ಇತರರು ದ್ವೇಷಿಸುವುದಾದರೆ ಬ್ರಾಹ್ಮಣ ಧರ್ಮಕ್ಕೆ  ಭಾಷಾ, ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ
ಮೈಸೂರು

ಇತರರು ದ್ವೇಷಿಸುವುದಾದರೆ ಬ್ರಾಹ್ಮಣ ಧರ್ಮಕ್ಕೆ ಭಾಷಾ, ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ

December 16, 2018

ಮೈಸೂರು: ಹಿಂದೂ ಧರ್ಮವನ್ನು ಇತರೆ ಸಮು ದಾಯಗಳು ದ್ವೇಷಿಸುವುದಾದರೆ, ಈ ಧರ್ಮವನ್ನು ಬ್ರಾಹ್ಮಣರಿಗೆ ಸೀಮಿತಗೊಳಿಸಿ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಕರಾಮುವಿವಿ ಕುಲ ಸಚಿವ ಹಾಗೂ ನಿರ್ದೇಶಕ (ಪ್ರವೇಶಾತಿ) ಹಾಗೂ ಹಿರಿಯ ವಿದ್ವಾಂಸ ಡಾ.ಶೆಲ್ವಪಿಳೈ ಅಯ್ಯಂಗಾರ್ ಒತ್ತಾಯಿಸಿದರು.

ಮೈಸೂರು-ನಂಜನಗೂಡು ರಸ್ತೆಯಲ್ಲಿ ರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬೃಹತ್ ಬ್ರಾಹ್ಮಣ ಸಮಾವೇಶ-2018ರ ಯುವ ಗೋಷ್ಠಿಯನ್ನು ಉದ್ಘಾಟಿಸಿ, ಅವರು ಮಾತ ನಾಡಿದರು. ಇತ್ತೀಚೆಗೆ ರಾಜ್ಯ ಮತ್ತು ದೇಶ ದಲ್ಲಿ ಹಿಂದೂ ಧರ್ಮವನ್ನು ದ್ವೇಷಿಸುವ ಭಾವನೆ ಬೆಳೆಸಲಾಗುತ್ತಿದೆ. ಅದರಲ್ಲೂ ಬ್ರಾಹ್ಮಣ ಯುವಕರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಸಮಾಜದ ಬೇರೆ ಸಮುದಾಯಗಳಿಗೆ ಹಿಂದೂ ಧರ್ಮ ಹಾಗೂ ಬ್ರಾಹ್ಮಣರ ಸಹ ವಾಸ ಬೇಡವಾದರೆ, ಹಿಂದೂ ಧರ್ಮ ವನ್ನು ಬ್ರಾಹ್ಮಣರಿಗೆ ಸೀಮಿತಗೊಳಿಸಿ, ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಈ ಮೂಲಕ ನಮ್ಮ ಧರ್ಮ, ಸಂಸ್ಕøತಿ ಹಾಗೂ ಆಚಾರ-ವಿಚಾರ ಉಳಿವಿಗೆ ಸಂವಿಧಾನದ ಮೂಲಕ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಹಿಂದಿನ ಕಾಲದಲ್ಲಿ ಬ್ರಾಹ್ಮಣರು, ವೇದ, ಆಗಮಶಾಸ್ತ್ರಗಳ ಅಧ್ಯಯನಗಳಲ್ಲಿ ಮಾತ್ರ ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ನಂತರ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣವನ್ನು ಕಲಿಯುತ್ತಿರುವಂತೆ ಬ್ರಾಹ್ಮಣ ಯುವಕರೂ ಹೊಸದಾಗಿ ಕಲಿ ಯುತ್ತಿದ್ದಾರೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿ ಗಳಂತೆ ಬ್ರಾಹ್ಮಣ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರ ಸಮಾನನಾಗಿ ನೋಡುವ ಪದ್ಧತಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬ್ರಾಹ್ಮಣ ಯುವಕರ ಆರ್ಥಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ. ಪೌರೋಹಿತ, ಕೃಷಿ, ಅಡುಗೆ ಕೆಲಸ ಸೇರಿದಂತೆ ಇತರೆ ಸಣ್ಣಪುಟ್ಟ ಉದ್ಯೋಗದಲ್ಲಿ ತೊಡಗಿರುವವರಿಗೆ ಯುವ ಕರಿಗೆ ಹೆಣ್ಣು ಕೊಡುತ್ತಿಲ್ಲ. ಈಗಾದರೆ, ನಮ್ಮ ಸಮುದಾಯ ಉಳಿಯುವುದಾದರು ಎಂದು ಹೇಗೆ ಪ್ರಶ್ನಿಸಿದರು.
ಮೈಸೂರು ಬ್ರಾಹ್ಮಣ ಯುವ ವೇದಿಕೆ ಸದಸ್ಯರು ಎಲ್ಲಾ ಬ್ರಾಹ್ಮಣರನ್ನು ಒಟ್ಟುಗೂಡಿಸಿ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬೃಹತ್ ಸಮ್ಮೇಳನ ನಡೆಸಿ, ನಮ್ಮ ಸಮುದಾಯದ ಕಷ್ಟ-ನಷ್ಟಗಳ ಬಗ್ಗೆ ಚರ್ಚೆ ನಡೆಸುತ್ತಿ ರುವುದು ಉತ್ತಮ ಬೆಳವಣಿಗೆ. ರಾಜ್ಯ ಮತ್ತು ದೇಶದಲ್ಲಿ ಬ್ರಾಹ್ಮಣರ ಸಂಖ್ಯೆ ಶೇ.2.5 ರಷ್ಟು ಜನಸಂಖ್ಯೆ ಇದೆ ಎಂದರು.

