ವಿಷ ಪ್ರಸಾದ ಪ್ರಕರಣ: ಮತ್ತೊಂದು ಸಾವು
ಮೈಸೂರು

ವಿಷ ಪ್ರಸಾದ ಪ್ರಕರಣ: ಮತ್ತೊಂದು ಸಾವು

December 22, 2018

ಮೈಸೂರು: ಸುಳವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆಯಿಂದ ತೀವ್ರ ಅಸ್ವಸ್ಥರಾಗಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಅಸುನೀಗಿದ್ದು, ಪ್ರಕರಣ ದಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೇರಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ನಿವಾಸಿ ನಾಗೇಶ್ (45) ಇಂದು ಬೆಳಿಗ್ಗೆ ಚಿಕಿತ್ಸೆ ಪಲಕಾರಿ ಯಾಗದೆ ಕೊನೆಯುಸಿರೆಳೆದರು. ಆಡು ಮೇಯಿಸಲು ಡಿ.14ರಂದು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಬಳಿ ಹೋಗಿದ್ದ ನಾಗೇಶ್, ದೇವಾಲಯದಲ್ಲಿ ನೀಡಿದ ಪ್ರಸಾದ ಸೇವಿಸಿದ್ದರು. ವಿಷ ಪ್ರಸಾದ ತಿಂದು ಆಡು ಮೇಯಿಸುತ್ತಾ ಮುಂದೆ ಸಾಗಿದ್ದರು. 45 ನಿಮಿಷವಾದ ಬಳಿಕ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಬಿದ್ದಿರುವ ವಿಷಯ ತಿಳಿದು ಆತನ ಪತ್ನಿ ಮಹದೇವಮ್ಮ, ಗ್ರಾಮಸ್ಥರ ನೆರವಿ ನೊಂದಿಗೆ ಮಾರ್ಟಳ್ಳಿ ಹಾಗೂ ಕಾಮಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆತಂದಿದ್ದರು.

ಡಿ.14ರ ರಾತ್ರಿಯಿಂದಲೇ ತೀವ್ರ ಗಂಭೀರ ವಾಗಿದ್ದ ನಾಗೇಶ್ ಅವರನ್ನು ಜೆಎಸ್‍ಎಸ್ ಆಸ್ಪತ್ರೆಗೆ ಸಾಗಿಸಿ ವೆಂಟಿಲೇಟರ್‍ನಲ್ಲಿಡಲಾ ಗಿತ್ತು. 7 ದಿನಗಳಿಂದಲೂ ಜೆಎಸ್‍ಎಸ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಅಂಗಾಂಗ ವೈಫಲ್ಯದಿಂದ ನಿಧನರಾದರು.

21 ಮಂದಿ ವೆಂಟಿಲೇಟರ್‍ನಲ್ಲಿದ್ದಾರೆ: ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷ ಪ್ರಸಾದ ಸೇವನೆಯ ಸಂತ್ರಸ್ಥರ ಆರೋಗ್ಯ ವಿಚಾರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 21 ಮಂದಿ ವೆಂಟಿಲೇಟರ್‍ನಲ್ಲಿದ್ದಾರೆ. ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆಯಾದರೂ, ಆರೋಗ್ಯ ದಲ್ಲಿ ಚೇತರಿಕೆಯ ಲಕ್ಷಣಗಳು ಕಂಡು ಬರು ತ್ತಿವೆ. ಅಲ್ಲದೆ ಆಸ್ಪತ್ರೆಗಳಿಂದ ಬಿಡುಗಡೆ ಯಾದ ಎಲ್ಲಾ ಸಂತ್ರಸ್ಥರನ್ನು ಸರ್ಕಾರಿ ವಾಹನದಲ್ಲಿಯೇ ಅವರ ಮನೆಗಳಿಗೆ ಕರೆದೊಯ್ಯಲಾಗುತ್ತಿದೆ ಎಂದರು.

ಶಕ್ತಿ ಮೀರಿ ಸೇವೆ: ಚಾಮರಾಜನಗರ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಹೆಚ್.ಪ್ರಸಾದ್ ಮಾತನಾಡಿ, ಕೆ.ಆರ್. ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆ ಗಳಲ್ಲಿ ದಾಖಲಾಗಿರುವ ಸುಳವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣದ ಸಂತ್ರಸ್ಥರಿಗೆ ವೈದ್ಯರು ಶಕ್ತಿ ಮೀರಿ ಶ್ರಮ ವಹಿಸಿ ಚಿಕಿತ್ಸೆ ನೀಡುವ ಮೂಲಕ ಬದುಕಿ ಸುವ ಪ್ರಯತ್ನ ಮಾಡಿದ್ದಾರೆ. ಸಂಘಟಿತ ಪ್ರಯತ್ನದ ಪರಿಣಾಮವಾಗಿ 120 ಸಂತ್ರಸ್ಥ ರಲ್ಲಿ ಈಗಾಗಲೇ 60 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, 30 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಅವರನ್ನೂ ಬಿಡುಗಡೆ ಮಾಡಲಾಗುತ್ತದೆ ಎಂದರು. ಡಿ.14ರಂದು ಸಂಜೆ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾದ 120ಕ್ಕೂ ಹೆಚ್ಚು ಮಂದಿ ಮಾರ್ಟಳ್ಳಿ ಹಾಗೂ ಕಾಮಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಗಂಭೀರ ಸ್ಥಿತಿಯಲ್ಲಿದ್ದವ ರನ್ನು ಹಾಗೂ ಉಳಿದ ಎಲ್ಲಾ ಅಸ್ವಸ್ಥರನ್ನು ಮೈಸೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲು ನಿರ್ಧರಿಸಿ, ಆಂಬ್ಯುಲೆನ್ಸ್‍ನಲ್ಲಿ ಪ್ರಯಾಣಿಸುತ್ತಿದ್ದಂತೆ ಬಹುತೇಕ ಮಂದಿ ಕೆ.ಆರ್.ಆಸ್ಪತ್ರೆಗೆ ದಾಖಲಿಸದಂತೆ ದುಂಬಾಲು ಬಿದ್ದಿದ್ದರಂತೆ. ಸಂತ್ರಸ್ಥರ ಪೋಷಕರು ತಮ್ಮ ಬಳಿ ಹೇಳಿದ ಮಾತನ್ನು ಸ್ವತಃ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಇಂದು ಶಾಸಕ ನರೇಂದ್ರ ಅವರೊಂದಿಗೆ ಹಂಚಿಕೊಂಡರು.

