ಜ್ವರ, ನೆಗಡಿ ಇದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ: ಡಿಸಿ ಸೂಚನೆ
ಮೈಸೂರು

ಜ್ವರ, ನೆಗಡಿ ಇದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ: ಡಿಸಿ ಸೂಚನೆ

June 7, 2020

ಮೈಸೂರು, ಜೂ.6(ಎಂಟಿವೈ)- ಮೈಸೂರು ನಗರ ಅಥವಾ ತಾಲೂಕಲ್ಲಿ ಯಾರಿಗಾದರೂ ಜ್ವರ, ನೆಗಡಿ ಇದ್ದರೆ ತಪ್ಪದೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಲಕ್ಷಣ ಇದ್ದವರ ಸ್ವ್ಯಾಬ್ ಪರೀಕ್ಷೆ ನಡೆಸಲಾಗುತ್ತಿದೆ. ಮೈಸೂರು ನಗರ ಅಥವಾ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಯಾರಿಗಾದರೂ ಜ್ವರ, ನೆಗಡಿ ಇದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸ ಲಾಗುತ್ತಿದ್ದು, ತಾಲೂಕು ಆಸ್ಪತ್ರೆಗಳಲ್ಲೇ ಸ್ವ್ಯಾಬ್ ಸ್ಯಾಂಪಲ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಹಾರಾಷ್ಟ್ರದಿಂದ ಬಂದವರು: ಕೊರೊನಾ ಹೊಸ ಮಾರ್ಗಸೂಚಿಯಂತೆ ಮಹಾರಾಷ್ಟ್ರದಿಂದ ಬಂದವರನ್ನು ಮಾತ್ರ ಫೆಸಿಲಿಟಿ ಕ್ವಾರಂಟೈನ್‍ನಲ್ಲಿಡಲಾಗುತ್ತಿದ್ದು, ಬೇರೆ ರಾಜ್ಯಗಳಿಂದ ಬಂದವರಿಗೆ ಹೋಮ್ ಕ್ವಾರಂಟೈನ್‍ನಲ್ಲಿ ರಲು ಅವಕಾಶ ನೀಡಲಾಗಿದೆ. ಹಿಂದಿನ ಮಾರ್ಗಸೂಚಿ ಪ್ರಕಾರ ಹೊರ ರಾಜ್ಯದಿಂದ ವಾಪ ಸಾದ ಎಲ್ಲರನ್ನೂ ಕಡ್ಡಾಯವಾಗಿ ಸರ್ಕಾರಿ ಹಾಗೂ ಫೆಸಿಲಿಟಿ ಕ್ವಾರಂ ಟೈನ್‍ನಲ್ಲಿ ಇರಿಸಲಾಗುತ್ತಿತ್ತು. ಆದರೆ ಈಗಿನ ಹೊಸ ಮಾರ್ಗಸೂಚಿ ಯಂತೆ ಕೇವಲ ಮಹಾರಾಷ್ಟ್ರ ದಿಂದ ಬಂದವರನ್ನು ಮಾತ್ರ ಸರ್ಕಾರಿ ಕ್ವಾರಂಟೈನ್‍ನಲ್ಲಿಡಲಾಗುತ್ತಿದೆ. ಬೇರೆ ರಾಜ್ಯದಿಂದ ಬಂದವರನ್ನು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿರಲು ಅವಕಾಶ ನೀಡ ಲಾಗಿದೆ ಎಂದರು. ಮೈಸೂರು ಜಿಲ್ಲೆಯಲ್ಲಿ ಮೊದಲ ಹಂತ ದಲ್ಲಿ ಪತ್ತೆಯಾಗಿದ್ದ 90 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ ನಂತರ ಇದೀಗ 2ನೇ ಹಂತದಲ್ಲಿ ವರದಿ ಯಾದ 9 ಪ್ರಕರಣದಲ್ಲಿ 7 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. 9 ಮಂದಿಯಲ್ಲಿ ಮೂವರು ಸದ್ಯ ಗುಣ ಮುಖರಾಗಿದ್ದು, 6 ಸಕ್ರಿಯ ಪ್ರಕರಣಗಳಿವೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈಗ ಸ್ವ್ಯಾಬ್ ಪರೀಕ್ಷೆಗೆ ಲ್ಯಾಬ್‍ಗಳು ಸ್ಥಾಪನೆ ಆಗಿರುವುದರಿಂದ ಮೈಸೂರಿನ ಪ್ರಯೋಗಾಲಯಕ್ಕೆ ಬೇರೆ ಜಿಲ್ಲೆಗಳಿಂದ ಸ್ಯಾಂಪಲ್ ಪರೀಕ್ಷೆಗೆ ಬರುವುದು ಕಡಿಮೆಯಾಗಿದೆ. ಆದರೆ ಇದೀಗ ಜ್ವರ, ನೆಗಡಿ ಇದ್ದವರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಹಾಗಾಗಿ ದಿನಕ್ಕೆ 400 ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೂ ಸ್ವ್ಯಾಬ್ ಪರೀಕ್ಷೆ ಮಾಡಲಾಗು ತ್ತದೆ. ಅದಕ್ಕೆ ಯಾರೂ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಮಹಾರಾಷ್ಟ್ರದಿಂದ ಬಂದ ಎಲ್ಲರನ್ನೂ ಪರೀಕ್ಷಿಸಲಾಗಿದೆ. ಮೈಸೂರು ಜಿಲ್ಲೆಗೆ ತಮಿಳುನಾಡು ಮತ್ತು ಕೇರಳದಿಂದ ಹೆಚ್ಚು ಮಂದಿ ಬಂದಿದ್ದಾರೆ. ಮಹಾರಾಷ್ಟ್ರದಿಂದ ಮೈಸೂರಿಗೆ ಬರುವುದಾಗಿ 400 ಮಂದಿ ಅರ್ಜಿ ಹಾಕಿದ್ದರು. ಸದ್ಯ 200 ಮಂದಿ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

Translate »