ಜನ ಹಿತಾಸಕ್ತಿಗಿಂತ ಪ್ರತಿಷ್ಠೆಗಳ ಮೇಲಾಟಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನಕ್ಕೆ ತೆರೆ
ಮೈಸೂರು

ಜನ ಹಿತಾಸಕ್ತಿಗಿಂತ ಪ್ರತಿಷ್ಠೆಗಳ ಮೇಲಾಟಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನಕ್ಕೆ ತೆರೆ

December 22, 2018

ಬೆಳಗಾವಿ: ಜನರ ಸಮಸ್ಯೆಗಳ ಬಗ್ಗೆ ಚರ್ಚೆಗಿಂತ ಪ್ರತಿಷ್ಠೆಗಳ ಮೇಲಾಟಕ್ಕೆ ಮೀಸಲಾದ ಬೆಳಗಾವಿ ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ತೆರೆ ಬಿದ್ದಿದೆ. ಕೃಷಿ ಸಾಲ ಮನ್ನಾ ಕುರಿತಂತೆ ಮತ್ತೊಮ್ಮೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಆಡ ಳಿತ ಮಂಡಳಿ ಜೊತೆ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೂ ಆಹ್ವಾನ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ವಿಧಾನಮಂಡಲ ಅಧಿವೇಶನ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳು ನಿರಂತರವಾಗಿ ವಾಣಿಜ್ಯ ಬ್ಯಾಂಕ್‍ನ ಅಧಿಕಾರಿಗಳ ಜೊತೆ ಸಮಾ ಲೋಚನೆ ಮಾಡುವ ಸಂದರ್ಭದಲ್ಲಿ ಇವ ರಿಗೂ ಆಹ್ವಾನ ನೀಡುವಂತೆ ತಿಳಿಸುತ್ತೇನೆ ಎಂದರು. ರಾಜ್ಯ ಸರ್ಕಾರ ಸಾಲ ಮನ್ನಾ ಕುರಿತಂತೆ ನೀಡಿರುವ ಭರವಸೆಯನ್ನು ಇನ್ನು ಆರು ತಿಂಗಳಲ್ಲೇ ಈಡೇರಿಸುತ್ತೇವೆ.

ಸಹಕಾರಿ ಬಾಂಕ್‍ಗಳಲ್ಲಿ ಪಡೆದಿರುವ ಸಾಲ ಮನ್ನಾ ಬಹುತೇಕ ಪೂರ್ಣ ಗೊಳ್ಳು ತ್ತಿದೆ. ವಾಣಿಜ್ಯ ಬ್ಯಾಂಕ್‍ಗಳು ನಮಗೆ ಮೊದಲು ನೀಡಿದ ಹೇಳಿಕೆಗೂ ಈಗ ನೀಡುತ್ತಿರುವ ಸಹಕಾರಕ್ಕೂ ಅಜಗಜಾಂತರ ವ್ಯತ್ಯಾಸ ವಿದೆ. ನಾವು ಹಣ ನೀಡುತ್ತೇವೆ ಎಂದರೂ ಅದನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿ ದ್ದಾರೆ. ಅನಗತ್ಯವಾಗಿ ಆರೋಪ ಮಾಡುವ ಬದಲು ಯಡಿಯೂರಪ್ಪ ಅವರೇ ಸಭೆಗೆ ಹಾಜರಾಗಿ ವಾಸ್ತವಿಕತೆ ತಿಳಿದುಕೊಳ್ಳಲಿ. ಮುಂದಿನ 4 ವರ್ಷಗಳಲ್ಲಿ ಬ್ಯಾಂಕ್ ಗಳ ಲ್ಲಿನ ಕೃಷಿ ಸಾಲ ತೀರಿಸಬೇಕೆಂದಿದ್ದೆವು. ಆದರೆ ಇದೀಗ ಮುಂದಿನ ಮುಂಗಡಪತ್ರ ದಲ್ಲೇ ಪಾವತಿಸುವ ನಿರ್ಧಾರ ಕೈಗೊಂಡಿ ದ್ದೇನೆ. ಚಳಿಗಾಲದ ಅಧಿವೇಶನದಲ್ಲಿ ಕೊನೆಯ ಒಂದೂವರೆ ದಿನದ ಕಲಾಪ ವ್ಯರ್ಥ ಗೊಳ್ಳಲು ಬಿಜೆಪಿ ಕಾರಣ ಎಂದರು. ಆರಂಭ ದಲ್ಲಿ ಅಧಿವೇಶನ ಸುಗಮವಾಗಿ ನಡೆಯು ತ್ತಿತ್ತು. ಇದಕ್ಕಾಗಿ ಉಭಯ ಸದನಗಳ ಅಧ್ಯಕ್ಷ ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಉತ್ತರ ಕರ್ನಾ ಟಕ ಭಾಗದ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಸುಮಾರು ಒಂಭತ್ತೂವರೆ ಗಂಟೆ ಕಾಲ ಚರ್ಚೆ ನಡೆದಿದೆ. ಸರ್ಕಾರ ಎಲ್ಲದಕ್ಕೂ ಸಮರ್ಪಕ ಉತ್ತರ ಕೊಟ್ಟಿದೆ ಎಂದರು.

