ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ
ಮೈಸೂರು

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ

October 4, 2018

ಮೈಸೂರು: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 15 ಗ್ಯಾಸ್ ಸಿಲಿಂಡರ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಅಜೀಜ್‍ಸೇಠ್‍ನಗರದ ನಿವಾಸಿ ತೌಹಿದ್ ಪಾಷ ಬಿನ್ ಸೈಯದ್ ಇಬ್ರಾಹಿಂ(19) ಹಾಗೂ ಮಂಡಿಮೊಹಲ್ಲಾ ನಿವಾಸಿ ಮೊಹಮದ್ ಫಾಜೀಲ್ ಬಿನ್ ಫೈಯಾಜ್ ಅಹಮದ್(28) ಬಂಧಿತರು. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಜೀಜ್‍ಸೇಠ್‍ನಗರದ ಬೀಡಿ ಕಾಲೋನಿಯ ಫಾರೂಖಿಯ ಪಿಯು ಕಾಲೇಜ್ ಬಳಿ ಯಿರುವ ಮಳಿಗೆಯಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು, ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಇಂಡಿಯನ್ ಕಂಪೆನಿಯ ಗೃಹ ಬಳಕೆಯ 13, ವಾಣಿಜ್ಯ ಬಳಕೆಯ 2 ಗ್ಯಾಸ್ ಸಿಲಿಂಡರ್ ಹಾಗೂ 1,220 ರೂ. ನಗದು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »