ಮೈಸೂರಿಗರ ಗಮನ ಸೆಳೆದ ಮಹಿಳೆಯರ `ಸೀರೆ ನಡಿಗೆ’
ಮೈಸೂರು

ಮೈಸೂರಿಗರ ಗಮನ ಸೆಳೆದ ಮಹಿಳೆಯರ `ಸೀರೆ ನಡಿಗೆ’

September 17, 2018

ಮೈಸೂರು: ‘ಆರೋಗ್ಯವಂತ ಮಹಿಳೆ-ಸಂತಸದ ಮನೆ’ ವಿಷಯ ಕುರಿತಂತೆ ಜನಜಾಗೃತಿ ಮೂಡಿಸಲು ಬಣ್ಣ ಬಣ್ಣದ ಸೀರೆ ತೊಟ್ಟಿದ್ದ ನೂರಾರು ಮಹಿಳೆಯರು ಇಂದು ಬೆಳಿಗ್ಗೆ ಮೈಸೂರಿನಲ್ಲಿ ‘ಸೀರೆ ನಡಿಗೆ’ಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಮಹಿಳೆಯರು ಸೀರೆ ತೊಟ್ಟು ನಡೆಯುವ ಸ್ಪರ್ಧೆಯಲ್ಲಿ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಬೆಳಿಗ್ಗೆ 6 ಗಂಟೆಗೆ ಮಹಾರಾಜ ಜೂನಿಯರ್ ಕಾಲೇಜು ಮೈದಾನದ ಜೆ.ಎಲ್‍ಬಿ ರಸ್ತೆ ಯಲ್ಲಿ ರಾಜಮಾತೆ ಪ್ರಮೋದಾ ದೇವಿ ಹಸಿರು ನಿಶಾನೆ ತೋರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿ, ಜಾವಗಲ್ ಶ್ರೀನಾಥ್ ವೃತ್ತ (ರೋಟರಿ ಶಾಲೆ ವೃತ್ತ)ದವರೆಗೂ ಅವರು ವೇಗದ ನಡಿಗೆಯಲ್ಲಿ ಪಾಲ್ಗೊಂಡಿದ್ದರು. 3 ಕಿ.ಮೀ. ಉದ್ದದ ವೇಗದ ಸೀರೆ ನಡಿಗೆ, ಜಾವಗಲ್ ಶ್ರೀನಾಥ್ ವೃತ್ತದಿಂದ ಎಂ.ಎನ್. ಜೋಯಿಸ್ ವೃತ್ತ, ಸೀತಾ ವಿಲಾಸ ರಸ್ತೆ, ರಮಾವಿಲಾಸ ರಸ್ತೆ,

