ಸಿದ್ದಾಪುರದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಜನರು
ಕೊಡಗು

ಸಿದ್ದಾಪುರದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಜನರು

May 3, 2021

ಸಿದ್ದಾಪುರ, ಮೇ 2- ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿ ನಲ್ಲಿ ಸರ್ಕಾರ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆಯಾದರೂ ಜನರು ನಿಯಮಗಳನ್ನು ಗಾಳಿಗೆ ತೂರಿ ನೂಕು ನುಗ್ಗಲಿನಲ್ಲಿ ಅಗತ್ಯ ವಸ್ತು ಗಳನ್ನು ಖರೀದಿಸಲು ಮುಗಿ ಬೀಳು ತ್ತಿದ್ದ ದೃಶ್ಯ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಕಂಡು ಬಂತು. ಭಾನುವಾರದ ಸಂತೆ ಮಾರುಕಟ್ಟೆಯನ್ನು ಬಂದು ಮಾಡಲಾಗಿ ತ್ತಾದರೂ ಬಸ್ ನಿಲ್ದಾಣದಲ್ಲಿ ರಸ್ತೆ ಬದಿ ವ್ಯಾಪಾರ ಸೇರಿದಂತೆ ಅಂಗಡಿ ಮುಂಗಟ್ಟು ಗಳ ವ್ಯಾಪಾರ ವಹಿವಾಟು ಜೋರಾಗಿತ್ತು.

ಸುತ್ತಮುತ್ತಲ ಗ್ರಾಮಗಳಿಂದ ಬಂದ ಸಾವಿರಾರು ಕಾರ್ಮಿಕರು ಹಾಗೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸುವ ವುದರ ಮೂಲಕ ಸಿದ್ಧಾಪುರ ಪಟ್ಟಣದಲ್ಲಿ ಗುಂಪುಗುಂಪಾಗಿ ಕಾಣಿಸಿಕೊಂಡರು.

ಪೆÇಲೀಸ್ ವಾಹನದಲ್ಲಿ ಮೈಕಿನ ಮೂಲಕ ನಿಯಮ ಪಾಲಿಸುವಂತೆ ಮನವಿ ಮಾಡಲಾ ದರೂ ಕ್ಯಾರೇ ಎನ್ನದ ಜನರು ನೂಕುನುಗ್ಗಲಿ ನಲ್ಲೇ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಬಸ್ ಸಂಚಾರ ಇಲ್ಲದ ಕಾರಣ ಖಾಲಿ ಯಾಗಿದ್ದ ಬಸ್ ನಿಲ್ದಾಣದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ತೊಡಕಾಗಿತ್ತು.
ಪಂಚಾಯಿತಿ ಅಧ್ಯಕ್ಷೆ ತುಳುಸಿ ರೀನಾ ಮಾತ್ರ ಲಾಠಿ ಹಿಡಿದು ಅಂಗಡಿ ಮುಂಗಟ್ಟು ಗಳ ಮುಂದೆ ಜಮಾಯಿಸಿದ್ದ ಜನರ ನಿಯಂ ತ್ರಣಕ್ಕೆ ಮುಂದಾದರು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೋವಿಡ್ ಟಾಸ್ಕ್ ಪೆÇೀರ್ಸ್ ಸಮಿತಿ ರಚಿಸಲಾಗಿದ್ದರೂ ಜಾಗೃತಿ ಹಾಗೂ ನಿಯಂತ್ರಣಕ್ಕೆ ಮುಂದಾಗದಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ, ನೆಲ್ಯಹುದಿಕೇರಿ ವ್ಯಾಪ್ತಿ ಯಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿರುವ ಜನರು ಸುರಕ್ಷತೆ ಪಾಲನೆ ಮಾಡದೆ ಗ್ರಾಮದಲ್ಲೆಲ್ಲ ಸುತ್ತಾಡು ತ್ತಿದ್ದು ಕಂಟೋನ್ಮೆಂಟ್ ಝೋನ್ ನಲ್ಲಿ ರುವವರು ಪಟ್ಟಣದಲ್ಲಿ ಕಾಣಿಸಿಕೊಂಡರು.
ಪೆÇೀಲಿಸ್, ಆರೋಗ್ಯ ಇಲಾಖೆ ಹಾಗೂ ಪಂಚಾಯ್ತಿ ಟಾಸ್ಕ್ ಪೆÇೀರ್ಸ್ ಸಮಿತಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊರೊನದಿಂದ ಅಪಾಯಕಾರಿ ಬೆಳವಣಿಗೆ ಸಂಭವಿಸುವ ಸಾಧ್ಯತೆಯಿದ್ದು ಕೂಡಲೆ ಎಚ್ಚೆತ್ತು ಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಕೃಷÀ್ಣ ಒತ್ತಾಯಿಸಿದ್ದಾರೆ.

Translate »