ಮೈಸೂರು ತಾಲೂಕಿನ 20 ಗ್ರಾಪಂಗಳಲ್ಲಿ ಶೀಘ್ರ ಸ್ವಚ್ಛತಾ ಅಭಿಯಾನ
ಮೈಸೂರು

ಮೈಸೂರು ತಾಲೂಕಿನ 20 ಗ್ರಾಪಂಗಳಲ್ಲಿ ಶೀಘ್ರ ಸ್ವಚ್ಛತಾ ಅಭಿಯಾನ

June 7, 2020

ಮೈಸೂರು, ಜೂ.6- ಇಲ್ಲಿಯವರೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಮಾತ್ರ ಸ್ವಚ್ಛತೆಗೆ ಆದ್ಯತೆ ನೀಡ ಲಾಗುತ್ತಿತ್ತು. ಇದೀಗ ಮೈಸೂರು ತಾಲೂ ಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.

ಮೈಸೂರು ತಾಲೂಕಿನ 37 ಗ್ರಾಮ ಪಂಚಾಯ್ತಿಗಳಲ್ಲಿ 20ರಲ್ಲಿ `ಕಸಮುಕ್ತ ಗ್ರಾಮ’ ಶೀರ್ಷಿಕೆಯಡಿ ಸ್ವಚ್ಛತಾ ಅಭಿಯಾನ ನಡೆಯಲಿದ್ದು, ಜುಲೈ ಕೊನೆವಾರ ಅಥವಾ ಆಗಸ್ಟ್ ಮೊದಲ ವಾರ ಯೋಜನೆಗೆ ಜನಪ್ರತಿನಿಧಿಗಳ ಸಮ್ಮುಖ ಚಾಲನೆ ನೀಡ ಲಾಗುವುದು ಎಂದು ಮೈಸೂರು ತಾಪಂ ಇಓ ಕೃಷ್ಣಕುಮಾರ್ ಶನಿವಾರ `ಮೈಸೂರು ಮಿತ್ರ’ನಿಗೆ ತಿಳಿಸಿದರು.

5.5 ಕೋಟಿ ರೂ. ಯೋಜನೆ: `ಸ್ವಚ್ಛ ಭಾರತ್’ ಯೋಜನೆಯಡಿ ಈ ಅಭಿಯಾನಕ್ಕೆ 5.50 ಕೋಟಿ ರೂ. ವೆಚ್ಚ ಅಂದಾಜು ಮಾಡ ಲಾಗಿದ್ದು, ಮೊದಲ ಕಂತಿನಲ್ಲಿ 4.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದ 1 ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗಿದೆ. ಈ ಅನುದಾನದಲ್ಲಿ 20 ಗ್ರಾ.ಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಪೌರಕಾರ್ಮಿಕರ ನೇಮಕ ಹಾಗೂ ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗೂ 16 ಲೀ. ಸಾಮಥ್ರ್ಯದ 2 ಬಕೆಟ್‍ಗಳ ವಿತರಣೆ ಹಾಗೂ ಶೌಚಗುಂಡಿಯಿಂದ ತ್ಯಾಜ್ಯತೆಗೆ ಯುವ 3 ಯಂತ್ರಗಳನ್ನು ಖರೀದಿಸುವ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಗುರುತು: ಮೈಸೂರು ತಾಲೂಕು ವ್ಯಾಪ್ತಿಯ ಇಲ ವಾಲ, ಬೋಗಾದಿ, ದೇವಲಾಪುರ, ವರುಣಾ, ಜಯಪುರ, ಗುಂಗ್ರಾಲ್ ಛತ್ರ, ಧನುಗಳ್ಳಿ, ಚಾಮುಂಡಿಬೆಟ್ಟ, ದೂರ, ಹಾರೋಹಳ್ಳಿ, ಕಡಕೊಳ, ಮಾರ್ಬಳ್ಳಿ, ಕೂರ್ಗಳ್ಳಿ ಸೇರಿ ದಂತೆ 20 ಗ್ರಾಪಂ ವ್ಯಾಪ್ತಿಯಲ್ಲಿ ಈಗಾ ಗಲೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಇದರ ಅಭಿವೃದ್ಧಿಗೆ ರಾಜ್ಯ ಸರ್ಕಾರ ತಲಾ 20 ಲಕ್ಷ ರೂ. ಅನು ದಾನ ನಿಗದಿಪಡಿಸಿದ್ದು, ಸದ್ಯ 10 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ. ಉಳಿದ 6 ಗ್ರಾಪಂಗಳಿಗೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಅಗತ್ಯ ದಾಖಲೆಗಳೊಂದಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ವಾರ್ಷಿಕ 250 ರೂ. ತೆರಿಗೆ ವಿಧಿಸಲು ಚಿಂತನೆ: ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ತೆರಳಿ ಕಸ ಸಂಗ್ರಹಿಸು ವಂತೆ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲೂ ಕಸ ಸಂಗ್ರಹಣೆಗೆ 3-4 ಪೌರಕಾರ್ಮಿಕರ ನೇಮಕಕ್ಕೂ ಆದ್ಯತೆ ನೀಡಲಾಗಿದೆ. ಇದರ ನಿರ್ವಹಣೆಗಾಗಿ ವಾರ್ಷಿಕ 250 ರೂ. ತೆರಿಗೆ ನಿಗದಿ ಪಡಿಸಲು ಚಿಂತನೆ ನಡೆದಿದೆ. ಆದರೆ, ಈ ತೀರ್ಮಾನ ಕೈಗೊಳ್ಳಬೇಕಾ ದರೆ ಜನಪ್ರತಿನಿಧಿಗಳ ಮುಂದಿನ ಸಭೆಯಲ್ಲಿ ನಿರ್ಣಯವಾಗಬೇಕು. ತ್ಯಾಜ್ಯ ವಿಲೇ ವಾರಿಗೆ (ಪ್ರತಿ ಗ್ರಾಪಂ ವ್ಯಾಪ್ತಿಗೆ ಒಂದ ರಂತೆ) ಮಿನಿ ಟಿಪ್ಪರ್, 30 ಲಕ್ಷ ರೂ. ವೆಚ್ಚದಲ್ಲಿ 3 ಸಕ್ಕಿಂಗ್(ಹೀರುವ) ಮಿಷನ್ ಖರೀದಿಗೆ ಕ್ರಮವಹಿಸಲಾಗಿದೆ ಎಂದರು.

ಈ ಯೋಜನೆ ಅನುಷ್ಠಾನಕ್ಕೆ ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇ ಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಜಿಪಂ ಸಿಇಓ ಪ್ರಶಾಂತ ಕುಮಾರ್ ಮಿಶ್ರಾ ಅವರ ಮುತುವರ್ಜಿಯೇ ಕಾರಣ ಎಂದು ಕೃಷ್ಣಕುಮಾರ್ ವಿವರಿಸಿದರು.

42 ಸ್ಮಶಾನಗಳ ಅಭಿವೃದ್ಧಿಗೆ ಕ್ರಮ: ಮೈಸೂರು ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 62 ಸಶ್ಮಾನಗಳ ಅಭಿವೃದ್ಧಿಗೆ ಬೇಡಿಕೆ ಬಂದಿತ್ತು. ಇದರಲ್ಲಿ 42 ಸ್ಮಶಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇತರೆ ಸ್ಮಶಾನಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.

ಎಸ್.ಪಿ. ನಂಜಪ್ಪ

Translate »