ಅಕ್ರಮ ಮರಳುಗಾರಿಕೆ 3 ಲಾರಿ, ಯಾಂತ್ರಿಕ ದೋಣಿ ವಶ
ಕೊಡಗು

ಅಕ್ರಮ ಮರಳುಗಾರಿಕೆ 3 ಲಾರಿ, ಯಾಂತ್ರಿಕ ದೋಣಿ ವಶ

May 3, 2021

ಮಡಿಕೇರಿ, ಮೇ 2- ಸೋಮವಾರಪೇಟೆ ತಾಲೂಕಿನ ಹಂಪಾಪುರದಲ್ಲಿ ಹೇಮಾವತಿ ಹಿನ್ನೀರಿನಲ್ಲಿ ಅಕ್ರಮವಾಗಿ ಮರಳು ತೆಗೆ ಯುತ್ತಿದ್ದ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಂಟಿ ದಾಳಿ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಯಾಂತ್ರಿಕ ದೋಣಿ ಮತ್ತು 2 ಲಾರಿ ಹಾಗೂ ಪರ ವಾನಗಿ ಇಲ್ಲದೇ ಜಲ್ಲಿಕಲ್ಲು ಸಾಗಿಸುತ್ತಿದ್ದ 1 ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕೊಡ್ಲಿಪೇಟೆ ಉಪ ಠಾಣೆ ಮತ್ತು ಶನಿವಾರಸಂತೆ ಪೊಲೀಸ್ ಠಾಣೆ ಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಹಂಪಾಪುರ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ಅನಧಿಕೃತವಾಗಿ ಯಾಂತ್ರಿಕ ದೋಣಿ ಬಳಸಿ ಮರಳು ತೆಗೆಯುತ್ತಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಾರ್ವಜನಿಕ ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳ ಸೂಚನೆಯ ಮೇರೆಗೆ ಸೋಮವಾರಪೇಟೆ ಹಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿ ಕಾರಿಗಳಾದ ಕು. ರೋಜಾ, ಲೋಯಲ್, ರಾಹುಲ್, ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಕಂದಾಯ ಇಲಾಖೆ ಅಧಿಕಾರಿಗಳು ಅತ್ತ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಅನಧಿಕೃತ ವಾಗಿ ಮರಳು ತೆಗೆಯುತ್ತಿರುವುದು ಕಂಡು ಬಂದಿದೆ. ಬಳಿಕ ಮರಳು ತೆಗೆಯಲು ಬಳಸಿದ್ದ ಯಾಂತ್ರಿಕ ದೋಣಿ ಮರಳನ್ನು ಸಾಗಿಸಲು ಬಳಸಿದ್ದ 2 ಲಾರಿಗಳನ್ನು ವಶಕ್ಕೆ ಪಡೆದು ಕೊಡ್ಲಿ ಪೇಟೆ ಉಪ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸರಕಾರದ ಯಾವುದೇ ಪರವಾನಗಿ ಇಲ್ಲದೇ ಜಲ್ಲಿ ಕಲ್ಲು ಸಾಗಿಸುತ್ತಿದ್ದ 1 ಲಾರಿಯನ್ನು ಕೂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಶನಿ ವಾರಸಂತೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

Translate »