ಹಳೇ ಪಿಂಚಣಿ ಯೋಜನೆ ಜಾರಿಗೆ: ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನ
ಹಾಸನ

ಹಳೇ ಪಿಂಚಣಿ ಯೋಜನೆ ಜಾರಿಗೆ: ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನ

October 4, 2018

ಹಾಸನ: ಹೊಸ ಪಿಂಚಣಿ ರದ್ದು ಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಂತೆ ಒತ್ತಾಯಿಸಿ `ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಶೀರ್ಷಿಕೆಯಡಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾ ಕಾರ್ಯಕರ್ತರು ನಗರದಲ್ಲಿ ಭಾರೀ ಮೌನ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಳೇ ಪಿಂಚಣಿ ಯೋಜನೆ ಜಾರಿ ತರುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಎನ್‍ಪಿ ಎಸ್ ನೌಕರರ ಸಂಘ ಕರೆ ನೀಡಿದ್ದ `ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನಕ್ಕೆ ನಗರದ ಜಿಲ್ಲಾ ಘಟಕದಿಂದ ಬೆಂಬಲ ವ್ಯಕ್ತ ಪಡಿಸಿ ಮೌನ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ ದಿಂದ ಮೌನ ಮೆರವಣಿಗೆ ಹೊರಟ ನೌಕ ರರು, ಹೇಮಾವತಿ ಪ್ರತಿಮೆ, ಬಿಎಂ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ದರಲ್ಲದೆ, ಜಿಲ್ಲಾಡಳಿತ ಆವರಣದಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಕೇಂದ್ರ 2006, ಏ.1ರಂದು ಸರ್ಕಾರಿ ಸೇವೆಗೆ ನೇಮಕವಾಗಿರುವ ನೌಕರರಿಗೆ ನಿಶ್ಚಿತ ಪಿಂಚಣಿ ಪದ್ಧತಿ ರದ್ದುಪಡಿಸಿ ನೂತನ ಪಿಂಚಣಿ ಎನ್‍ಪಿಎಸ್ ಯೋಜನೆಯನ್ನು ಜಾರಿಗೆ ತಂದಿತು. ಇದು ನೌಕರರ ಸಂಧ್ಯಾ ಕಾಲದ ಜೀವನವನ್ನು ಅಭದ್ರತೆಗೆ ತಳ್ಳಲು ಕಾರಣವಾಗಿದೆ. ಅಲ್ಲದೆ ಪ್ರಸ್ತುತ ನಿವೃತ್ತಿ ಹೊಂದಿರುವ ನೌಕರರು ಕನಿಷ್ಠ ಪಿಂಚಣಿ ಪಡೆಯದೆ ಜೀವನ ನಿರ್ವಹಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ನೂತನ ಪಿಂಚಣಿ ಯೋಜನೆ ಜಾರಿ ಯಿಂದ ಮುಂದೆ ನೌಕರಿಗೆ ಎಷ್ಟು ಪಿಂಚಣಿ ಲಭ್ಯವಾಗುತ್ತದೆ ಎಂಬ ಮಾಹಿತಿಯೂ ಸಿಗುತ್ತಿಲ್ಲ. ಇದೊಂದು ರೀತಿ ಮಾರಕ ಪಿಂಚಣಿ ಯೋಜನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿ ಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಜಿ.ರವಿ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ವೇಣುಗೋಪಾಲ್, ತಾಲೂಕು ಅಧ್ಯಕ್ಷ ಭಾನುಪ್ರಕಾಶ್, ಸಂಘಟನಾ ಕಾರ್ಯದರ್ಶಿ ಪ್ರಸಾದ್ ಇತರರಿದ್ದರು.

ಬೇಲೂರು: ಇಂದು ರಾಜ್ಯಾದ್ಯಂತ ಏಕಕಾಲಕ್ಕೆ ಕರೆ ನೀಡಿದ್ದ `ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನ ಬೆಂಬ ಲಿಸಿ ತಾಲೂಕು ಘಟಕದ ಕಾರ್ಯಕರ್ತರು ಬೃಹತ್ ರಕ್ತದಾನ ಶಿಬಿರ ಹಾಗೂ ಮೌನ ಮೆರವಣಿಗೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

ಪಟ್ಟಣದ ಚೆಸ್ಕಾ ಕಚೇರಿ ಮುಂಭಾಗ ಬೃಹತ್ ರಕ್ತದಾನ ಮಾಡುವ ಮೂಲಕ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾ ರಕ್ಕೆ ಬಿಸಿ ಮುಟ್ಟಿಸಿದರು. ತಾಪಂ ಅಧ್ಯಕ್ಷ ಪಿ. ಎಸ್.ಹರೀಶ್ ತಾವೇ ಸ್ವಪ್ರೇರಿತವಾಗಿ ರಕ್ತದಾನ ಮಾಡಿ, ಸರ್ಕಾರಿ ನೌಕರರ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿ ಸಿದರು. ಇದಕ್ಕೂ ಮುನ್ನ ಹೊಸ ಪಿಂಚಣಿ ರದ್ದುಗೊಳಿಸಿ ಹಳೇ ಪಿಂಚಣಿಯನ್ನೇ ಜಾರಿ ಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಕಾರ್ಯ ಕರ್ತರು ಪಟ್ಟಣದಲ್ಲಿ ಭಾರೀ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲೋಕೇಗೌಡ, ತಾಲೂಕು ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಅಮೃತ್, ಕಾರ್ಯ ದರ್ಶಿ ಹೇಮಂತ್ ಕುಮಾರ್, ಗೌರವ ಸಲಹೆಗಾರ ಭದ್ರೇಗೌಡ ಹಾಗೂ ನಿರ್ದೇ ಶಕ ನಿತೀಶ್, ಆರೋಗ್ಯಾಧಿಕಾರಿ ಡಾ. ಯೋಗೀಶ್, ಶಿಕ್ಷಕರಾದ ಆನಂದ್, ಮಂಜು ನಾಥ್, ಗುರುರಾಜು ಹಾಜರಿದ್ದರು.

Translate »