟ್, ವಿಶೇಷವಾದ ಆಸನಗಳು ಎಲ್ಲಾ ವರ್ಗದ ಜನರು ಖರೀದಿಸುವ ಬೆಲೆಯಲ್ಲಿ ಲಭ್ಯವಿವೆ ಎಂದು ಮಾಲೀಕ ರಾದ ನಾಗಲಿಂಗಸ್ವಾಮಿ ಹೇಳಿದ್ದಾರೆ.
ಅಲ್ಲದೇ, ಜಯಪುರ, ರಾಜಸ್ಥಾನ್ ಹಾಗೂ ಮುಂಬೈ ಮಾದರಿಯ ವಿಶೇಷ ಕರಕುಶಲತೆಯ ಬುದ್ಧ, ಗಣೇಶನ ಮೂರ್ತಿಗಳು, ಅಲಂ ಕಾರಿಕ ಶೈಲಿಯ ವಿವಿಧ ಫೋಟೋ ಫ್ರೇಮ್‍ಗಳು, ಅಡುಗೆ ಮನೆಗೆ ಬೇಕಾಗುವ ಅಲಂಕಾರಿಕ ಪದಾರ್ಥಗಳು ಒಂದೇ ಸೂರಿ ನಡಿ ರಿಯಾಯಿತಿ ದರದಲ್ಲಿ ದೊರೆಯಲಿವೆ. ಮೈಸೂರಿನಲ್ಲಿ ಆದಷ್ಟು ಬೇಗ ಮತ್ತೊಂದು ಶಾಖೆಯನ್ನು ತೆರೆದು ಗ್ರಾಹಕರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.ಕಂಪನಿಯ ವ್ಯವಸ್ಥಾಪಕಿ ನಿಖಿತಾ, ಶೋ ರೂಂ ನಿರ್ದೇಶಕ ರವಿ, ಶಾಂತಮಲ್ಲೇಶಪ್ಪ ಮತ್ತಿತರರು ಹಾಜರಿದ್ದರು.