ನಾಳೆ ಹಿನಕಲ್ ಫ್ಲೈಓವರ್ ಉದ್ಘಾಟನೆ
ಮೈಸೂರು

ನಾಳೆ ಹಿನಕಲ್ ಫ್ಲೈಓವರ್ ಉದ್ಘಾಟನೆ

December 22, 2018

ಮೈಸೂರು: ಮೈಸೂ ರಿನ ಹಿನಕಲ್ ರಿಂಗ್ ರೋಡ್ ಜಂಕ್ಷನ್ ನಲ್ಲಿ ನಿರ್ಮಿಸಿರುವ ಫ್ಲೈಓವರ್(ಗ್ರೇಡ್ ಸಪರೇಟರ್) ಭಾನುವಾರ ಸಾರ್ವಜನಿಕರ ಬಳಕೆಗೆ ಸಮರ್ಪಣೆಯಾಗಲಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಭಾನುವಾರ ಮಧ್ಯಾಹ್ನ 1.30 ಗಂಟೆಗೆ ಫ್ಲೈಓವರ್ ಅನ್ನು ಉದ್ಘಾ ಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕೇಂದ್ರದ ನಗರಾಭಿವೃದ್ಧಿ ವಸತಿ ಮತ್ತು ಬಡತನ ನಿರ್ಮೂಲನಾ ಸಚಿವ ಹರಿದೀಪ್ ಸಿಂಗ್ ಪೂರಿ ಅವರು ಪಾಲ್ಗೊಳ್ಳುವರು.

ಸಚಿವರಾದ ಯು.ಟಿ.ಖಾದರ್, ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ, ಸಂಸದರಾದ ಪ್ರತಾಪ್‍ಸಿಂಹ, ಆರ್. ಧ್ರುವನಾರಾಯಣ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಕೇಂದ್ರದ ನರ್ಮ್ ಯೋಜನೆಯಡಿ ಶೇ.60, ರಾಜ್ಯ ಸರ್ಕಾರದಿಂದ ಶೇ.20 ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಶೇ.20ರಷ್ಟು ಅನುದಾನದಡಿ ಮೈಸೂರಿನ ಹುಣ ಸೂರು ಹೆದ್ದಾರಿಯ ಹಿನಕಲ್ ಜಂಕ್ಷನ್ ಬಳಿ ಮುಡಾ ಫ್ಲೈಓವರ್ ಅನ್ನು ನಿರ್ಮಿ ಸಿದೆ. ಹುಣಸೂರು ಹೆದ್ದಾರಿ ಮತ್ತು ಹೊರ ವರ್ತುಲ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದರಿಂದ ಹಿನಕಲ್ ಬಳಿ ಸಿಗ್ನಲ್ ಲೈಟ್ ಸರ್ಕಲ್‍ನಲ್ಲಿ ಸುಗಮ ಸಂಚಾರಕ್ಕೆ ಆಗುತ್ತಿದ್ದ ತೊಂದರೆ ತಪ್ಪಿಸುವ ಸಲು ವಾಗಿ ಮುಡಾ ಈ ಬೃಹತ್ ಯೋಜನೆ ಯನ್ನು ಕೈಗೆತ್ತಿಕೊಂಡು ಪೂರೈಸಿದೆ.

Translate »