ಹಿನಕಲ್ ಫ್ಲೈ ಓವರ್ ಲೋಕಾರ್ಪಣೆ
ಮೈಸೂರು

ಹಿನಕಲ್ ಫ್ಲೈ ಓವರ್ ಲೋಕಾರ್ಪಣೆ

December 24, 2018

ಮೈಸೂರು: ಮೈಸೂರಿನ ಹೊರವರ್ತುಲ ರಸ್ತೆ-ಹುಣಸೂರು ರಸ್ತೆ ಹಿನಕಲ್ ಜಂಕ್ಷನ್‍ನಲ್ಲಿ ನಿರ್ಮಿಸಿರುವ ಫ್ಲೈ ಓವರನ್ನು ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಭಾನುವಾರ ಲೋಕಾರ್ಪಣೆ ಮಾಡಿದರು.

ಕೇಂದ್ರ ಸರ್ಕಾರದ ಶೇ.60 ವಂತಿಗೆಯಡಿ 910.95 ಲಕ್ಷ ರೂ., ರಾಜ್ಯ ಸರ್ಕಾರದ ಶೇ.30 ವಂತಿಗೆ 455.47 ಲಕ್ಷ ರೂ. ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 983.58 ಲಕ್ಷ ರೂ. (ಒಟ್ಟು ರೂ.2350 ಲಕ್ಷ)ಗಳಲ್ಲಿ ಈ ಫ್ಲೈವರ್ ನಿರ್ಮಿಸಲಾಗಿದೆ.

ಮೈಸೂರು ಹುಣಸೂರು ರಸ್ತೆ ಹೊರವರ್ತುಲ ರಸ್ತೆ ಜಂಕ್ಷನ್‍ನಲ್ಲಿ ಫೈ ಓವರ್‍ನ ಒಟ್ಟಾರೆ ಉದ್ದ 580 ಮೀಟರ್ ಇದ್ದು, ಎರಡೂ ಬದಿಯ 4 ಪಥದ ಮುಖ್ಯ ರಸ್ತೆಯೂ ಸೇರಿ ಒಟ್ಟಾರೆ 17.20 ಮೀಟರ್ ಅಗಲ ಹೊಂದಿದೆ. ಎರಡೂ ಭಾಗದಲ್ಲಿ 6 ಮೀಟರ್ ಅಗಲದ ಸೇವಾ ರಸ್ತೆ ಹಾಗೂ 1.50 ಮೀಟರ್‍ನಷ್ಟು ಪಾದಚಾರಿ ಮಾರ್ಗ ವನ್ನು ಒಳಗೊಂಡಿದೆ. 2016ರ ಜೂನ್ ತಿಂಗ ಳಲ್ಲಿ ಪ್ರಾರಂಭವಾದ ನಿರ್ಮಾಣ ಕಾಮ ಗಾರಿಯನ್ನು ವಸ್ತು ಸ್ಥಿತಿಗೆ ಅನು ಗುಣವಾಗಿ ಪೂರ್ಣಗೊಳಿಸಲು 2350 ಲಕ್ಷ ರೂ. ವೆಚ್ಚವಾಯಿತು.

ಕಾಮಗಾರಿಯನ್ನು ಮೆ.ಪಿ. ಜೆ.ಬಿ. ಇಂಜಿನಿಯರ್ಸ್‍ಗೆ ವಹಿಸಲಾಗಿತ್ತು. ಕಾಮಗಾರಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಮೇಲುಸ್ತುವಾರಿ ಹಾಗೂ ಪಿಎಂಸಿಯನ್ನು ನಿರ್ವಹಿಸಲು ತಾಂತ್ರಿಕ ಪರಿಣಿತರಾದ ಬೆಂಗಳೂರಿನ ಮೆ.ವ್ಯಾಕ್ಸ್ ಕನ್ಸಲ್ಟೆಂಟ್ ಜಿವಿ ಮತ್ತು ಮೆ.ನಾಗೇಶ್ ಕನ್ಸಲ್ಟೆಂಟ್‍ರನ್ನು ನೇಮಿಸಲಾಗಿತ್ತು.

ಫ್ಲೈ ಓವರ್ ಉದ್ಘಾಟನೆ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಎಂಎಲ್‍ಸಿ ಸಂದೇಶ್ ನಾಗರಾಜು, ಡಿಸಿ ಅಭಿರಾಂ ಜಿ.ಶಂಕರ್, ಹಿನಕಲ್ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಭೈರನಾಯ್ಕ, ಗ್ರಾಪಂ ಸದಸ್ಯರಾದ ನೇಹಾ ನೈನಾ, ಯಶೋಧಾ, ಆಶಾ, ಪ್ರೇಮಾ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಹಿನಕಲ್ ರವಿ, ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್, ಜೆಡಿಎಸ್ ಮುಖಂಡ ರಾಜು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಕಾಂತರಾಜು, ಮೈಸೂರು ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಮುಡಾ ಎಸ್‍ಇ ಸುರೇಶ್‍ಬಾಬು, ಇಇ, ಸುವರ್ಣ, ಕಾರ್ಯದರ್ಶಿ ಕೆ.ಎಂ.ಸವಿತಾ, ಜೆಎನ್ ನರ್ಮ್ ಎಇಇ ಸತೀಶ್, ಇನ್ನಿತರರು ಉಪಸ್ಥಿತರಿದ್ದರು.

Translate »