ಅವಕಾಶ ಸಿಕ್ಕರೆ ಜನಸೇವೆಗೆ ಸಿದ್ಧ: ಪ್ರಜ್ವಲ್ ರೇವಣ್ಣ
ಹಾಸನ

ಅವಕಾಶ ಸಿಕ್ಕರೆ ಜನಸೇವೆಗೆ ಸಿದ್ಧ: ಪ್ರಜ್ವಲ್ ರೇವಣ್ಣ

October 4, 2018

ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಅವಕಾಶ ಕೊಟ್ಟರೇ ಜನರ ಸೇವೆ ಮಾಡಲು ಸಿದ್ಧನಿದ್ದೇನೆ ಎಂದು ಜೆಡಿಎಸ್‍ನ ಯುವ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ತಿಳಿಸಿದರು.

ನಗರದ ಹಳೇ ಬಸ್‍ನಿಲ್ದಾಣ ಬಳಿ ಪ್ರತಿಷ್ಠಾಪಿಸಿದ್ದ ಗಣಪತಿ ಪೆಂಡಾಲ್‍ಗೆ ಬುಧವಾರ ಮಧ್ಯಾಹ್ನ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಯಾವ ಭಾಗದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಹಿರಿಯರು ತೀರ್ಮಾನಿಸುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಯಾರ ಹೆಸರು ಸೂಚಿಸಿದರೂ ಅದಕ್ಕೆ ನನ್ನ ಸಮ್ಮತಿ ಇರುತ್ತದೆ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿರುತ್ತೇನೆ. ಹಾಸನ ನನ್ನ ಪುಣ್ಯಭೂಮಿ ಆಗಿರುವುದರಿಂದ ಈ ಭಾಗದಲ್ಲೇ ಸ್ಪರ್ಧೆ ಮಾಡಲು ಅವಕಾಶ ದೊರಕಿದರೇ ತುಂಬ ಸಂತೋಷವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ನಾನು ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಆದರೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೇ ಹೇಳಿಕೆ ನೀಡಿದ್ದು, ಅವರ ಮಾತಿನಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಇದೇ ವೇಳೆ ಪ್ರಜ್ವಲ್ ರೇವಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಹೆಚ್.ನಾಗರಾಜು, ಕಾರ್ಯದರ್ಶಿ ಚನ್ನವೀರಪ್ಪ, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗಿರೀಶ್ ಚನ್ನವೀರಪ್ಪ, ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನಿಲ್ ಕುಮಾರ್, ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್ ಹಾಗೂ ಜೆಡಿಎಸ್ ಮುಖಂಡರು ಹಾಗೂ ಬೆಂಬಲಿಗರು ಹಾಜರಿದ್ದರು.

Translate »