ಕೊಡಗಲ್ಲಿ ಕೊರೊನಾ ಸೋಂಕು ಏರಿಕೆ; ಕೈ ಚೆಲ್ಲಿ ಕುಳಿತಿರುವ ಸರ್ಕಾರ
ಕೊಡಗು

ಕೊಡಗಲ್ಲಿ ಕೊರೊನಾ ಸೋಂಕು ಏರಿಕೆ; ಕೈ ಚೆಲ್ಲಿ ಕುಳಿತಿರುವ ಸರ್ಕಾರ

May 3, 2021

ಮಡಿಕೇರಿ, ಮೇ 2- ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕೊಡಗು ಜಿಲ್ಲೆಯಲ್ಲೂ ಪರಿಸ್ಥಿತಿ ಕೈಮೀರುತ್ತಿದೆ. ಒಂದೇ ದಿನದಲ್ಲಿ 7-8 ಸೋಂಕಿತರು ಸಾವ ನ್ನಪ್ಪುತ್ತಿದ್ದು, ಸರ್ಕಾರ ಕೈಚೆಲ್ಲಿ ಕುಳಿತಂತೆ ಕಂಡು ಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಕೇವಲ 5 ರಿಂದ 6 ಲಕ್ಷ ಜನ ಸಂಖ್ಯೆ ಹೊಂದಿರುವ ಜಿಲ್ಲೆಯಾಗಿದೆ. ಆದರೆ ಇಂದಿಗೂ 4042 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಸಾವಿನ ಸಂಖ್ಯೆ 120ಕ್ಕೆ ಏರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈ ಸಂದಿಗ್ಧ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ವೈದ್ಯಕೀಯ ವ್ಯವಸ್ಥೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಕಾಳಜಿ ಇಲ್ಲ : ಜಿಲ್ಲೆಯ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗು ತೊರೆದು ಕೋವಿಡ್ ಸೋಂಕಿತರ ರಕ್ಷಣೆಗಾಗಿ ರಾತ್ರಿ, ಹಗಲೆನ್ನದೆ ಶ್ರಮಿಸುತ್ತಿ ದ್ದಾರೆ. ಆದರೆ ಸರ್ಕಾರ ಮಾತ್ರ ಎಲ್ಲ ವನ್ನೂ ಅಧಿಕಾರಿಗಳ ಮೇಲೆ ಹಾಕಿ ಜವಾ ಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕೊಡಗಿನ ಉಸ್ತುವಾರಿ ಸಚಿವರು ಇಲ್ಲಿನ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿಯನ್ನು ತೋರು ತ್ತಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಕೂಡ ಉಸ್ತುವಾರಿ ಸಚಿ ವರು ಬರುವಾಗ ಬಂದು ಹೋಗು ತ್ತಾರೆಯೇ ಹೊರತು ಜಿಲ್ಲೆಯ ಮೇಲೆ ಹೆಚ್ಚಿನ ಆಸಕ್ತಿ ವಹಿಸಿ ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಕ್ಷಣ ಉಸ್ತುವಾರಿ ಸಚಿವರು ಹಾಗೂ ಸಂಸದರು ಜಿಲ್ಲೆಯ ಆಸ್ಪತ್ರೆಗಳಿಗೆ ಬೇಕಾ ಗಿರುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡಲು ಕ್ರಮ ಕೈಗೊಳ್ಳಬೇಕು, ಕೋವಿಡ್ ಪರೀಕ್ಷೆಗೆ ಮತ್ತು ಲಸಿಕೆ ಪಡೆಯಲು ಬರುತ್ತಿ ರುವವರಿಗೆ ಆಗುತ್ತಿರುವ ಅನಾನುಕೂಲತೆ ಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಬಿಸಿಲಿನಲ್ಲಿ ರೋಗಿಗಳು: ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಪ್ರತಿದಿನ 500ಕ್ಕೂ ಅಧಿಕ ಮಂದಿ ಕೋವಿಡ್ ಪರೀಕ್ಷೆಗಾಗಿ ಆಗ ಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ಸುಡು ಬಿಸಿಲಿನಲ್ಲಿ ನಿಲ್ಲುತ್ತಿರುವ ರೋಗಿಗಳಿಗೆ ನೆರಳು ಮತ್ತು ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆಯನ್ನು ಮಾಡಿಲ್ಲ. ಅನೇಕರು ಬೆಳಗ್ಗೆ ಬಂದವರು ಸಂಜೆಯವರೆಗೆ ಕಾದು ಕುಳಿತು ಕೊಳ್ಳುತ್ತಿರುವ ದೃಶ್ಯಗಳೂ ಕಂಡು ಬಂದಿದೆ. ಉಪಹಾರ ನೀಡಲಾಗುತ್ತದೆಯಾದರೂ ಮಧುಮೇಹ ಖಾಯಿಲೆ ಇರುವವರಿಗೆ ಒಗ್ಗುವಂತಹ ಆಹಾರ ಪದಾರ್ಥವನ್ನು ನೀಡಲಾಗುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ. ಆದ್ದರಿಂದ ಜಿಲ್ಲಾ ಡಳಿತ ಕೋವಿಡ್ ಪರೀಕ್ಷೆಗೆಂದು ಬರುವ ರೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಶುದ್ಧ ಕುಡಿಯುವ ಬಿಸಿ ನೀರು, ನೆರಳು ಮತ್ತು ಕುರ್ಚಿಗಳ ವ್ಯವಸ್ಥೆಯನ್ನು ಮಾಡ ಬೇಕೆಂದು ವೀಣಾಅಚ್ಚಯ್ಯ ಆಗ್ರಹಿಸಿದ್ದಾರೆ.

ಹೊರಗೆ ಬರಬೇಡಿ: ಕೊಡಗು ಜಿಲ್ಲೆಗೆ ಅನೇಕರು ಬೆಂಗಳೂರಿನಿಂದ ಬಂದಿ ದ್ದಾರೆ, ಯಾವುದೇ ರೋಗ ಲಕ್ಷಣಗಳು ಇಲ್ಲವೆಂದು ಭಾವಿಸಿ ಅಡ್ಡಾಡುತ್ತಿರುವ ಮಾಹಿತಿ ಲಭಿಸಿದೆ. ಹೊರ ಜಿಲ್ಲೆಯಿಂದ ಬಂದವರಿಂದಲೇ ಜಿಲ್ಲೆಯಲ್ಲಿ ಸೋಂಕು ವ್ಯಾಪಿಸುತ್ತಿರುವ ಬಗ್ಗೆ ಆರೋಗ್ಯಾಧಿ ಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ. ಆದ್ದರಿಂದ ಬೆಂಗಳೂರು ಸೇರಿದಂತೆ ಇತ ರೆಡೆಯಿಂದ ಬಂದವರು ಮನೆಯಿಂದ ಹೊರ ಬಾರದೆ ಕನಿಷ್ಠ 2 ವಾರ ಮನೆಯಲ್ಲೇ ಉಳಿದು ಸೋಂಕು ವ್ಯಾಪಿಸುವುದನ್ನು ತಡೆಯಲು ಆಡಳಿತ ವ್ಯವಸ್ಥೆಗೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.
ಹೊರ ಜಿಲ್ಲೆಯಿಂದ ಬಂದವರು ನಿರ್ಲಕ್ಷ್ಯ ವಹಿಸಿದರೆ ಮನೆಯಲ್ಲಿ ರುವವರಿಗೆ ಮಾತ್ರವಲ್ಲದೆ ಇಡೀ ಊರಿಗೆ ಸೋಂಕು ತಗಲಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.

Translate »