ಬ್ರಾಹ್ಮಣರು ಎಂದೂ ಸ್ವಾರ್ಥಕ್ಕಾಗಿ ಕೆಲಸ ಮಾಡುವವರಲ್ಲ. ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಸಮಾ ಜದ ಇತರೆ ಸಮುದಾಯಗಳ ಏಳಿಗೆಗೂ ಶ್ರಮಿಸುತ್ತಾರೆ. ಆದರೆ, ನಮ್ಮ ಸಮುದಾಯ ಅನಗತ್ಯವಾಗಿ ದ್ವೇಷಿಸುವ ವಾತಾವರಣ ನಿರ್ಮಾಣವಾಗುತ್ತಿರುವುದು ಬೇಸರ ಸಂಗತಿ ಎಂದರು. ವೇದಿಕೆಯಲ್ಲಿ ಸಂಗೀತ ನಿರ್ದೇ ಶಕ ಕೆ.ಕಲ್ಯಾಣ, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಜಿಲ್ಲಾ ಮತ್ತು ನಗರ ಘಟಕದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಯುವ ವೇದಿಕೆ ಅಧ್ಯಕ್ಷ ಹೆಚ್. ಎನ್.ಶ್ರೀಧರ್ ಮೂರ್ತಿ, ಲಕ್ಷ್ಮೀಕಾಂತ್, ವಿಪ್ರ ಮುಖಂಡ ಹೆಚ್.ವಿ.ರಾಜೀವ್, ಮಂಜು ಶಂಕರ್, ವಿವೇಕ್ ಕಣಗಾಲ್ ಇದ್ದರು. ಮೈಸೂರಿನ ವಿನ್ಯಾಸ್ ಇನ್ನೋವೆಟಿವ್ ಟೆಕ್ನಾಲ ಜೀಸ್ ಪ್ರೈ(ಲಿ) ವ್ಯವಸ್ಥಾಪಕ ನಿರ್ದೇಶಕ ಎನ್. ನರೇಂದ್ರ ಯುವಜನತೆ ಮತ್ತು ಸಮಕಾಲಿನ ಸಮಸ್ಯೆಗಳು ಕುರಿತು ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಯವಜನತೆ ಮತ್ತು ವೃತ್ತಿ ಕೌಶಲ್ಯ ಕುರಿತು ಮಾತನಾಡಿದರು.

