ಭಗವಂತನ ಕೃಪೆಯಿದ್ದರೆ ಮುಖ್ಯಮಂತ್ರಿಯಾಗುತ್ತೇನೆ
ಮೈಸೂರು

ಭಗವಂತನ ಕೃಪೆಯಿದ್ದರೆ ಮುಖ್ಯಮಂತ್ರಿಯಾಗುತ್ತೇನೆ

September 17, 2018

ಕಲಬುರಗಿ, ಸೆ.16-: ಭಗವಂತನ ಕೃಪೆ ಇದ್ದರೆ ಮುಖ್ಯ ಮಂತ್ರಿ ಆಗ್ತೀನಿ, ಅದಕ್ಕೆ ಅವಸರ ಇಲ್ಲ. ನಮ್ಮ ಸರ ಕಾರದ ಬಗ್ಗೆ ಆತಂಕಪಡುವ ಅವ ಶ್ಯಕತೆ ಇಲ್ಲ. ಅರ್ಜೆಂಟ್‍ನಲ್ಲಿ ಹೋದರೆ ಅಪಘಾತ ಜಾಸ್ತಿ ಆಗುತ್ತದೆ. ಹಾಗಾಗಿ ನಿಧಾನವಾಗಿ ನಮ್ಮ ಸರಕಾರ ಹೋಗು ತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗಾಣಗಾಪುರದ ದತ್ತಾ ತ್ರೇಯ ದೇವರಿಗೆ ಪೂಜೆಯ ಬಳಿಕ ಮಾತನಾಡಿದ ಅವರು, ಆಪರೇಷನ್ ಕಮಲದ ಹೆಸರಲ್ಲಿ 15ರಿಂದ 16 ಜನ ಶಾಸಕರು, ಮಾಜಿ ಶಾಸಕರಿಗೆ ಸಂಪರ್ಕ ಮಾಡ್ತಿದ್ದಾರೆ.

ಬಿ.ಸಿ.ಪಾಟೀಲ್, ರಹೀಮ್ ಖಾನ್ ಸಹಿತ ಅನೇಕ ಜನರನ್ನು ಸಂಪರ್ಕ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸರಕಾರ ರಚನೆ ಮಾಡೋದಕ್ಕೆ ರಾಹುಲ್ ಗಾಂಧಿ ತೀರ್ಮಾನಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬದ್ಧರಾಗಿದ್ದೇವೆ ಎಂದಿದ್ದಾರೆ. ದೇವರ ಸನ್ನಿಧಾನದಲ್ಲಿ ನಿಂತು ಮಾತಾಡ್ತಾ ಇದ್ದೀನಿ. ನಾನು ಯಾವುದೇ ತರಹದ ತಪ್ಪು ಮಾಡಿಲ್ಲ, ನನಗೆ ಸಂಕಷ್ಟ ಎದುರಾದಾಗ ದೇವರು ಅದನ್ನು ಎದುರಿಸೋ ಶಕ್ತಿ ಕೊಟ್ಟಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Translate »