ಸಂತೆಪೇಟೆ ಜಂಕ್ಷನ್, ಡಿ.ದೇವರಾಜ ಅರಸು ರಸ್ತೆ ಮೂಲಕ ಮತ್ತೆ ಆರಂಭ ಸ್ಥಳದಲ್ಲಿಯೇ ನಡಿಗೆ ಸ್ಪರ್ಧೆ ಅಂತ್ಯಗೊಂಡಿತು. ವೇಗದ ಸೀರೆ ನಡಿಗೆ ಸ್ಪರ್ಧೆಯಲ್ಲಿ 20ರ ಹರೆಯದಿಂದ 84ರ ಹಿರಿಯ ನಾಗರಿಕರವರೆಗೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮಹಿಳೆಯರ ಆರೋಗ್ಯ ರಕ್ಷಿಸಲು ಮಹಿಳೆಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ಇನ್ನರ್‌ವ್ಹೀಲ್‌ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಹಲವು ಸಂಸ್ಥೆಗಳ ಸಹಯೋಗ ದಲ್ಲಿ ಈ ವಿಶೇಷ ಸ್ಪರ್ಧೆಯನ್ನು ಸಂಘ ಟಿಸಿತ್ತು. ಆರೋಗ್ಯದ ದೃಷ್ಟಯಿಂದ ಮಹಿಳೆ ಯರು ಪ್ರತಿನಿತ್ಯ ನಡೆಯುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂಬ ಸಂದೇಶ ವನ್ನು ಸಾರಲಾಯಿತು. ವೇಗದ ಸೀರೆ ನಡಿಗೆ ಆರಂಭಕ್ಕೂ ಮೊದಲು, ನಾರಾಯಣ ಹೃದಯಾ ಲಯದ ಸ್ತ್ರೀರೋಗ ತಜ್ಞರಾದ ಡಾ.ಸವಿತಾ ನಾಯಕ್ ಮತ್ತು ವಿಕಿರಣ ಆಂಕಾಲಜಿಸ್ಟ್ ಡಾ.ಆರ್.ವೇದ ಪ್ರಿಯ ಅವರು, ಮಹಿಳೆಯರು ತಮ್ಮ ಆರೋಗ್ಯ ಮತ್ತು ಇನ್ನಿತರ ಚಟುವಟಿಕೆ ಗಳಲ್ಲಿ ಗಮನ ಕೇಂದ್ರೀಕರಿಸಲು ಸಲಹೆ ನೀಡಿದರು. ಮನೆಯ ಒಳಗೆ ಮತ್ತು ಹೊರಗೆ ಹೆಚ್ಚು ಒತ್ತಡದಿಂದಲೇ ಜೀವನ ನಿರ್ವಹಿಸುತ್ತಿರುವ ಮಹಿಳೆಯರು ಆರೋಗ್ಯ ವನ್ನು ಲೆಕ್ಕಿಸದೆ ನಾನಾ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತದೆ. ಮಹಿಳೆ ಯರು ಆನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಸೇರಿದಂತೆ ನಾನಾ ಕೊರತೆಗಳಿಂದ ವಿವಿಧ ರೋಗ ಪೀಡಿತರಾಗಿದ್ದಾರೆ. ಆದ್ದರಿಂದ ಆರೋಗ್ಯ ಕರ ಕುಟುಂಬ ಮತ್ತು ದೃಢವಾದ ಸಮಾಜವನ್ನು ನಿರ್ಮಿಸಲು ಮಹಿಳೆ ಯರು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ವಾಗಿದ್ದರೆ ಆಕೆಯ ಮನೆಯೂ ಸಂತಸದಿಂದಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನರ್‌ವ್ಹೀಲ್‌ ಕ್ಲಬ್ ಆಫ್ ಮೈಸೂರು ಸೆಂಟ್ರಲ್‍ನ ಅಧ್ಯಕ್ಷೆ ಅನಿತಾ ಸುರೇಶ್, ಕಾರ್ಯ ದರ್ಶಿ ಸುಮಾ ಮಹೇಶ್, ಮಾಜಿ ಅಧ್ಯಕ್ಷರುಗಳಾದ ಸೌಜನ್ಯ ಅತಾ ವರ್, ನಮ್ರತಾ ಜಾನ್ಹವಿ, ಚಂದ್ರಿಕಾ ಸುಧೀರ್, ರಚನಾ ನಾಗೇಶ್, ಜೋಶಿಲಾ ಜಯಪ್ರಕಾಶ್, ಲಕ್ಷ್ಮಿ ಅರುಣ್, ಶರ್ಮಿಳಾ ಭಟ್ ಇನ್ನಿತರ ಪದಾಧಿಕಾರಿಗಳಿದ್ದರು. 50 ವರ್ಷಕ್ಕೂ ಮೇಲ್ಪಟ್ಟವರು ಮತ್ತು 50 ವರ್ಷಕ್ಕಿಂತ ಕೆಳಗಿರುವವರ ವಿಭಾಗ ದಲ್ಲಿ ನಡೆದ ಸ್ಪರ್ಧೆಯ ಮೊದಲ 3 ವಿಜೇತರಿಗೆ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಹಾಗೂ ಸರ್ಟಿಫಿಕೇಟ್ ನೀಡಲಾಯಿತು. ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೂ ಪದಕ ಮತ್ತು ಸರ್ಟಿಫಿಕೇಟ್ ನೀಡಲಾಯಿತು.

Translate »