ವಿಧವಾ ಸಂಸ್ಕøತಿ ವಿರೋಧಿಸಿದ ನಾವು ಈಗ ಅದನ್ನೇ ಅನುಸರಿಸುತ್ತಿರುವುದು ಸರಿಯೇ?
ಮೈಸೂರು: ಈ ಹಿಂದೆ ಬ್ರಾಹ್ಮಣ ಕುಟುಂಬದ ವಿಧವಾ ಆಚರಣೆ ಬಗ್ಗೆ ಪುಟಗಟ್ಟಲೇ ನಮ್ಮ ಹಿರಿ ಯರು ಭಾಷಣ ಮಾಡಿದರು. ಹೋರಾಟ ಮಾಡಿ, ನಿಲ್ಲಿಸಿದರು. ಆದರೆ, ಇಂದು ನಮ್ಮ ಕುಟುಂಬದ ಹೆಣ್ಣು ಮಕ್ಕಳಿಗೆ ನಾವು ಕಲಿಸಿರುವುದು ವಿಧವಾ ಸಂಸ್ಕøತಿಯನ್ನೇ ಎಂದು ವಿಪ್ರ ಮಹಿಳಾ ಚಿಂತಕಿ ಡಾ.ಜ್ಯೋತಿಶಂಕರ್ ಬೇಸರ ವ್ಯಕ್ತಪಡಿಸಿದರು.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬೃಹತ್ ಬ್ರಾಹ್ಮಣ ಸಮಾವೇಶ-2018ರ ಮಹಿಳಾ ಗೋಷ್ಠಿಯಲ್ಲಿ ಭಾಗವಹಿಸಿ `ವಿಪ್ರ ಮಹಿಳೆ ಮತ್ತು ಸಂಪ್ರದಾಯಗಳು’ ಕುರಿತು ಮಾತನಾಡಿ ದರು. ಈ ಹಿಂದೆ ಬ್ರಾಹ್ಮಣ ಕುಟುಂಬದಲ್ಲಿ ಆಚರಿಸುತ್ತಿದ್ದ ವಿಧವಾ ಪದ್ಧತಿ ಬಗ್ಗೆ ನಮ್ಮ ಹಿರಿಯರು ವಿರೋಧಿಸಿದರು. ಆದರೆ, ಮುಂದೆ ನಡೆದಿದ್ದು ಏನು? ನಮ್ಮ ಹೆಣ್ಣು ಮಕ್ಕಳಿಗೆ ಆಧುನಿಕತೆ ಹೆಸರಿನಲ್ಲಿ ಎಂಥ ಸಂಸ್ಕøತಿ ಕಲಿಸಿದ್ದೇವೆ? ಹಣೆಗೆ ತಿಲಕ ಇಡಬೇಡ, ಕೈಗೆ ಬಳೆ ಹಾಕಬೇಡ, ದೇವರ ಪೂಜೆ ಮಾಡಬೇಡ ಎಂಬತ್ಯಾದಿ ಮಾರ್ಗದರ್ಶನ ನೀಡಿ, ನಮ್ಮ ಸಂಸ್ಕøತಿ ನಾಶಕ್ಕೆ ನಾವೇ ಕಾರಣ ರಾಗಿದ್ದೇವೆ ಎಂದು ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಆಧುನಿಕ ಯುಗದಲ್ಲಿ ಹೆಣ್ಣಿಗೆ ನಾನಾ ಸಮಸ್ಯೆಗಳಿವೆ ನಿಜ. ಆದರೆ, ನಮ್ಮ ಹಿರಿಯರು ಎಲ್ಲವನ್ನು ಅರಿತೇ ಸಂಸ್ಕøತಿಗಳ ಮೂಲಕ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಆದ್ದರಿಂದ ಬ್ರಾಹ್ಮಣ ಕುಟುಂಬದಲ್ಲಿ ಹಿಂದಿನ ಮಹಿಳಾ ಆಚರಣೆಗಳನ್ನು ಪುನಃ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.

