ಮೈಸೂರು: ಹಿನಕಲ್ ಬಳಿ ನಿರ್ಮಿಸಿರುವ ಫ್ಲೈಓವರ್ ಅನ್ನು ಉದ್ಘಾ ಟಿಸುವ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದೆ.
ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ನಾಳೆ (ಡಿ.16) ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಉದ್ಘಾಟಿಸಿ ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಬೇರೆ ಕಾರ್ಯ ಒತ್ತಡದಲ್ಲಿರು ವುದರಿಂದ ನಾಳೆ (ಡಿ.16) ಬದಲು ಮುಂದಿನ ಭಾನುವಾರ (ಡಿ.23)ಕ್ಕೆ ಮುಂದೂಡಲಾಗಿದೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.
ಈ ಹಿಂದೆ ಎರಡು ಬಾರಿ ಫ್ಲೈಓವರ್ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿತ್ತಾದರೂ, ಕೇಂದ್ರ ನಗರಾಭಿವೃದ್ಧಿ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಡೇಟ್ ಕೊಡದ ಕಾರಣ ಸಾಕಾರವಾಗಿರಲಿಲ್ಲ. ಕಡೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರೇ ಉದ್ಘಾಟನೆ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಇದೀಗ ನಾಳೆ (ಡಿ.16) ನಿಗದಿಯಾಗಿದ್ದ ಹಿನಕಲ್ ಫ್ಲೈಓವರ್ ಉದ್ಘಾಟನೆಯನ್ನೂ ಮುಂದಿನ ಭಾನುವಾರಕ್ಕೆ ಮುಂದೂಡಲಾಗಿದೆ.