ಸಾಲ ಮನ್ನಾ ವಿಷಯವಾಗಿ ಸದನದ ಒಳಗೆ ಮತ್ತು ಹೊರಗೆ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ಸಾಲ ಮನ್ನಾ ವಿಷಯವಾಗಿ ಸರ್ಕಾರ ತೆಗೆದುಕೊಂಡ ನಿರ್ಣಯ ಹಾಗೂ ಕ್ರಮಗಳ ಬಗ್ಗೆ ಸ್ಪಷ್ಟ ಉತ್ತರ ಕೊಡಲು ನಾನು ಸಿದ್ಧನಿದ್ದೆ. ಆದರೆ, ಅದಕ್ಕೆ ಬಿಜೆಪಿಯವರು ಅವಕಾಶ ಕೊಡಲಿಲ್ಲ. ಗದ್ದಲ, ಗಲಾಟೆ ಮಾಡಿ ಅಡ್ಡಿಪಡಿಸಿದರು. ಕೊನೆಯ ಒಂದೂವರೆ ದಿನ ಅವರು ಧರಣಿ ನಡೆಸದೇ ಇದಿದ್ದರೆ ಸಾಲ ಮನ್ನಾದ ಬಗ್ಗೆ ಸ್ಪಷ್ಟ ಮಾಹಿತಿ ಕೊಡುತ್ತಿದ್ದೆ. ಕಲಾಪದ ಸಮಯ ವ್ಯರ್ಥವಾಗಲು ಬಿಜೆಪಿ ಕಾರಣ ಎಂದು ವಾಗ್ದಾಳಿ ನಡೆಸಿದರು. ನಾನು ಉದ್ದ ಟತನದಿಂದ ಎಲ್ಲಿಯೂ ಮಾತನಾಡಲಿಲ್ಲ. ಬಿಜೆಪಿ ಅನಗತ್ಯವಾಗಿ ಆರೋಪ ಮಾಡು ತ್ತಿದೆ. ನಾನು ಬುದ್ಧಿವಂತ, ಬೃಹಸ್ಪತಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಯಡಿಯೂರಪ್ಪ ಅವರು ಬುದ್ಧಿವಂತರು. ನಾನು ನನ್ನ ಇತಿ ಮಿತಿಯಲ್ಲಿ ಸಾಲ ಮನ್ನಾ ಯೋಜನೆ ಯನ್ನು ಜಾರಿಗೆ ತಂದಿದ್ದೇನೆ. ಬೃಹಸ್ಪತಿ ಎಂದು ಕೊಂಡು ಸಾಲ ಮನ್ನಾ ಮಾಡಿಲ್ಲ. ಸಾಲ ಮನ್ನಾದ ಬಗ್ಗೆ ಇನ್ನಷ್ಟು ಸಲಹೆಗಳನ್ನು ಕೊಡಿ ಎಂದು ಬಿಜೆಪಿಯವರನ್ನು ಕೇಳಿದ್ದೆ. ಅವರಿಂದ ಯಾವುದೇ ಸಲಹೆ, ಸಹಕಾರ ಸಿಕ್ಕಿಲ್ಲ. ಬದಲಾಗಿ ರಾಜಕಾರಣಕ್ಕಾಗಿ ಟೀಕೆ ಮಾಡಿದ್ದಾರೆ, ಆರೋಪ ಮಾಡಿದ್ದಾರೆ ಎಂದರು. ಕೃಷಿ ಸಾಲ ಮನ್ನಾ ಮಾಡುವಂತೆ ರೈತರು ದೇಶಾದ್ಯಂತ ಪ್ರತಿಭಟನೆ ನಡೆಸಿ ದರು. ದೆಹಲಿಯಲ್ಲಿ ಸಾವಿರಾರು ಮಂದಿ ರೈತರು ಪ್ರತಿಭಟನೆ ನಡೆಸಿದಾಗ ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ. ಯಾವೊಬ್ಬ ಸಚಿವರೂ ಹೋಗಿ ರೈತರ ಬಳಿ ಮಾತ ನಾಡಲಿಲ್ಲ. ರಾಜ್ಯ ಬಿಜೆಪಿ ನಾಯಕರು ಆ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Translate »