ಮಹಿಳೆಗೂ ಉದ್ಯೋಗ ಅವಶ್ಯಕ: ಚಲನಚಿತ್ರ ನಿರ್ದೇಶಕಿ ರೂಪ ಅಯ್ಯರ್ ಅವರು, `ವಿಪ್ರ ಮಹಿಳೆ ಮತ್ತು ಉದ್ಯೋಗ’ ವಿಷಯ ಕುರಿತು ಮಾತನಾಡಿ, ನಾನು ಚಿಕ್ಕ ವಯಸ್ಸಿನಲ್ಲಿ ಬಡತನ ಅನುಭವಿಸಿದ್ದೇನೆ. ಆಗಂಥ ಜೀವನ ನಿರ್ವಹಣೆಗೆ ಬೇರೆ ಯವರ ಮುಂದೆ ದೇಹಿ ಎಂದು ಕೈಚಾಚದೇ ತಾನೇ ನಮ್ಮ ಹಿರಿ ಯರು ಕಲಿಸಿಕೊಟ್ಟ ವಿದ್ಯೆಯಿಂದ ಈಗ ಬದುಕು ಕಟ್ಟಿಕೊಂಡಿ ದ್ದೇನೆ. ಇದು ನಾನು ಐದು ಕಂಪನಿಗಳನ್ನು ನಡೆಸುತ್ತಿದ್ದು, ಪ್ರತಿ ವರ್ಷ ಬಡ ವಿಪ್ರ ಮಹಿಳೆಯರಿಗೆ ತಲಾ 2 ಲಕ್ಷ ರೂ.ನಂತೆ ಧನ ಸಹಾಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ವಿಪ್ರರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲಿ: ವಿಪ್ರ ಮಹಿಳಾ ಚಿಂತಕಿ ಮಾಲಿನಿ ವಾಸುದೇವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿಪ್ರ ಮಹಿಳೆ ಯರು ಆಧುನಿಕತೆಗೆ ಕಟ್ಟುಬಿದ್ದು, ಸಂತಾನ ನಿಯಂತ್ರಣ ಮಾಡಿ ಕೊಳ್ಳುತ್ತಿದ್ದಾರೆ. ಮತ್ತೆ ಸಾರ್ವಜನಿಕ ಸಭೆಗಳಲ್ಲಿ ವಿಪ್ರರ ಸಂಖ್ಯೆ ಬೆಳೆಯಲಿ ಎಂದು ಉದ್ದುದ್ದ ಭಾಷಣ ಮಾಡಿದರೆ, ಜನಸಂಖ್ಯೆ ಹೇಗೆ ಬೆಳೆಯುತ್ತದೆ?. ಇಲ್ಲವೆ, ಇದರಿಂದ ನಮ್ಮ ದೇಶದ ಅಭಿವೃದ್ಧಿ ಯಲ್ಲಿ ಕುಂಠಿತವಾಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಆದ್ದ ರಿಂದ ಮುಂದಿನ ದಿನಗಳಲ್ಲಿ ವಿಪ್ರರ ಸಂಖ್ಯೆ ಹೆಚ್ಚಾಗಬೇಕಾದರೆ ನಮ್ಮ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಯುವಕ-ಯುವತಿಯರಿಗೆ ಮನದಟ್ಟು ಮಾಡಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕಿ ಎಂ.ಸಿ.ನಾಗಲಕ್ಷ್ಮಿ ಚಂದ್ರ ಶೇಖರ್, ಹಿರಿಯ ವೈದ್ಯೆ ಡಾ.ಜಯಶ್ರೀ ಚಂದ್ರಶೇಖರ್, ಬಿ.ವಿ. ಆರತಿ, ಮಂಗಳಾ ಸತ್ಯಾನಾರಾಯಣ್ ಸೇರಿದಂತೆ ಇತರರಿದ್ದರು.

Translate »