ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸುಗಮ ಸಂಚಾರ
ಮೈಸೂರು

ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸುಗಮ ಸಂಚಾರ

December 25, 2018

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರಿಂದ ನಿನ್ನೆ ಲೋಕಾರ್ಪಣೆ ಗೊಂಡ ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸಂಚಾರ ಆರಂಭಗೊಂಡಿದ್ದು, ಯಾವುದೇ ಅಡಚಣೆ ಇಲ್ಲದಂತೆ ವಾಹನಗಳ ಸಂಚಾರ ಸುಗಮವಾಗಿದೆ.

ಹುಣಸೂರು, ಪಿರಿಯಾಪಟ್ಟಣ, ಕೊಡಗು, ಹಾಸನ, ಮಂಗಳೂರು ಇನ್ನಿತರ ಕಡೆ ಗಳಿಗೆ ತೆರಳುವ ವಾಹನಗಳು ಫ್ಲೈ ಓವರ್ ನಲ್ಲಿ ಅಬಾಧಿತವಾಗಿ ಸಂಚರಿಸುತ್ತಿದೆ. ಹಿನಕಲ್ ಜಂಕ್ಷನ್‍ನ ಫ್ಲೈ ಓವರ್‍ನ ಎರಡೂ ಬದಿ ಯಲ್ಲಿರುವ ಸರ್ವಿಸ್ ರಸ್ತೆಯಲ್ಲೂ ವಾಹನ ದಟ್ಟಣೆ ಕೊಂಚ ಕಡಿಮೆಯಾಗಿದೆ.
ಆದರೆ ಫ್ಲೈ ಓವರ್‍ನ ಕೆಳಗಡೆ ವಾಹನ ಸಂಚಾರ ಹೊರತುಪಡಿಸಿ, ಫ್ಲೈ ಓವರ್‍ನ ಕೆಳಗಿನ ಎರಡು ತುದಿಯಲ್ಲಿ ಬಿಟ್ಟಿರುವ ಪ್ಯಾಸೇಜ್‍ನಲ್ಲಿ ಖಾಸಗಿ ವಾಹನಗಳು, ಬೈಕ್ ಗಳನ್ನು ನಿಲ್ಲಿಸಲಾಗುತ್ತಿದೆ. ಜನರು ಈ ಜಾಗವನ್ನು ಪಾರ್ಕಿಂಗ್ ರೀತಿ ಬಳಸಿಕೊಳ್ಳುತ್ತಿದ್ದು, ಮುಂದೆ ಇದು ಹೊಸ ಸಮಸ್ಯೆಗೆ ಆಸ್ಪದ ನೀಡುವ ಸಾಧ್ಯತೆಗಳಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ.

ಫ್ಲೈ ಓವರ್‍ನ ಕೆಳಗಡೆ ಇರುವ ಖಾಲಿ ಜಾಗದಲ್ಲಿ ವಾಹನ ಪಾರ್ಕಿಂಗ್‍ಗೆ ಅವ ಕಾಶವಾಗದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಹಿನಕಲ್‍ನ ಮುಖಂಡ ಶಿವೇ ಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದರು.ಫ್ಲೈ ಓವರ್ ನಿರ್ಮಿಸುವ ಮೂಲಕ ಒಂದು ಉತ್ತಮ ಕೆಲಸ ಮಾಡಿದ್ದಾರೆ. ಹಿನಕಲ್ ರಿಂಗ್ ರಸ್ತೆಯನ್ನು ಜೀವ ಬಿಗಿ ಹಿಡಿದು ದಾಟಬೇಕಾದ ಅನಿವಾರ್ಯವಿತ್ತು. ಇದೀಗ ಸಚಿವ ಜಿ.ಟಿ.ದೇವೇಗೌಡರು, ಸಂಸದ ಪ್ರತಾಪ ಸಿಂಹ ಮುಂದಾಲೋಚನೆಯಿಂದಾಗಿ ಜನರು ನಿರಾಳವಾಗಿ ರಸ್ತೆ ದಾಟಲು ಅವ ಕಾಶವಾಗಿದೆ ಎಂದು ಶಿವೇಗೌಡ ಸಚಿವ, ಸಂಸದರ ಅಭಿನಂದಿಸಿದ್ದಾರೆ.

ಬೀಳುವ ಸ್ಥಿತಿಯಲ್ಲಿ ಸಿಗ್ನಲ್ ಕಂಬ: ಹಿನಕಲ್ ಜಂಕ್ಷನ್‍ನಲ್ಲಿ ಬೋಗಾದಿ ಕಡೆಗೆ ತೆರಳುವ ರಿಂಗ್ ರಸ್ತೆ ಮಧ್ಯೆ ಇರುವ ಸಿಗ್ನಲ್ ಲೈಟ್ ಕಂಬ ಶಿಥಿಲಗೊಂಡಿದ್ದು, ಕಂಬ ಬೀಳುವ ಸ್ಥಿತಿಯಲ್ಲಿದೆ. ಈ ಸಿಗ್ನಲ್ ಲೈಟ್ ಕಂಬಕ್ಕೆ ಹಾಕಿರುವ ಸಿಮೆಂಟ್ ಶಿಥಿಲಗೊಂಡಿದ್ದು, ಯಾವುದೇ ಹಂತ ದಲ್ಲಿ ಬೀಳಬಹುದಾಗಿದೆ. ಕೂಡಲೇ ದುರಸ್ತಿ ಪಡಿಸಿ, ಮುಂದಾಗುವ ಅಪಾಯವನ್ನು ತಪ್ಪಿಸುವಂತೆ ನಾಗರಿಕರು ತಿಳಿಸಿದ್ದಾರೆ.

Translate »