ಮೈಸೂರು,ಅ.18(ಪಿಎಂ)-ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿ ಯಲ್ಲಿ ರಾಜ್ಯದ ಆಡಳಿತ ವನ್ನು ಚೆನ್ನಾಗಿ ನಿರ್ವಹಿಸಿ ದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಲ್ಲಿ ಏಕೆ ಸೋಲುತ್ತಿದ್ದರು? ಎಂದು ವಿಧಾನ ಪರಿ ಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ನೆರೆ ಪರಿಸ್ಥಿತಿ ನಿರ್ವ ಹಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲ ವಾಗಿದೆ. ಮುಖ್ಯಮಂತ್ರಿಗಳು ಜನರ ಸಂಕ ಷ್ಟಕ್ಕೆ ಸ್ಪಂದಿಸಲು ಆಗದಿದ್ದರೆ ರಾಜೀನಾಮೆ ಕೊಡಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಶ್ವನಾಥ್, ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಸಂಸದರಿಗೆ ಧಮ್ ಇದ್ಯಾ? ಎಂದು ಸಿದ್ದ ರಾಮಯ್ಯ ಪ್ರಶ್ನಿಸಿದ್ದಾರೆ. ಇದು ವಿಪಕ್ಷ ನಾಯ ಕರು ಆಡುವ ಮಾತಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ವಿಶ್ವನಾಥ್, ಜನಪ್ರತಿನಿಧಿಗಳು ಬಳಸುವ ಭಾಷೆಯನ್ನೂ ಜನ ಗಮನಿಸುತ್ತಿ ರುತ್ತಾರೆ ಎಂದರು. ಪ್ರಜಾಪ್ರಭುತ್ವದಲ್ಲಿ ವಿಪಕ್ಷ ಗಳು ಬಲವಾಗಿದ್ದರೆ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ ನಿಮ್ಮ ಅಂತರ ಹೆಚ್ಚಿದೆಯೇ? ಎಂಬ ಪ್ರಶ್ನೆಗೆ, `ಸುಮ್ಮನೆ ಅವರ ಜತೆ ಏಕೆ ಸುತ್ತಲಿ. ಸೋಮ ಶೇಖರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಕಾರ್ಯ ವೈಖರಿ ನೋಡಿದರೆ ಖುಷಿಯಾಗುತ್ತದೆ. ಇದನ್ನು ಒಡಕು ಎಂದು ಭಾವಿಸುವ ಅಗತ್ಯವಿಲ್ಲ‘ ಎಂದು ಪ್ರತಿಕ್ರಿಯಿಸಿದರು.
ಪ್ರಾರಂಭದಿಂದಲೂ ದಸರಾ ವಿದ್ಯುತ್ ದೀಪಾಲಂಕಾರ ವಿರೋಧಿಸಿದ್ದೀರಿ. ನಿನ್ನೆ ದೀಪಾಲಂಕಾರ ನೋಡಲು ಜನದಟ್ಟಣೆ ಉಂಟಾಗಿತ್ತು. ಇದರಿಂದ ಕೊರೊನಾ ವ್ಯಾಪಕವಾಗುವುದಿಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾಡಳಿತ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಆದರೆ ಕೆಲ ಶಾಸಕರ ಒತ್ತಾಯದ ಮೇರೆಗೆ ನಿರ್ಬಂಧ ಸಡಿಲಗೊಳಿಸಲಾಗಿದೆ ಎಂದರು.
ಕೊರೊನಾ ಹೆಚ್ಚಾದರೆ ಹೊಣೆ ಯಾರು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜನಪ್ರತಿನಿಧಿ ಗಳು, ಅಧಿಕಾರಿಗಳು ಎಲ್ಲರೂ ಹೊಣೆಯಾಗು ತ್ತಾರೆ ಎಂದು ಉತ್ತರಿಸಿದರು. ಕೊರೊನಾಗೆ ಸಾಮಾನ್ಯ ಜನ ಮಾತ್ರವಲ್ಲದೆ, ಮಂತ್ರಿಗಳು, ಶಾಸಕರೂ ಬಲಿಯಾಗಿದ್ದಾರೆ. ಹೀಗಾಗಿ ಇದರ ಗಂಭೀರತೆ ಅರ್ಥ ಮಾಡಿಕೊಳ್ಳ ಬೇಕು. ಸಣ್ಣ ವರ್ತಕರಿಗೆ ಹಾಗೂ ಪ್ರವಾ ಸೋದ್ಯಮಕ್ಕೆ ಪೆಟ್ಟು ಬೀಳದಿರಲೆಂದು ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧ ಸಡಿಲಗೊಳಿಸ ಲಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ಈ ಮೊದಲೇ ಹೇಳಿರುವಂತೆ `ಜೀವ ಮೊದಲು, ಜೀವನ ಆಮೇಲೆ’ ಎಂಬುದು ಮುಖ್ಯವಾಗಬೇಕು. ಈ ಘೋಷವಾಕ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು ಕೊರೊನಾ ನಿಯಂ ತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.