ಚಾಮರಾಜನಗರದ ಜನತೆಗೆ ಕೆ.ಆರ್.ಆಸ್ಪತ್ರೆಯಲ್ಲಿರುವ ವೈದ್ಯರ ಪ್ರತಿಭೆ, ಇಲ್ಲಿರುವ ಸೌಲಭ್ಯದ ಕೊರತೆಯ ಬಗ್ಗೆ ಅರಿವು ಇಲ್ಲದೇ ಸರ್ಕಾರಿ ಆಸ್ಪತ್ರೆಯ ಸಹವಾಸ ಬೇಡ ಎಂದು ಹಾಗೇ ಹೇಳಿದ್ದರಂತೆ. ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಲ್ಲಿ ಒಬ್ಬರು ಮಾತ್ರ ಮೃತಪಟ್ಟಿದ್ದರು. ಇದರಿಂದ ಕೆ.ಆರ್.ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯು ವುದನ್ನು ಇದೀಗ ಜನರು ಅರಿತುಕೊಂಡಿದ್ದಾರೆ ಎಂದರು.

ಆರೋಪಿಗಳಿಗೆ ಎರಡು ತಿಂಗಳಲ್ಲೇ ಶಿಕ್ಷೆಯಾಗಬೇಕು

ಕೊಳ್ಳೇಗಾಲ: ಸುಳವಾಡಿ ವಿಷ ಪ್ರಸಾದ ಪ್ರಕರಣ ಸಂಬಂಧಿ ಸಿದ ಆರೋಪಿಗಳಿಗೆ ಎರಡು ತಿಂಗಳಲ್ಲೇ ಶಿಕ್ಷೆಯಾಗಬೇಕು. ಈ ಮೂಲಕ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಆಗ್ರಹಿಸಿದರು. ಶುಕ್ರವಾರ ‘ಮಾನಸ ಪ್ರಶಸ್ತಿ’ ಸ್ವೀಕರಿ ಸಲು ಕೊಳ್ಳೇಗಾಲಕ್ಕೆ ಆಗಮಿಸಿದ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಇಂದಿನ ನ್ಯಾಯಾಂಗ ವ್ಯವಸ್ಥೆಯಿಂದ ಇಂತಹ ಕೃತ್ಯದಲ್ಲಿ ಭಾಗಿಯಾಗುವ ಆರೋಪಿಗಳಿಗೆ ಭಯ ಇಲ್ಲದಂತಾಗಿದೆ. ಆರೋಪಿಗಳಿಗೆ ಕನಿಷ್ಠ ಶಿಕ್ಷೆ ವಿಧಿಸಲು ನ್ಯಾಯಾಲಯ 15ರಿಂದ 25 ವರ್ಷಗಳ ಕಾಲ ಗಡುವು ತೆಗೆದುಕೊಂಡ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಭಯವೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ಭಾರತದ ನ್ಯಾಯಾಂಗ ವ್ಯವಸ್ಥೆ ಸುಧಾರಣೆಯಾಗಬೇಕು. ಇಂತಹ ದುಷ್ಕøತ್ಯ ಎಸಗುವವರಿಗೆ ಭಯ ಹುಟ್ಟಿಸುವ ಕೆಲಸ ಮೊದಲು ಆಗಬೇಕು. 2 ತಿಂಗಳೊಳಗೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ದೇವಸ್ಥಾನಗಳಲ್ಲಿ ತಯಾರಾದ ಪ್ರಸಾದ ರುಚಿ ನೋಡಿ ಪರಿಶೀಲಿಸಬೇಕು ಎಂಬುದನ್ನು ಜನಪ್ರತಿನಿಧಿಗಳು, ರಾಜಕಾರಣಿಗಳು ಹೇಳುತ್ತಿ ದ್ದಾರೆ. ಹಾಗಾದರೆ ಅವರ ಪ್ರಕಾರ ರುಚಿ ನೋಡುವವರು ಸಾಯಬೇಕೆ? ಅಥವಾ ನಾಯಿ, ಬೆಕ್ಕು ಮತ್ತಿತರ ಪಕ್ಷಿಗಳಿಗೆ ತಿನ್ನಿಸಿ ಅವುಗಳನ್ನು ಸಾಯಿಸಬೇಕೆ? ಎಂದು ಪ್ರಶ್ನಿಸಿದ ಅವರು, ಘಟನೆ ಕುರಿತು ಆಗುತ್ತಿರುವ ಚರ್ಚೆಗಳ ಬಗ್ಗೆ ವಿಷಾದಿಸಿದರು.

Translate »