ಕೊಡಗಿಗೆ ಇನ್ನೂ 15 ದಿನ ಕೊರೊನಾ ಕಂಟಕ
ಕೊಡಗು

ಕೊಡಗಿಗೆ ಇನ್ನೂ 15 ದಿನ ಕೊರೊನಾ ಕಂಟಕ

May 3, 2021

ಮಡಿಕೇರಿ, ಮೇ 2-ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಹೆಚ್ಚಾಗಿದೆ. ಮುಂದಿನ 15 ದಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮೋಹನ್, ಮುಂದಿನ 15 ದಿನ ಕೊಡಗಿಗೆ ಕಂಟಕ ಎದುರಾಗುತ್ತದೆ ಎಂದು ಎಚ್ಚರಿಸಿದರು. ಕೊಡಗು ಜಿಲ್ಲೆಯಲ್ಲಿ ಅಂದಾಜು ಆರೂವರೆ ಲಕ್ಷ ಜನಸಂಖ್ಯೆ ಇದೆ. ಆದರೆ, ಬೆಂಗಳೂರಿನಿಂದ ಬಂದಿ ರುವ ಜನರು ಹಳ್ಳಿ ಸೇರಿಕೊಂಡಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಸ್ಪಷ್ಟಪಡಿ ಸಿದರು. ಜಿಲ್ಲೆಯಲ್ಲಿಯೂ ಕೊರೊನಾ ಸ್ಫೋಟ ವಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಮುಂದಿನ 15 ದಿನ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಮೋಹನ್ ಕುಮಾರ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ವೈದ್ಯರ ಕೊರತೆ: ಜಿಲ್ಲೆಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಫಿಜಿಷಿಯನ್, ಅನ ಸ್ತೇಷಿಯಾ ತಜ್ಞರ ಹುದ್ದೆಗಳು ಖಾಲಿ ಇದೆ. ಜಿಲ್ಲೆಗೆ ಒಬ್ಬರು ಫಿಜಿ ಷಿಯನ್ ಇದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ ಯಲ್ಲೂ ವೈದ್ಯರ ಕೊರತೆ ಕಾಡುತ್ತಿದೆ. ಅಷ್ಟೇ ಅಲ್ಲದೇ ಸೋಂಕಿನಿಂದ ಗಂಭೀರವಾಗಿ ಬಳಲು ವವರ ಚಿಕಿತ್ಸೆಗೂ ವೈದ್ಯರ ಕೊರತೆ ಹೆಚ್ಚಿದೆ ಎಂದು ಡಾ. ಮೋಹನ್ ಮಾಹಿತಿ ನೀಡಿದರು.

ಪಾಸಿಟಿವಿಟಿ ಏರಿಕೆ: ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೂ ಜನರು ತಕ್ಷಣವೇ ಆಸ್ಪತ್ರೆಗೆ ಬರುತ್ತಿಲ್ಲ. ತಮ್ಮ ಆರೋಗ್ಯ ಬಿಗಡಾಯಿಸಿದ ಬಳಿಕವೇ ಆಸ್ಪತ್ರೆಗೆ ಬರು ತ್ತಿದ್ದಾರೆ. ಅಷ್ಟರಲ್ಲಿ ಇಡೀ ಮನೆಯವರಿಗೆ ಸೋಂಕು ಹರಡಿಸುತ್ತಿದ್ದಾರೆ. ಇದು ಕೊಡಗಿ ನಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚುತ್ತಿರು ವುದಕ್ಕೆ ಕಾರಣವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಜನರು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ಮತ್ತಷ್ಟು ಕಂಟಕ ಕೊಡಗು ಜಿಲ್ಲೆಗೆ ಎದುರಾಗಲಿದೆ ಎಂದೂ ಡಾ.ಮೋಹನ್ ಆತಂಕ ವ್ಯಕ್ತಪಡಿಸಿದರು.

ಕೋವಿಡ್ ವಿವರ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 120ಕ್ಕೇರಿದೆ. ಕಳೆದ 24 ಗಂಟೆಯ ಅವಧಿಯಲ್ಲಿ (ಭಾನುವಾರ ಬೆಳಗಿನ 8 ಗಂಟೆಯವರೆಗೆ) ಒಟ್ಟು 8 ಮಂದಿ ಕೋವಿಡ್ ವೈರಸ್‍ನಿಂದ ಮೃತಪಟ್ಟಿದ್ದಾರೆ.

ಭಾನುವಾರ ಬೆಳಗೆ 8 ಗಂಟೆಗೆ ಹೊಸ ದಾಗಿ 532 ಕೋವಿಡ್-19 ಕೇಸ್‍ಗಳು ಪತ್ತೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ 221, ಸೋಮವಾರಪೇಟೆ 141 ಹಾಗೂ ವಿರಾಜಪೇಟೆಯಲ್ಲಿ 170 ಪ್ರಕರಣಗಳು ದೃಡಪಟ್ಟಿದೆ. ಈ ಪೈಕಿ 499 ಕೋವಿಡ್ ಕೇಸ್‍ಗಳು ಆರ್.ಟಿ.ಪಿ.ಸಿ.ಆರ್ ಮೂಲಕ ಹಾಗೂ 33 ಪ್ರಕರಣಗಳು ಆರ್.ಎ.ಟಿ. ಪರೀಕ್ಷೆಯಿಂದ ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 11,872 ಆಗಿದ್ದರೆ, 7712 ಮಂದಿ ಗುಣಮುಖರಾಗಿದ್ದಾರೆ. ಮಾತ್ರವಲ್ಲದೇ, 24 ಗಂಟೆಯ ಅವಧಿಯಲ್ಲಿ 293 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ 4042 ಸಕ್ರೀಯ ಪ್ರಕರಣಗಳಿದ್ದು, 459 ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ.

Translate »